ಎಸ್.ಎ.ರವೀಂದ್ರನಾಥ್

ಕೊರೊನಾ ವೈರಸ್ ಮನುಷ್ಯನಿಗೆ ಪರಿಸರ ಸಂರಕ್ಷಣೆ
ಅವಶ್ಯಕತೆಯ ಪಾಠ ಕಲಿಸಿದೆ. ಪರಿಸರ ನಾಶವೇ ಮನುಷ್ಯನ ಇಂದಿನ
ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಸಸ್ಯ ಸಂಕುಲವಿದ್ದರೆ ಮಾತ್ರ
ಮನುಕುಲಕ್ಕೆ ಒಳಿತು ಎಂದು ದಾವಣಗೆರೆ ಉತ್ತರ ಶಾಸಕ
ಎಸ್.ಎ.ರವೀಂದ್ರನಾಥ್ ಹೇಳಿದರು.
ದಾವಣಗೆರೆ ನಗರದ 33 ನೇ ವಾರ್ಡ್‍ನಲ್ಲಿ ಪಾಲಿಕೆ ಸದಸ್ಯ
ಕೆ.ಎಮ್.ವೀರೇಶ್ ಅವರು ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ
ಅಂಗವಾಗಿ ಉದ್ಯಾನವನದಲ್ಲಿ ಒಂದು ನೂರು ಗಿಡಗಳನ್ನು ನೆಡುವ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮಗಿಂದು
ಆಮ್ಲಜನಕದ ಮಹತ್ವ ಅರಿವಾಗಿದೆ. ನೈಸರ್ಗಿಕವಾಗಿ ಸಿಗುವ
ಆಮ್ಲಜನಕದ ಮೂಲವನ್ನು ನಾಶ ಮಾಡಿ ಕೃತಕ ಆಮ್ಲಜನಕದ
ಮೊರೆ ಹೋಗುವ ಪರಿಸ್ಥಿತಿ ಬಂದೊದಗಿದೆ. ಮುಂದಿನ ದಿನಗಳಲ್ಲಿ ಪರಿಸರ
ಸ್ನೇಹಿ ವಾತಾವರಣದ ಸೃಷ್ಟಿಗೆ ಪ್ರತಿಯೊಬ್ಬರೂ ಮುಂದಾಗಬೇಕು
ಎಂದರು.
      ಪಾಲಿಕೆ ಸದಸ್ಯ ಕೆ.ಎಮ್.ವೀರೇಶ್ ಮಾತನಾಡಿ, ವಿಶ್ವ ಸಂಸ್ಥೆಯು ಈ
ವರ್ಷ ಪರಿಸರ ವ್ಯವಸ್ಥೆಯ ಮರು ಸ್ಥಾಪನೆ ಎಂಬ ಘೋಷವಾಕ್ಯದ
ಮೂಲಕ ಪರಿಸರದ ಮೂಲ ವ್ಯವಸ್ಥೆಗೆ ತಕ್ಕನಾಗಿ ಪರಿಸರವನ್ನು
ಮರುಸ್ಥಾಪಿಸಬೇಕೆಂದು ಕರೆ ನೀಡಿದೆ. ಈಗಾಗಲೇ ಪರಿಸರ ನಾಶದಿಂದ
ಜಾಗತಿಕ ತಾಪಮಾನವು ಸತತವಾಗಿ ಹೆಚ್ಚಾಗುತ್ತಿದ್ದು, ಅಂತರ್ಜಲ
ಹಂತ ಹಂತವಾಗಿ ಕುಸಿಯುತ್ತಿದೆ. ಜೊತೆಗೆ ಆಮ್ಲಜನಕದ
ಕೊರತೆಯಾಗಿರುವುದು ನಮ್ಮ ಅನುಭವಕ್ಕೆ ಬರುತ್ತಿದೆ ಎಂದರು.
33 ನೇ ವಾರ್ಡ್ ಅನ್ನು ಹಸಿರು ಮತ್ತು ಸ್ವಚ್ಚಮಯವನ್ನಾಗಿ
ಮಾಡುವುದು ನನ್ನ ಕನಸಾಗಿದ್ದು, ನಾವೆಲ್ಲರೂ ಒಗ್ಗೂಡಿ ಪರಿಸರದ
ಸಂರಕ್ಷಣೆಗೆ ಮುಂದಾಗೋಣ. ಗಿಡಗಳನ್ನು ನೆಡುವುದಲ್ಲದೇ
ಅವುಗಳ ರಕ್ಷಣೆಗೆ ಮುಂದಾಗೋಣ. ಪರಿಸರದ
ಸುರಕ್ಷತೆಯೊಂದಿಗೆ ನಗರದ ಸ್ವಚ್ಛತೆಯನ್ನು
ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಆದ್ದರಿಂದ
ಪಾಲಿಕೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿ ಸಹಕರಿಸಬೇಕು ಎಂದು
ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಮಾಜಿ ಮುಖ್ಯ ಸಚೇತಕ
ಡಾ.ಎ.ಹೆಚ್.ಶಿವಯೋಗಿ ಸ್ವಾಮಿ, ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ
ಕೆ.ಎಮ್.ಸುರೇಶ್, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ
ಕೆ.ಜಿ.ಯಲ್ಲಪ್ಪ, ಲಿಂಗಪ್ಪ, ಎಲ್‍ಐಸಿ ರುದ್ರೇಶ್, ಕೂಲಂಬಿ ಬಸಣ್ಣ,
ಹೆಚ್.ಎಮ್.ಮಲ್ಲಿಕಾರ್ಜುನಪ್ಪ, ವಿ.ಸಿದ್ದೇಶ್ ಸೇರಿದಂತೆ ಮತ್ತಿತರರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *