ವಿಸ್ತರಣೆ

ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ
ಯೋಜನೆಯಡಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ
ಚಟುವಟಿಕೆಗಳನ್ನು ಕೈಗೊಳ್ಳಲು ಅರ್ಜಿ ಸಲ್ಲಿಸುವ ಅವಧಿಯನ್ನು
ಜುಲೈ 15 ರವರೆಗೆ ವಿಸ್ತರಿಸಲಾಗಿದೆ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹೊಸದಾಗಿ
ಮೀನುಕೃಷಿ ಕೊಳ ನಿರ್ಮಾಣ ಮಾಡಲು ಇಚ್ಚಿಸುವರು ಹಾಗೂ
ಮೀನುಗಾರಿಕೆಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಾದ ಆರ್.ಎ.ಎಸ್
ಘಟಕಗಳ ನಿರ್ಮಾಣ, ತಾಜಾ ಮೀನು ಮಾರಾಟ ಕೇಂದ್ರಗಳ ಸ್ಥಾಪನೆ,
ಮೀನು ಸಾಗಣೆ ಮತ್ತು ಮಾರಾಟ ವಾಹನಗಳ ಖರೀದಿಗೆ ಸಹಾಯಧನ
ಮತ್ತಿತರ ಚಟುವಟಿಕೆಗಳ ಸದುಪಯೋಗ ಪಡೆಯುವ ಸಲುವಾಗಿ
ಅರ್ಜಿ ಸಲ್ಲಿಸುವ ಅವಧಿಯನ್ನು ಜು.15 ರವರೆಗೆ ವಿಸ್ತರಿಸಲಾಗಿದೆ.
ಯೋಜನೆಗಳ ಸಹಾಯಧನ ಪಡೆಯಲು ಆಸಕ್ತ ಒಳನಾಡು
ಮೀನುಗಾರರು ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ
ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು
ಮೀನುಗಾರಿಕೆ ಉಪನಿರ್ದೇಶಕ ಗಣೇಶ್. ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *