ಶಿವಮೊಗ್ಗ ತಾಲ್ಲೂಕಿನ ನಿಧಿಗೆ 1ನೇ ಹೋಬಳಿ ಹಸೂಡಿ ಗ್ರಾಮದ ಸರ್ವೇ ನಂಬರ್ 134 ರಲ್ಲಿ ಆಕಾರ್‍ಬಂದ್ ದಾಖಲಾತಿಯಂತೆ ಜಮೀನು ಇದ್ದು ಇದರ ಪೋಡಿ ದುರಸ್ತಿಗೆ ಕ್ರಮ ವಹಿಸಬೇಕಾಗಿದ್ದು ಖಾತೆದಾರರು ನಿಗದಿತ ದಾಖಲಾತಿಗಳನ್ನು ಒದಗಿಸಬೇಕಾಗಿರುತ್ತದೆ.
ಈ ಸರ್ವೇ ನಂಬರಿನಲ್ಲಿ ಜಮೀನು ಮಂಜೂರು ಮಾಡಲಾಗಿದ್ದು ಮಂಜೂರಿದಾರರ/ಕ್ರಯದಾರರ/ವಾರಸುದಾರರುಗಳ ಹೆಸರಿಗೆ ಖಾತೆ ಪಹಣಿ ದಾಖಲಾತಿ ನೀಡಲಾಗಿರುತ್ತದೆ. ಹಸೂಡಿ ಗ್ರಾಮದ ಸರ್ವೇ ನಂಬರ್ 134 ರಲ್ಲಿನ ಪ್ರಸ್ತುತ ಖಾತೆದಾರರ ಬಾಬ್ತು ಮಂಜೂರಾತಿ/ಅನುಭವದ ವಿಸ್ತೀರ್ಣಗಳನ್ನು ಗಣನೆಗೆ ತೆಗೆದುಕೊಂಡು ಅಳತೆ ಪೋಡಿ ದುರಸ್ತಿಗೆ ಕ್ಮ ಜರುಗಿಸಬೇಕಾಗಿರುತ್ತದೆ. ಪ್ರಯುಕ್ತ ಹಸೂಡಿ ಗ್ರಾಮದ ಸರ್ವೆ ನಂಬರ್ 134 ರ ಎಲ್ಲಾ ಖಾತೆದಾರರ ಬಾಬ್ತು ಮಂಜೂರಾತಿ/ಅನುಭವದ ವಿಸ್ತೀರ್ಣವನ್ನು ಗಣನೆಗೆ ತೆಗೆದುಕೊಂಡು ಅಳತೆ ದುರಸ್ತಿಗೆ ಕ್ರಮ ವಹಿಸಬಹುದಾಗಿರುತ್ತದೆ.
ಸರ್ವೆ ನಂ.134 ರ ಎಲ್ಲಾ ಖಾತೆದಾರರು ಈ ತಿಳುವಳಿಕೆಯ ದಿನಾಂಕದಿಂದ 30 ದಿನಗಳ ಒಳಗೆ ಅಥವಾ ದಿನಾಂಕ: 15-07-2021 ರೊಳಗೆ ಖಾತೆದಾರರು ತಾವು ಹೊಂದಿರುವ ಜಮೀನಿಗೆ ಸಂಬಂಧಿಸಿದಂತೆ ಕೆಳಕಂಡ ದೃಢೀಕೃತ ದಾಖಲಾತಿಗಳನ್ನು ಹೊಳೆಬೆನವಳ್ಳಿ ವೃತ್ತದ ಗ್ರಾಮ ಲೆಕ್ಕಿಗರಾದ ಶ್ರೀನಿವಾಸ ಮೊ.ಸಂ: 9980153834 ಇವರಿಗೆ ತಪ್ಪದೇ ಸಲ್ಲಿಸಬೇಕು.
ಸಾಗುವಳಿ ಚೀಟಿಯ ನಕಲು, ಜಮೀನು ಮಂಜೂರಾತಿ ಆದೇಶದ ನಕಲು/ನಕ್ಷೆ ನಕಲು, ಖಾತೆ ದಾಖಲಾತಿಯಾದ ಬಗ್ಗೆ ಸಂಬಂಧಪಟ್ಟ ಎಲ್ಲಾ ಮ್ಯುಟೇಶನ್ ದಾಖಲಾತಿಗಳು. ಹಕ್ಕು ವಿಲ್(ಮರಣ ಶಾಸನ ಪತ್ರ), ಕ್ರಯ ಪತ್ರದ ದಾಖಲಾತಿಗಳು(ತತ್ಸಂಬಂಧದ ಮ್ಯುಟೇಶನ್ ದಾಖಲಾತಿಗಳು). ಪಹಣಿ ದಾಖಲಾತಿಗಳು ಮಂಜೂರಾತಿಯಾದಂದಿನಿಂದ ಈ ತಹಲ್‍ವರೆಗೆ. ಇಸಿ ದಾಖಲಾತಿ ಖಾತೆ ದಾಖಲಾತಿಯಾದಾಗಿನಿಂದ ಈ ತಹಲ್‍ವರೆಗೆ. ಕರ್ನಾಟಕ ಭೂಸುಧಾರಣಾ ಕಾಯ್ದೆ 1961 ರ ಅಡಿಯಲ್ಲಿ ಅಭಿಬೋಗದಾರಿಗೆ-ನೋಂದಾಯಿತವಾಗಿದ್ದಲ್ಲಿ ಭೂನ್ಯಾಯ ಮಂಡಳಿಯ ತೀರ್ಪಿನ ನಕಲು/ನಮೂನೆ ಹಕ್ಕು ಪತ್ರದ ನಕಲು/ನಕ್ಷೆ ನಕಲು. ಖಾತೆ ದಾಖಲಾತಿಯಾಗಿರುವ ಜಮೀನಿಗೆ ಸಂಬಂಧಿಸಿದ ಕಂದಾಯಾಧಿಕಾರಿಗಳ/ವ್ಯವಹಾರ ನ್ಯಾಯಾಲಯ/ಉಚ್ಚ ನ್ಯಾಯಾಲಯದ ಆದೇಶ/ತೀರ್ಪುಗಳಿದ್ದಲ್ಲಿ ಅಂತಹ ಆದೇಶ/ತೀರ್ಪಿನ ನಕಲನ್ನು ಸಲ್ಲಿಸಬೇಕು.