ಹೊನ್ನಾಳಿ : ನಾನು ಇದ್ದರೂ ಜನರ ಜೊತೆ, ಸತ್ತರು ಜನರು ಜೊತೆ, ಜನರ ಒಳಿತಿಗಾಗೀ ಇಡೀ ವಿಶ್ವವೇ ಕೊರೊನಾದಿಂದ ಮುಕ್ತವಾಗ ಬೇಕೆಂಬ ಉದ್ದೇಶದಿಂದ ಮೃತ್ಯುಂಜಯ್ಯ ಹಾಗೂ ಧನ್ವಂತರಿ ಹೋಮ ಹಮ್ಮಿಕೊಂಡಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ತಾಲೂಕಿನ ಅರಂಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವವನ್ನೇ ಕೊರೊನಾ ಸೋಂಕು ಹಿಂಡಿಇಪ್ಪೇ ಮಾಡಿದ್ದು, ಕೊರೊನಾದಿಂದ ಇಡೀ ವಿಶ್ವವೇ ಕೊರೊನಾದಿಂದ ಮುಕ್ತರಾಗ ಬೇಕೆಂಬ ಉದ್ದೇಶದಿಂದ ಮೃತ್ಯುಂಜಯ್ಯ ಹಾಗೂ ಧನ್ವಂತರಿ ಹೋಮ ಹಮ್ಮಿಕೊಳ್ಳಲಾಗಿದೆ ಎಂದರು.
ಹೋಮಹವನಗಳು ಇಂದು ನಿಮ್ಮಯದಲ್ಲಾ ಋತ್ವಿಜರ ಕಾಲದಿಂದಲೂ ಹೋಮಹವನ ನಡೆಯುತ್ತಿದ್ದು ಇಂದೂ ಕೂಡ ಲೋಕೋದ್ದಾರಕ್ಕಾಗಿ ಹೋಮ ಹಮ್ಮಿಕೊಂಡಿದ್ದು ಈ ಹೋಮದಲ್ಲಿ ಕೊರೊನಾದಿಂದ ಗುಣಮುಖರಾದ ನನ್ನ ಬಂದುಗಳು ಪಾಲ್ಗೊಂಡಿದ್ದು ಕೊರೊನಾ ಸೋಂಕಿತರು ಅವರ ಕೊಠಡಿಯಲ್ಲೇ ದೇವರಿಗೆ ನಮಸ್ಕರಿಸಿದ್ದು ಆದಷ್ಟು ಬೇಗ ಅವಳಿ ತಾಲೂಕಿನ ಜನರಲ್ಲದೇ, ಇಡೀ ವಿಶ್ವವೇ ಈ ಕೊರೊನಾ ಎಂಬ ಮಹಾಮಾರಿಯಿಂದ ಗುಣವಾಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.
ಹೋಮಹವನದಿಂದ ಧಾರ್ಮಿಕವಾಗಿ ಸೋಂಕಿತರ ಮಸ್ಸಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಹೋಮ ಹಮ್ಮಿಕೊಂಡಿದ್ದು ಇದರಿಂದ ಲೋಕಕ್ಕೆ ಒಳ್ಳೆಯದಾಗೀ ಜನರು ಕೊರೊನಾ ಎಂಬ ಮಹಮಾರಿಯಿಂದ ಗುಣಮುಖರಾದ ಸಾಕು ಎಂಬ ಉದ್ದೇಶದಿಂದ ಹೋಮ ಹಮ್ಮಿಕೊಳ್ಳಲಾಗಿದೆ ಎಂದರು.
ಅವಳಿ ತಾಲೂಕಿನಾಧ್ಯಂತ 3192 ಸೋಂಕಿತರಿದ್ದು ಅದರಲ್ಲಿ 2292 ಜನರು ಗುಣಮುಖರಾಗಿದ್ದು, 775 ಜನ ಚಿಕಿತ್ಸೆ ಪಡೆಯುತ್ತಿದ್ದಾರೆಂದ ಶಾಸಕರು ಇಂದು 50 ಜನರು ಕೊರೊನಾದಿಂದ ಗುಣಮುಖರಾಗಿದ್ದು ಅವರ ನೇತೃತ್ವದಲ್ಲಿ ಧನ್ವಂತರಿ ಹಾಗೂ ಮೃತ್ಯುಂಜಯ್ಯ ಹೋಮ ಮಾಡಿಸಿದ್ದು ಅವರಿಗೆ ಹಾಗೂ ಲೋಕಕ್ಕೆ ಒಳ್ಳೆಯಾದಗಲಿ ಎಂದರು.
ಮೃತ್ಯುಂಜಯ್ಯ ಹೋದಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಒಡೆಯರ್ ಚನ್ನಮಲ್ಲಿಕಾರ್ಜುನ್ ಸ್ವಾಮೀಜಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಕೊರೊನಾ ಸಂದರ್ಭದಲ್ಲಿ ಅವಳಿ ತಾಲೂಕಿನಾಧ್ಯಂತ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದು ಮಾದರಿ ಶಾಸಕ ಎನಿಸಿಕೊಂಡಿದ್ದಾರೆ ಎಂದರು. ಇಡೀ ವಿಶ್ವಕ್ಕೆ ಕೊರೊನಾ ಎಂಬ ಮಹಮಾರಿ ವಕ್ಕರಿಸಿದ್ದು ಇದು ಸಾಕಷ್ಟು ಸಾವು ನೋವು ಉಂಟು ಮಾಡಿದ್ದು ಲೋಕಕ್ಕೆ ಒಳ್ಳೆಯದಾಗಿ ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವಕ್ಕೆ ಮುಕ್ತವಾಗ ಬೇಕೆಂದು ಮೃತ್ಯುಂಜಯ್ಯ ಹೋಮ ಹಮ್ಮಿಕೊಂಡಿದ್ದು ಆದಷ್ಟು ಬೇಗ ಕೊರೊನಾದಿಂದ ಇಡೀ ವಿಶ್ವ ಮುಕ್ತವಾಗಲಿ ಎಂದು ಆಶೀಸಿದರು.
ಸೋಂಕಿತರಿಗೆ ಹೋಳಿಗೆ ಊಟ : ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರು, ಗುಣಮುಖರಾಗಿಮನೆಗೆ ತೆರಳಿದ ಸೋಂಕಿತರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿಸಿದ್ದ ಶಾಸಕರು ಸುಮಾರು ಎರಡು ಸಾವಿರ ಜನರಿಗೆ ಹೋಳಿಗೆ ಊಟ ಉಣ ಬಡಿಸಿದರು. ಆಸ್ಪತ್ರೆಯಲ್ಲಿನ ಸೋಂಕಿತರು, ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು, ಪೊಲೀಸರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿಸಿದ್ದ ಶಾಸಕರು ಖುದ್ದು ಹೋಳಿಗೆ ತಯಾರಿಸುವ ಮೂಲಕ ಗಮನ ಸೆಳೆದರು.
ಸೋಂಕಿನಿಂದ ಗುಣಮುಖರಾದವರಿಗೆ ಹೂಮಳೆ : ಅರಬಗಟ್ಟೆಯಲ್ಲಿನಲ್ಲಿನ ಕೋವಿಡ್ ಕೇರ್ ಸೆಂಟರ್‍ನಿಂದ ಇಂದುಯ 50 ಜನರು ಗುಣಮುಖರಾಗಿದ್ದು ಅವರಿಗೆ ಶುಭಕೋರಿದ ಶಾಸಕರು ಹೂಮಳೆ ಸುರಿಸಿ, ಆತ್ಮೀಯವಾಗಿ ಬೀಳ್ಕೋಟ್ಟರು ಅಷ್ಟೇ ಅಲ್ಲದೇ ಎಲ್ಲರೂ ಕೂಡ ತಮ್ಮ ಗ್ರಾಮಗಳಿಗೆ ತೆರಳಿದ ಮೇಲೆ ಕೊರೊನಾ ವಾರಿಯರ್ಸಗಳಾಗಿ ಕೆಲಸ ಮಾಡುವಂತೆ ಸೂಚಿಸಿದರು.
ಪತಿಯೊಂದಿಗೆ ಪತ್ನಿ ಸಾಥ್ : ಆರೈಕೆ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮೃತ್ಯುಂಜಯ್ಯ ಹಾಗೂ ಧನ್ವಂತರಿ ಹೋಮದಲ್ಲಿ ರೇಣುಕಾಚಾರ್ಯರಿಗೆ ಪತ್ನಿ ಸುಮಾ ರೇಣುಕಾಚಾರ್ಯ ಸಾಥ್ ನೀಡಿದರು. ಅಷ್ಟೇ ಅಲ್ಲದೇ ಸೋಂಕಿತರಿಗೆ ಹಾಗೂ ಗುಖಮುರಾಗಿ ಮನೆಗೆ ತೆರಳಿದವರಿಗೆ ಊಟ ಬಡಿಸುವ ಮೂಲಕ ಸುಮಾ ರೇಣುಕಾಚಾರ್ಯ ಆರೈಕೆ ಕೇಂದ್ರದಲ್ಲಿ ಪತಿಯ ಕೆಲಸಕ್ಕೆ ತಾವೂ ಕೂಡ ಸಾಥ್ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಸದಸ್ಯರಾದ ಸುರೇಂದ್ರನಾಯ್ಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಎಲ್,ರಂಗನಾಥ್, ಎಸ್.ಪಿ.ರವಿ, ತಾಲೂಕು ಪಂಚಾಯಿತಿ ಸದಸ್ಯ ಶಿವಾನಂದ್ ಸೇರಿದಂತೆ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *