ಮನವಿ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ
ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್),
ಪರಿವರ್ತನಾ ಯೋಗ ಫೌಂಡೇಷನ್ ಹಾಗೂ ಆರ್ಟ್ ಆಫ್ ಲಿವಿಂಗ್
ಸಹಯೋಗದಲ್ಲಿ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಅಂಗವಾಗಿ ಜೂ.11 ರಿಂದ ಜೂ.21 ರವರೆಗೆ ಪ್ರತಿ ದಿನ ಬೆಳಿಗ್ಗೆ 6.30 ರಿಂದ 8
ಗಂಟೆಯವರೆಗೆ ಆನ್‍ಲೈನ್ ಮೂಲಕ ಯೋಗ ಹಾಗೂ ಧ್ಯಾನ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈಗಾಗಲೆ ಜೂ.11 ರಂದು ಯುವ ಸಬಲೀಕರಣ ಮತ್ತು ಕ್ರೀಡಾ
ಇಲಾಖೆಯ ಸಚಿವರು ಹಾಗೂ ಸರ್ಕಾರದ ಅಪರ
ಮುಖ್ಯಕಾರ್ಯದರ್ಶಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಚಾಲನೆ ನೀಡಿದ್ದು, ಕಾರ್ಯಕ್ರಮಕ್ಕೆ ಕೋವಿಡ್-19 ಸಾಂಕ್ರಾಮಿಕ,
ಯುವಜನರು ಮತ್ತು ಯೋಗ ಹಾಗೂ ಧ್ಯಾನ ಎಂಬ
ಶೀರ್ಷಿಕೆಯನ್ನು ನೀಡಲಾಗಿದೆ.
ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಹಾಗೂ
ಯಶಸ್ವಿಯಾಗಿ ಸಂಘಟನೆ ಮಾಡಬೇಕಾಗಿದ್ದು, ಜಿಲ್ಲೆಯಲ್ಲಿನ
ಯುವಜನರು, ಕ್ರೀಡಾಪಟುಗಳು, ಯುವ ಸಂಘದ
ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆನ್‍ಲೈನ್ ಮೂಲಕ ಯೋಗ
ಹಾಗೂ ಧ್ಯಾನದಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ
ಜೀವನಶೈಲಿ ರೂಪಿಸಿಕೊಳ್ಳಬೇಕು.
ಜೂ. 21 ರವರೆಗೂ ನಿತ್ಯ ಬೆಳಿಗಬ್ಗೆ 6-30 ರಿಂದ 8 ಗಂಟೆಯವರೆಗೆ
ಆನ್‍ಲೈನ್ ಮೂಲಕ ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳುವವರು ಜೂಮ್ ಮೀಟಿಂಗ್ ಐಡಿ 88904655436, ಪಾಸ್ ಕೋಡ್
429186 ಬಳಸಿ ಜೂಮ್ ಮೂಲಕ ಭಾಗವಹಿಸಬಹುದು. ಯ್ಯೂಟ್ಯೂಬ್
ಲಿಂಕ್ hಣಣಠಿs://ಥಿouಣube.ಛಿom/ಛಿ/ಙuvಚಿSಠಿಚಿಟಿಜಚಿಟಿಚಿ ಮೂಲಕ ವೀಕ್ಷಿಸಬಹುದು ಎಂದು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *