ಹೊನ್ನಾಳಿ : ಕೋವಿಡ್ ಕೇರ್ ಸೆಂಟರ್‍ನಲ್ಲಿ ಹೋಮಹವನಕ್ಕೆ ಸಂಬಂದಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶೀ ಎಂ.ಪಿ.ರೇಣುಕಾಚಾರ್ಯರ ವಿರುದ್ದ ಪ್ರಕರಣ ದಾಖಲಿಸ ಬೇಕು, ಇಲ್ಲದಿದ್ದರೇ ಹೋರಾಟ ಮಾಡುತ್ತೇವೆಂದು ಮಾಜಿ ಶಾಸಕರು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಟಾಧಿಕಾರಿಗಳ ಮೇಲೆ ಮೇಲೆ ಒತ್ತಡ ಹೇರಿದ್ದು ಇದನ್ನು ವಿರೋಧಿಸಿ ಕೊರೊನಾ ಸೋಂಕಿತರ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ನಡೆದಿದೆ.
ಕಳೆದ ರಾತ್ರಿ ಕೊರೊನಾ ಸೋಂಕಿತರು ಊಟವನ್ನು ಬಹಿಷ್ಕರಿಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿದರಲ್ಲದೇ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಊಟ,ತಿಂಡಿ ಮಾಡುವುದಿಲ್ಲಾ ಎಂದು ಧರಣಿ ನಡೆಸಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿ ನಿನ್ನೆ ಲೋಕಕಲ್ಯಾಣಕ್ಕಾಗಿ ಧನ್ವಂತರಿ ಹಾಗೂ ಮೃತ್ಯುಂಜಯ್ಯ ಹೋಮವನ್ನು ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗಿತ್ತು. ಈ ಹೋಮದಲ್ಲಿ ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳುವವರು ಪಾಲ್ಗೊಂಡಿದ್ದರು. ಆದರೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹೋಮಹವನ ಹಮ್ಮಿಕೊಳ್ಳಲಾಗಿದೇ ಎಂದು ಮಾಜಿ ಶಾಸಕರು ಆರೋಪಿಸಿದ್ದು, ತಮಗೂ ಕಾಂಗ್ರೇಸ್ ಪಕ್ಷದಿಂದ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹೋಮ ಹವನಕ್ಕೆ ಅವಕಾಶ ನೀಡಿ ಇಲ್ಲದ್ದೇ ಇದ್ದರೇ ಶಾಸಕರ ವಿರುದ್ದ ಪ್ರಕರಣ ದಾಖಲಿಸ ಬೇಕು, ಇಲ್ಲದಿದ್ದರೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.
ಈ ವಿಷಯ ಕೊರೊನಾ ಸೋಂಕಿತರಿಗೆ ತಿಳಿಯುತ್ತಿದ್ದಂತೆ ಸೋಂಕಿತರು ಊಟವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕೊರೊನಾ ಸೋಂಕಿತರ ಕಷ್ಟವನ್ನು ಕೇಳಲು ಬಾರದ ಮಾಜಿ ಶಾಸಕರು ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದಿದ್ದು ಇದರ ಬದಲು ಕೋವಿಡ್ ಕೇರ್ ಸೆಂಟರ್‍ಗೆ ಬಂದು ಸೋಂಕಿತರ ಯೋಗ ಕ್ಷೇಮ ವಿಚಾರಿಸಲಿ ಎಂದು ಆಗ್ರಹಿಸಿದರು.


ಕಳೆದ ಒಂದು ವಾರದಿಂದ ಶಾಸಕರು ಇಲ್ಲೇ ವಾಸ್ತವ್ಯ ಮಾಡಿದ್ದು ನಮ್ಮಗಳ ಕಷ್ಟವನ್ನು ಕೇಳುವ ಕೆಲಸ ಮಾಡುತ್ತಿದ್ದಾರೆ.ಇದೀಗ ಅಧಿಕಾರಿಗಳು ಮಾಜಿ ಶಾಸಕರ ಒತ್ತಡಕ್ಕೆ ಮಣಿದು ಶಾಸಕರ ಮೇಲೆ ಪ್ರಕರಣ ದಾಖಲಿಸುವ ಉನ್ನಾರ ನಡೆಸಿದ್ದಾರೆ. ಪ್ರಕರಣ ದಾಖಲಿಸುವವರು ಮೊದಲು ಇಲ್ಲಿಗೆ ಬಂದು ನಮ್ಮ ಯೋಗ ಕ್ಷೇಮೆ ಕೇಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಶಾಸಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಇದ್ದರೂ ನಿಮ್ಮ ಜೊತೆ ಮಣ್ಣಾದರೂ ನಿಮ್ಮ ಜೊತೆ ಎಂಬ ಉದ್ದೇಶದಿಂದ ಯಾವುದೇ ಪಕ್ಷಾತಿತವಾಗಿ ಕೆಲಸ ಮಾಡುತ್ತಿದ್ದಾರೆ ಅಲ್ಲದೇ ಲೋಕಕ್ಕೆ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಆದರೇ ಇದನ್ನೇ ಕೆಲವರು ನೆಪಮಾಡಿಕೊಂಡು ಶಾಸಕರ ವಿರುದ್ದ ಪ್ರಕರಣ ದಾಖಲಿಸಲು ಮುಂದಾದರೆ ನಾವು ಸುಮ್ಮನಿರೋಲ್ಲಾ ಎಂದು ಸೋಂಕಿತರು ಆಕ್ರೋಶ ಹೊರ ಹಾಕಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಂಕಿತರು ಪ್ರತಿಭಟನೆ ನಡೆಸುತ್ತಿದ್ದಾರೆಂಬ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ತಹಶೀಲ್ದಾರ್ ವಿರುದ್ದ ಸೋಂಕಿತರು ಆಕ್ರೋಶ ವ್ಯಕ್ತ ಪಡಿಸಿದರು. ಅಧಿಕಾರಿಗಳು ಮಾಡ ಬೇಕಾದ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಆದರೇ ಅಧಿಕಾರಿಗಳು ಮನೆಯಲ್ಲಿ ಆಯಾಗಿ ಮಲಗಿದ್ದು ಈಗ ಮಾಜಿ ಶಾಸಕರ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಲು ಬಂದಿದ್ದೀರಾ ಎಂದು ಆಕ್ರೋಶ ಹೊರ ಹಾಕಿದರು.
ಕೊರೊನಾ ಸೋಂಕಿತರು ಕಳೆದ ರಾತ್ರಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಆಗ್ರಹಿಸಿ ಊಟವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಸೋಂಕಿತರು ಪಟ್ಟು ಹಿಡಿದಾಗ ಅವರನ್ನು ಸಮಧಾನ ಮಾಡಿದ ರೇಣುಕಾಚಾರ್ಯ ನೀವು ಈ ರೀತಿ ಮಾಡಿವುದು ತಪ್ಪು ಎಂದು ಅವರಿಗೆ ಬುದ್ದಿಹೇಳಿದರು.

Leave a Reply

Your email address will not be published. Required fields are marked *