ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ಆಡಳಿತದಲ್ಲಿ ಸಾಕಷ್ಟು ನಾಯಕರು ಬರ್ತಾರೆ ಸಾಕಷ್ಟು ನಾಯಕರು ಹೋಗುತ್ತಾರೆ ಆದರೆ ಕೆಲವು ನಾಯಕರು ಅವರು ಮಾಡುವ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳ ಕಾಯಕದ ಫಲದಿಂದಾಗಿ ಕ್ಷೇತ್ರದ ಜನರ ಮನದಾಳದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ,
ಮೇಲಿನ ಮಾತಿನ ಗಾಂಭೀರ್ಯತೆ ಮಾನ್ಯ ಶ್ರೀ ರಘುಮೂರ್ತಿ ಅವರಿಗೆ ಸಲುತದ್ದೇ,
.
Ragu Gowda Chitradurga: ರಘುಮೂರ್ತಿ ಅವರು ಚಳ್ಳಕೆರೆ ತಾಲ್ಲೂಕಿನ ಜನತೆಯ ವಿಶ್ವಾಸವನ್ನು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಣಲು ಬಯಸುತ್ತಿದ್ದಾರೆ,
ರಘುಮೂರ್ತಿ ಅವರು ಚಳ್ಳಕೆರೆ ಕ್ಷೇತ್ರದ ಶಾಸಕರಾದ ದಿನದಿಂದ ಸಮಯವನ್ನು ವ್ಯರ್ಥ ಮಾಡದೇ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರ ಸಂಪೂರ್ಣ ಕಾರ್ಯಕ್ಷಮತೆಯನ್ನು ಉಪಯೋಗಿಸಿರುವುದು ಕ್ಷೇತ್ರದ ಆಭಿವೃದಿಯಲ್ಲಿ ಮತ್ತು ಕ್ಷೇತ್ರದ ಜನರ ಉತ್ತಮ ಮಾತುಗಳಲ್ಲಿ ಕೇಳಬಹುದ್ದಾಗೀದೆ,
ನಾನು ಈ ಮುಂಚೆ ಕೆಲವುಬಾರಿ ಮಾನ್ಯ ರಘುಮೂರ್ತಿ ಅವರ ಕಾರ್ಯವೈಖರಿಯನ್ನು ನನ್ನ ಬರವಣಿಗೆಯ ಮುಖಾಂತರ ಜಿಲ್ಲೆಯ ಜನತೆಗೆ ಮನವರಿಕೆ ಮಾಡಿಕೊಟ್ಟಿರುವೆ,
ಮಾನ್ಯ ರಘುಮೂರ್ತಿ ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ಭಗವಂತ ಅವರಿಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಆಯುರಾರೋಗ್ಯ ನೀಡಿ ಜಿಲ್ಲೆಯ ಸಮಗ್ರ ಜನತೆಯ ಸೇವೆ ಮಾಡುವ ಅವಕಾಶ ಅವರಿಗೆ ಲಭಿಸಲಿ ಎಂದು ಜಿಲ್ಲೆಯ ಜನತೆಯ ಪರವಾಗಿ ಆಶಿಸೋಣ,
ರಘುಗೌಡ,