ಶಿವಮೊಗ್ಗದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಮೊಗ್ಗ ವತಿಯಿಂದ ಇಂದು ಮಹಾವೀರ್ ಗೋ ಶಾಲೆಯ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಮುಂಜಾನೆ ಪಂಚಗವ್ಯವನ್ನು ತಯಾರಿಸಿ ಎಲ್ಲಾ ಕಾರ್ಯಕರ್ತರು ಸ್ವೀಕರಿಸಿದರು ಹಾಗೂ ಪಂಚಗವ್ಯದ ಮಹತ್ವವನ್ನು ತಿಳಿಸಲಾಯಿತು. ೩೮೦ ಕ್ಕೂ ಹೆಚ್ಚು ಗೋವುಗಳಿರುವ ಈ ಗೋ ಶಾಲೆಯ ಎಲ್ಲಾ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೋ ಸೇವಾ ಜಿಲ್ಲಾ ಸಯೋಜಕ್ ಚಂದ್ರಶೇಖರ್ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನಾರಾಯಣ್ ಜಿ ವೆರ್ಣೇಕರ್, ಜಿಲ್ಲಾ ಸಹ ಕಾರ್ಯದರ್ಶಿ ಸಚೀನ್ ರಾಯ್ಕರ್, ಜಿಲ್ಲಾ ಸಯೋಜಕ್ ರಾಜೇಶ್ ನಗರಾಧ್ಯಕ್ಷ ಸತೀಶ್ ಮುಂಚೆ ಮನೆ, ಹಿರಿಯರಾದ ಜಗದೀಶ್ ಚಂದ್ರ, ನಗರ ಕಾರ್ಯದರ್ಶಿ ಸುಧಕರ್, ನಗರ ಉಪಾಧ್ಯಕ್ಷ ಆನಂದ್ ರಾವ್ ಜಾಧವ್, ನಗರ ಸಹ ಸಂಚಲಕ ನಾಗೇಶ್, ನಗರ ಗೋರಕ್ಷಾ ಪ್ರಮುಖ್ ಜನಾರ್ಧನ್, ಕೋಟೆ ಪ್ರಕಾಂಡದ ಅಧ್ಯಕ್ಷ ಅರವಿಂದ್ ರಾವ್ ಜಾಧವ್, ಕೋಟೆ ಪ್ರಕಾಂಡದ ಕಾರ್ಯದರ್ಶಿ ಕೃಷ್ಣ ಮೂರ್ತಿ, ಮಾಲತೇಶ್, ಪುಟ್ಟಣ್ಣ, ವಿಕಾಸ್, ಮಂಜು ಶೇಟ್, ಸುರೇಶ್ ಬಾಬು, ಕಿರಣ್, ಸಚಿನ್, ಮಧು, ಮಂಜು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *