ಜೂ.12 ರಂದು ನಗರದ 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ
ಕೇಂದ್ರದಿಂದ ಹೊರಡುವ ವಿದ್ಯಾನಗರ ಫೀಡರ್‍ನಲ್ಲಿ
ಕೆ.ಯು.ಐ.ಡಿ.ಎಫ್.ಸಿ. ಮತ್ತು ಬೆ.ವಿ.ಕಂ. ವತಿಯಿಂದ ಜಲಸಿರಿ
ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ
ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ
ವಿದ್ಯಾನಗರ ಫೀಡರ್ ವ್ಯಾಪ್ತಿಯಲ್ಲಿ ಶಿವಕುಮಾರಸ್ವಾಮಿ ಬಡಾವಣೆಯ 1
ಮತ್ತು 2ನೇ ಹಂತ, ಹದಡಿ ರಸ್ತೆ, ಸೇಂಟ್‍ಜಾನ್ ಸ್ಕೂಲ್, ಐ.ಟಿ.ಐ. ಕಾಲೇಜು,
ರಿಂಗ್‍ರಸ್ತೆ, ಶ್ರೀನಿವಾಸ ನಗರ, ತರಳಬಾಳು ಬಡಾವಣೆ ಮತ್ತು ಸುತ್ತ
ಮುತ್ತಲ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4
ಗಂಟೆಯವರೆಗೆ ವಿದ್ಯುತ್ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ
ತಿಳಿಸಿದೆ.