2021-22 ನೇ ಸಾಲಿನಿಂದ ಕೆರೆಗಳ/ಜಲಾಶಯಗಳ ಅಂಚಿನಲ್ಲಿ ಕೊಳಗಳನ್ನು ನಿರ್ಮಿಸಿ ಮೀನುಮರಿ ಪಾಲನೆ ಮಾಡಿ ಬೆಳೆಸಿದ ಮೀನುಮರಿಗಳನ್ನು ಅದೇ ಕೆರೆಗಳಿಗೆ ಬಿತ್ತನೆ ಮಾಡಿ ಮೀನು ಕೃಷಿ ಕೈಗೊಳ್ಳುವ ಗುತ್ತಿಗೆದಾರರು/ಪರವಾನಿಗೆದಾರರಿಗೆ ಸಹಾಯಧನ ಯೋಜನೆ ಆರಂಭವಾಗಿದೆ.
ಸಹಾಯಧನ ನೀಡಲು ಕೆರೆಗಳ/ಜಲಾಶಯಗಳ ಮೀನುಪಾಶುವಾರು ಹಕ್ಕು ಪಡೆದ ಗುತ್ತಿಗೆದಾರರು, ಬಿಡ್‍ದಾರರು ಪರವಾನಿಗೆದಾರರು ಹಾಗೂ ಮೀನುಗಾರಿಕೆ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೀನುಪಾಶುವಾರು ಹಕ್ಕಿನ ಅವಧಿ ಕನಿಷ್ಟ 02 ವರ್ಷ ಬಾಕಿ ಇರುವ ಗುತ್ತಿಗೆದಾರರು ಈ ಯೋಜನೆಯಡಿ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ.
ಮೀನುಗಾರಿಕೆ ಇಲಾಖೆಯಿಂದ ಪಡೆದ ಕೆರೆಗಳ ಮೀನುಪಾಶುವಾರು ಹಕ್ಕಿನ ನವೀಕರಣಕ್ಕಾಗಿ ಹಣ ಪಾವತಿಗಾಗಿ ನಿಗದಿಯಾಗಿದ್ದ ದಿನಾಂಕವನ್ನು ಕೋವಿಡ್ ಹಿನ್ನೆಲೆಯ ಲಾಕ್‍ಡೌನ್ ಕಾರಣದಿಂದಾಗಿ ವಿಸ್ತರಿಸಲಾಗಿದ್ದು ಹಣ ಪಾವತಿಸಲು ಜೂನ್ 30 ಕಡೆಯ ದಿನವಾಗಿರುತ್ತದೆ.

ಕೋವಿಡ್ 19 ಕಾರಣದಿಂದಾಗಿ 2021-22 ನೇ ಸಾಲಿನ ಮೀನುಪಾಶುವಾರು ಹಕ್ಕಿನ ನವೀಕರಣ ಹಣ ಪಾವತಿಯಲ್ಲಿ ಶೇ.25 ರಷ್ಟು ರಿಯಾಯಿತಿಯನ್ನು ಸರ್ಕಾರ ಘೋಷಿಸಿದ್ದು, ರಿಯಾಯಿತಿ ದರದಂತೆ ಹಣ ಪಾವತಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *