ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆಯೂ ಸಾಕಷ್ಟು ಕಡಿಮೆ ಇರುವ ಸುದ್ದಿ ಇದೆ,ಅದ್ದರೆ ಭಾರತ ಸರ್ಕಾರ ದೇಶದ ಪ್ರಜೆಗಳಿಗೆ ಕೊಡುತ್ತಿರುವುದು ಲೀಟರ್ ಒಂದಕ್ಕೆ 100 ರೂಪಾಯಿ ಗಳಷ್ಟು ದೊಡ್ಡ ಮೋತ್ತಕ್ಕೆ,

ದೇಶದಲ್ಲಿ ಸರ್ಕಾರ ಇರುವುದು ಜನರಿಂದ ಜನರಿಗಾಗಿಯೇ ಅಥವಾ ವ್ಯಾಪಾರ ಮಾಡುವುದಕೋ ಎಂಬ ಅನುಮಾನ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆಗಳನ್ನು ಗಮಿಸಿದರೆ ಬರುತ್ತದೆ.
ಅಡುಗೆ ಎಣ್ಣೆ ಯಲ್ಲಿ ಸಾಕಷ್ಟು ಎರಿಕೆ ಯಾಗಿದೆ ಪೆಟ್ರೋಲ್ ಮತ್ತು ಡಿಸೀಲ್ ಬೆಲೆಯಲ್ಲಿ ಸಾಕಷ್ಟು ಎರಿಕೆ ಇದೆ.
ದೇಶದಲ್ಲಿ ಜನರು ಕೊರೋನ ಸಂಕಷ್ಟಕ್ಕೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದಾರೆ ಇಂತಹ ಸಮಯದಲ್ಲಿ ಜನಸಾಮಾನ್ಯರಿಗೆ ಜೀವನ ದುಬಾರಿ ಆಗದಂತೆ ಎಚ್ಚರಿಕೆ ವಹಿಸಬೇಕಿತ್ತು,

ಆದರೆ ಕೇಂದ್ರದ ಸರ್ಕಾರ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆಯಲ್ಲಿ ಕಡಿಮೆ ಇದ್ದರು ದೇಶದ ನಾಗರಿಕರಿಗೆ ದರಗಳನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ.
ಸರಕಾರಕ್ಕೆ ಜನರ ಹಿತದೃಷ್ಟಿಗಿಂತ ಹಣದ ಅವಶ್ಯಕತೆಯೇ ಹೆಚ್ಚಾಯಿತು ಎಂಬ ವಿಚಾರ ಗೋಚರಿಸುತ್ತಿದೆ,

ಈ ಹಿಂದೆ ಕಾಂಗ್ರೆಸ್ ಪಕ್ಷದ ಸರ್ಕಾರ ಇರುವ ಸಂದರ್ಭದಲ್ಲಿ ತೈಲ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಹೇರಿಕೆ ಮಾಡಿದರೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು, ಮುಖಂಡರು ಈಗೇಕೆ ಮೌನವಾಗಿದ್ದಾರೆ. ಅಂದರೆ ಇವರ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಮಾತ್ರವೇ ಹೊರಾಟ, ಬಂದಾದ ಮೇಲೆ ನಾವು ಏನು ಮಾಡಿದರೂ ಕೇಳೋರಿಲ್ಲ ಎಂಬ ಭಾವನೆಯನ್ನು ಹೊಂದಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ.

ಸರ್ಕಾರ ವ್ಯಾಪಾರ ಮಾಡುವುದೇ ಅಭಿವೃದ್ಧಿ ಎಂದು ಭಾವಿಸಿ, ಅಗತ್ಯ ವಸ್ತುಗಳ ಮೇಲೆ ತೆರಿಗೆ ಹಾಕಿ, ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವವರಿಗೆ ಅನುಕೂಲ ಮಾಡಿಕೊಡಲು ಅಗತ್ಯ ವಸ್ತುಗಳ ಬೆಲೆಗಳ ಮೇಲೆ ನಿಯಂತ್ರಣ ಎರದೇ ಜನಸಾಮಾನ್ಯರ ಮೇಲೆ ಬರೆ ಎಳೆದು ಅಭಿವೃದ್ಧಿಯ ನಾಟಕವಾಡುತ್ತಿದ್ದಾರೆ,

ಇನ್ನಾದರು ಯುವಜನರು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ತಂದ ಸರಕಾರಕ್ಕೆ ಬುದ್ಧಿ ಕಲಿಸಲು ಮುಂದಾಗಬೇಕು. ಸರ್ಕಾರ ಜನಪರವಾದ ಅಗತ್ಯವಸ್ತುಗಳ ಬೆಲೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಆ ಸಮಯದ ವರೆಗೂ ಹೊರಾಟಕ್ಕೆ ಯುವಕರು ಸಿದ್ದರಾಗಬೇಕು,

ರಘುಗೌಡ, 9916101265

Leave a Reply

Your email address will not be published. Required fields are marked *