ಕರೋನ ಸಮಯದಲ್ಲಿ ಎಲ್ಲಾ
ಅವಶ್ಯಕ ವಸ್ತುಗಳ ಬೆಲೆ
ಏರುತ್ತಿದ್ದು, ದಿನ ಬಳಕೆ ಮಾಡುವ
ದಿನಸಿ ಸಾಮಾನುಗಳು,
ತರಕಾರಿಗಳು, ಪೆಟ್ರೋಲ್, ಡೀಸಲ್,
ವಿದ್ಯುತ್, ಗ್ಯಾಸ್ಗಳ ಬೆಲೆ
ಏರಿಕೆÀಯಾಗಿ, ಮಧ್ಯಮ ವರ್ಗದ
ಜನರು, ಬಡವರು
ನಿತ್ರಾಣರಾಗುತ್ತಿದ್ದಾರೆ, ಪೆಟ್ರೋಲ್
ಬೆಲೆ ರೂ ನೂರರ ಗಡಿ ದಾಟಿದೆ,
ವಿದ್ಯುತ್ತಿನ ಬೆಲೆ ಮತ್ತೆ
ಜಾಸ್ತಿಯಾಗುತ್ತಿದೆ, ಗ್ಯಾಸಿನ ಬೆಲೆ
ಮೊದಲೇ ಏರಿಕೆÀಯಾಗಿ ಜನರ
ಏನನ್ನು ಮಾಡಲಾರದೇ
ಹೈರಾಣವಾಗಿದ್ದಾರೆ. ಈಗ ಜನರಿಗೆ
ಉಳಿದಿರುವ ಒಂದೇ ಮಾರ್ಗವೆಂದರೇ
ಅದು ಮಿತ ಬಳಕೆ ಮಾತ್ರ ಎಂದು
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ
ನುಡಿದರು.
ಅವರು ನಗರದ ತರಳಬಾಳು
ನಗರದ ಒಂದನೇ ಮುಖ್ಯರಸ್ತೆಯಲ್ಲಿ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು
ಮಲ್ಲನಕಟ್ಟೆ ಗ್ರಾಮ ಸಂಘದ
ಸಹಯೋಗದೊಂದಿಗೆ ಆಯೋಜಿಸಿದ್ದ “ಬೆಲೆ
ಏರಿಕೆಗೆ ಮದ್ದು ಮಿತಬಳಕೆ
ಮಾತ್ರ” ಬಗ್ಗೆ ಜನಜಾಗೃತಿ
ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಇನ್ನಾದರು ವಿದ್ಯುತ್ತ,
ಪೆಟ್ರೋಲ್, ಡೀಸೆಲ್, ಅಡುಗೆ
ಅನಿಲವನ್ನ ಹಿತಮಿತವಾಗಿ ಬಳಕೆ
ಮಾಡಬೇಕು. ಹೋರಾಟ ಮಾಡಿ ಬೆಲೆ
ಇಳಿಸಿಕೊಂಡರು ಸಹ ಅದು ಸ್ವಲ್ಪ ದಿನ
ಮಾತ್ರ ಸಾದ್ಯ. ಮತ್ತೆ ಬೆಲೆ ಏರಿಕೆ
ನೆಡೆದೆ ಬಿಡುತ್ತವೆ. ಯಾವ
ಹೋರಾಟಗಳು ಸಹ
ಯಶಸ್ವಿಯಾಗುತ್ತಿಲ್ಲ. ಹೋರಾಟ
ಮಾಡುವ ಶಕ್ತಿ, ಚೈತನ್ಯ ಜನರ ಬಳಿ
ಸಹ ಈಗ ಇಲ್ಲಾ. ಇದು ಕರೋನ
ಸಮಯ ಬೇರೆ, ಜನರು ಹೊರ
ಬರುವುದೇ ಕಷ್ಟ. ನಾವುಗಳು
ಉತ್ಪಾದನೆ ಹೆಚ್ಚಿಸುವ ನೆಪದಲ್ಲಿ,
ಪರಿಸರದ ಮೇಲೆ ಆಕ್ರಮಣ
ಮಾಡುತ್ತಿದ್ದೇವೆ. ಜನಸಂಖ್ಯೆ
ಹೆಚ್ಚಾಗುತ್ತಿರುವುದರಿಂದ ಎಲ್ಲಾ
ವಸ್ತುಗಳ ಅಭಾವ ಸಹ
ಎದ್ದುಕಾಣುತ್ತಿದೆ. ಶ್ರೀಮಂತರು
ಹೆಚ್ಚು ಸಂಪಲ್ಮೂಲಗಳನ್ನ
ಬಳಸುತ್ತಿದ್ದಾರೆ, ಇವೆಲ್ಲವನ್ನು
ನಿಯಂತ್ರಣಕ್ಕೆ ತರಲು ಯಾರಿಗೂ
ಸಾದ್ಯವಾಗುತ್ತಿಲ್ಲ. ಪ್ರತಿಯೊಬ್ಬರು
ದುಂದು ವೆಚ್ಚ, ಆಡಂಬರದ ಕಡೆ
ವಾಲುತ್ತಿದ್ದಾರೆ. ಪರಿಸರದ
ಸಂಪಲ್ಮೂಗಳು ನಶಿಸಿ
ಹೋಗುತ್ತಿವೆ. ಜನರು
ಸ್ವನಿಯಂತ್ರಣಕ್ಕೆ ಬರದೇ
ಹೊರತು, ಬೆಲೆ ಏರಿಕೆ ನೆಡೆದೆ
ಇರುತ್ತದೆ ಎಂದರು.
ಇಂದು ಎಲ್ಲಾ ಉತ್ಪಾದನೆಗಳನ್ನು
ವಿದ್ಯುತ್, ಪೆಟ್ರೋಲ್ ಬಳಕೆ ಮೇಲೆ
ನಿಂತಿದೆ, ಮಾನವ ಶಕ್ತಿಯನ್ನ
ತಿರಸ್ಕರಿಸುತ್ತಾ ನೆಡೆದಿದ್ದೇವೆ.
ಕೈಮಗ್ಗಗಳ ಬದಲು ವಿದ್ಯುತ್
ಮಗ್ಗಗಳನ್ನ ಸ್ಥಾಪಿಸಿದ್ದೇವೆ, ವಿದ್ಯುತ್
ಮೇಲೆ ದಿನೇ ದಿನೇ ಒತ್ತಡ
ಹೆಚ್ಚಿಸಿದ್ದೇವೆ, ಬೆಲೆ ಏರಿಕೆಗೆ
ಪÀರ್ಯಾಯವೆಂದರೇ ವಿದ್ಯುತ್
ಮಿತವ್ಯಯ ಮಾತ್ರ. ನಾವು
ಇತಮಿತವಾಗಿ ನೈಸರ್ಗಿಕ
ಶಕ್ತಿಗಳನ್ನ ಬಳಸಿ, ಸರಳತೆಗೆ
ಜೀವನ ಕೊಂಡೋಯ್ಯದಿದ್ದರೇ,
ನಾವು ದುಡಿದ ಎಲ್ಲಾ ಹಣವನ್ನ ಶಕ್ತಿ
ಕೊಳ್ಳಲು ಬಳಸಬೇಕಾಗುತ್ತದೆ
ಎಂದರು.
ಕಾರ್ಯಕ್ರಮದಲ್ಲಿ ವಿದ್ಯುತ್, ಪೆಟ್ರೋಲ್,
ಅಡುಗೆ ಅನಿಲ ಉಳಿಸಿ ಎಂಬ ಬಿತ್ತಿ ಚಿತ್ರಗಳನ್ನ
ಪ್ರದರ್ಶಿಸಲಾಯಿತು ಹಾಗೂ ಪರಿಸರದ ಗೀತೆ
ಹಾಡಿ ಜನರನ್ನ ಜಾಗೃತಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವೇಶರ
ಆಸ್ಪತ್ರೆಯ ಲೋಕನಾಥ್, ಶ್ರೀನಿವಾಸ,
ವಾಹನ ಚಾಲಕ ಗಿರೀಶ್, ಗೀತಾ, ಪ್ರೇರಣ,
ರಚನ, ಸುರಕ್ಷಾ, ಅಂಶುಲ್ ಹಾಜರಿದ್ದರು.