ಕೊನೆಯ ದಿನ

2021-22ನೇ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ
ಬೆಳೆ ವಿಮೆ ಯೋಜನೆಯಡಿ ದಾವಣಗೆರೆ ತಾಲ್ಲೂಕಿಗೆ ಅಡಿಕೆ, ದಾಳಿಂಬೆ,
ಕೋಯ್ಲು ಹಂತದ ವೀಳ್ಯೆದೆಲೆ ಬೆಳೆಗಳು
ಅಧಿಸೂಚನೆಯಾಗಿದ್ದು, ತಾಲ್ಲೂಕಿನ ರೈತರಿಗೆ ವಿಮೆ ಮಾಡಿಸಲು
ಅವಕಾಶವಿದೆ.
ಅಡಿಕೆ ಬೆಳೆಗೆ ರೂ.1,28,000 ವಿಮಾ ಮೊತ್ತ ಇದ್ದು, ರೂ. 6400
ಪ್ರೀಮಿಯಂ ಇದೆ. ದಾಳಿಂಬೆ ಬೆಳೆಗೆ ರೂ.1,27,000 ವಿಮಾ ಮೊತ್ತವಿದ್ದು,
ರೂ. 6350 ಪ್ರಿಮಿಯಂ ನಿಗದಿಪಡಿಸಿದೆ. ವೀಳ್ಯದೆಲೆ ಬೆಳೆಗೆ ರೂ.1,17,000
ವಿಮಾ ಮೊತ್ತವಿದ್ದು, ರೂ.5850 ಪ್ರಿಮಿಯಂ ಇದ್ದು ಪ್ರಸಕ್ತ ಸಾಲಿನ
ಪಹಣಿ (ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಅಗತ್ಯ
ದಾಖಲಾತಿಯೊಂದಿಗೆ ವಿಮೆ ಮಾಡಿಸಬಹುದಾಗಿದೆ. ವಿಮೆ ಮಾಡಿಸಲು ಅಂತಿಮ
ದಿನಾಂಕ ಜೂ.30 ಕೊನೆಯಾಗಿರುತ್ತದೆ. ಜಿಲ್ಲೆಗೆ ಎಸ್‍ಬಿಐ ಜನರಲ್
ಇನ್ಸೂರೆನ್ಸ್ ಕಂಪನಿಯನ್ನು ವಿಮಾ ಸಂಸ್ಥೆಯನ್ನಾಗಿ ನಿಗದಿಪಡಿಸಲಾಗಿದೆ.
ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪದಿಂದ
ಹಾನಿಗೊಳಗಾಗುವ ಈ ಮೇಲಿನ ವಿಮೆ ಮೂಲಕ ಪರಿಹಾರ
ಪಡೆಯಬಹುದಾಗಿದೆ, ತಾಲ್ಲೂಕಿನ ಎಲ್ಲಾ ರೈತ ಬಾಂಧವರು ಕೂಡಲೇ
ತಮ್ಮ ಹತ್ತಿರದ ಬ್ಯಾಂಕ್ ಶಾಖೆ, ರೈತ ಸಂಪರ್ಕ ಕೇಂದ್ರ, ಆಥವಾ
ಸಾಮಾನ್ಯ  ಸೇವಾ ಕೇಂದ್ರಗಳಲ್ಲಿ ವಿಮೆಯ ಪ್ರಿಮಿಯಮ್ ಪಾವತಿಸಿ ವಿಮೆ
ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ಸಹಾಯಕ
ತೋಟಗಾರಿಕೆ ಅಧಿಕಾರಿಗಳಾದ ಪವನ್‍ಕುಮಾರ್, ಕಸಬಾ ಹೋಬಳಿ-
7022244152, ರವಿನಾಗಪ್ಪ, ಆನಗೋಡು-7019819101, ಏಕಾಂತ್,
ಮಾಯಕೊಂಡ 1-7899445111, ಅರುಣ್‍ರಾಜ್, ಮಾಯಕೊಂಡ-2-
9902866619 ಕ್ಕೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ
ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *