ರಾಜಸ್ಥಾನದಲ್ಲಿ ಎಷ್ಟೋ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾ ನುಸುಳುಕೋರ ಮುಸಲ್ಮಾನರಿಗೆ ವ್ಯಾಕ್ಸಿನೇಶನ್ ನೀಡಲಾಗಿದೆ. ಹಾಗಾದರೆ ಪಾಕಿಸ್ತಾನದಿಂದ ಬಂದಿರುವ ಸ್ಥಳಾಂತರಿತ ಹಿಂದೂಗಳಿಗೇಕೆ ವ್ಯಾಕ್ಸಿನೇಶನ ಆಗುತ್ತಿಲ್ಲ ? ಅವರ ಜೀವನಕ್ಕೆ ಯಾವುದೇ ಬೆಲೆ ಇಲ್ಲವೇ ? ಇದು ಯಾವ ರೀತಿ ‘ಜಾತ್ಯತೀತತೆ’ ಆಗಿದೆ ? ಅವರಿಗೆ ನ್ಯಾಯ ಪಡೆಯಬೇಕಾದರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತಿದೆ, ಇದು ದುರಾದೃಷ್ಟಕರವಾಗಿದೆ. ಎಂದು ರಾಜಸ್ಥಾನದಲ್ಲಿನ ‘ನಿಮಿತ್ತೆಕಮ’ ಈ ಸಂಘಟನೆಯ ಅಧ್ಯಕ್ಷ ಶ್ರೀ. ಜಯ ಆಹುಜಾ ಇವರು ಅಭಿಪ್ರಾಯಪಟ್ಟರು. ‘ಹಿಂದೂ ಜನಜಾಗೃತಿ ಸಮಿತಿ’ಯಿಂದ ಆಯೋಜಿಸಲ್ಪಟ್ಟ ‘ಕೊರೊನಾ ಲಸೀಕರಣದಲ್ಲಿ ಜಾತ್ಯತೀತವಾದಿಗಳಿಂದ ಹಿಂದೂ-ಮುಸ್ಲಿಮ್ ಭೇದ’, ಈ ‘ಆನ್‌ಲೈನ್ ವಿಶೇಷ ಚರ್ಚಾಕೂಟ’ದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org, ಯು-ಟ್ಯೂಬ್ ಹಾಗೂ ಟ್ವಿಟರ್ ನಲ್ಲಿ 4,234 ಜನರು ಪ್ರತ್ಯಕ್ಷವಾಗಿ ವೀಕ್ಷಿಸಿದರು.
ಹಜ್ ಯಾತ್ರಿಕರನ್ನು ‘ಫ್ರಂಟ್ ಲೈನ್ ವರ್ಕರ್ಸ’ ಎಂದು ಘೋಷಿಸುವುದು, ಇದು ಕೇರಳ ಸರಕಾರದ ಅಲ್ಪಸಂಖ್ಯಾತರ ಓಲೈಕೆಯಾಗಿದೆ !
ಕೇರಳದಲ್ಲಿ ಕಮ್ಯುನಿಸ್ಟ ಸರಕಾರವು ಹಜ ಯಾತ್ರಿಕರಿಗೆ ‘ಫ್ರಂಟ್ ಲೈನ್ ವರ್ಕರ್ಸ’ ಎಂದು ಘೋಷಿಸಿದೆ; ಆದರೆ ವಿದೇಶದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್ ವ್ಯವಸ್ಥೆಯನ್ನು ಮಾಡಿಲ್ಲ. ಕೊರೊನಾ ಬಿಕ್ಕಟ್ಟಿನಲ್ಲಿ ಮಠ-ದೇವಸ್ಥಾನಗಳಿಂದ ಕೇರಳ ಸರಕಾರಕ್ಕೆ ಕೋಟಿಗಟ್ಟಲೆ ರೂಪಾಯಿಗಳ ಆರ್ಥಿಕ ನೆರವು ನೀಡಲಾಯಿತು. ಅನೇಕ ದೇವಸ್ಥಾನಗಳು ‘ಕೊವಿಡ್ ಸೆಂಟರ್’ಅನ್ನು ಆರಂಭಿಸಿದವು; ಆದರೆ ಹಜ ಯಾತ್ರೆಯ ನಿಧಿಯನ್ನು ಕೊರೊನಾಗಾಗಿ ನೀಡಿದಂತಹ ಒಂದೇ ಒಂದು ಉದಾಹರಣೆ ಇದೆಯೇ ? ಹೀಗಿರುವಾಗ ವ್ಯಾಕ್ಸಿನೇಶನ್‌ಗಾಗಿ ಹಿಂದೂಗಳಿಗೆ ಶುಲ್ಕ ವಿಧಿಸುವುದು ಹಾಗೂ ಹಜ ಯಾತ್ರಿಕರಿಗೆ ಉಚಿತ ವ್ಯಾಕ್ಸಿನೇಶನ ನೀಡುವುದು, ಇದು ಅಧಿಕಾರಕ್ಕಾಗಿ ಮುಸಲ್ಮಾನರ ಓಲೈಕೆ ನಡೆಯುತ್ತಿದ್ದು ಅದಕ್ಕಾಗಿ ಯಾವುದೇ ಸ್ತರಕ್ಕೆ ಹೋಗಬಲ್ಲರು ಎಂದು ಕೇರಳದ ಅನ್ನಪೂರ್ಣ ಪೌಂಡೇಶನ್‌ನ ಅಧ್ಯಕ್ಷ ಶ್ರೀ. ಬಿನಿಲ ಸೋಮಸುಂದರಮ್ ಇವರು ಹೇಳಿದರು.
ಕೊರೊನಾದ ರೋಗಾಣು ಜಾತಿ-ಧರ್ಮ ನೋಡುವುದಿಲ್ಲ, ಹೀಗಿರುವಾಗ ವ್ಯಾಕ್ಸಿನೇಶನ್‌ನಲ್ಲಿ ಧರ್ಮದ ಆಧಾರದಲ್ಲಿ ಭೇದಭಾವ ಏಕೆ ?
ಹಿಂದೂ ಜನಜಾಗೃತಿ ಸಮಿತಿಯ ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯದ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಅವರು, ಕೊರೊನಾದ ರೋಗಾಣು ಜಾತಿ-ಧರ್ಮ ನೋಡುವುದಿಲ್ಲ, ಹಾಗಾದರೆ ವ್ಯಾಕ್ಸಿನೇಶನ್‌ನಲ್ಲಿ ಧರ್ಮದ ಆಧಾರದ ಮೇಲೆ ಭೇದಭಾವ ಏಕೆ ? ದೆಹಲಿಯ ಮುಖ್ಯಮಂತ್ರಿಯವರು ಕೊರೊನಾ ಯೋಧರಾಗಿದ್ದ ಓರ್ವ ಮುಸಲ್ಮಾನ ವೈದ್ಯರ ಸಾವಿನ ನಂತರ ಅವರ ಮನೆಗೆ ಹೋಗಿ 1 ಕೋಟಿ ರೂ. ಹಣ ನೀಡುತ್ತಾರೆ, ಇದೇರೀತಿಯ ಬಲಿದಾನ ಮಾಡಿದ ನೂರಾರು ಹಿಂದೂ ವೈದ್ಯರಿದ್ದರೂ ಅವರಿಗೆ ಈ ಗೌರವ ಏಕೆ ಸಿಗುತ್ತಿಲ್ಲ ? ಈ ಮಹಾಮಾರಿಯಲ್ಲಾದರೂ ಮನುಷ್ಯತ್ವದ ಭಾವನೆಯನ್ನು ಇಡಬೇಕು. ಮಹಾಮಾರಿಯಂತಹ ಸಮಯದಲ್ಲಿ ಹಿಂದೂಗಳೊಂದಿಗೆ ಈ ರೀತಿಯ ದುರ್ನಡತೆ ಆಗುತ್ತಿದ್ದರೆ, ಇತರ ಸಮಯದಲ್ಲಿ ಯಾವರೀತಿ ಆಗುತ್ತಿರಬಹುದು ? ಆದ್ದರಿಂದಲೇ ಹಿಂದೂಗಳು ಜಾಗೃತರಾಗಬೇಕಾಗಿದೆ ಹಾಗೂ ನ್ಯಾಯಕ್ಕಾಗಿ ಹಿಂದೂ ರಾಷ್ಟ್ರದ ಬೇಡಿಕೆ ಮಾಡಬೇಕಾಗಬಹುದು ಎಂದು ಹೇಳಿದರು.

ರಾಜಸ್ಥಾನದ ಉಚ್ಚನ್ಯಾಯಾಲಯದ ನ್ಯಾಯವಾದಿ ಮೋತಿಸಿಂಹ ರಾಜಪುರೋಹಿತ ಅವರು, ಅಲ್ಪಸಂಖ್ಯಾತ ಆಯೋಗದ ಸ್ಥಾಪನೆ ಮಾಡುವುದೆಂದರೆ ಸಂವಿಧಾನದ ಮೂಲಭೂತ ಸಿದ್ಧಾಂತಗಳ ಅವಹೇಳನೆಯಾಗಿದೆ. ಪ್ರತಿಯೊಂದು ಪ್ರಾಣಿಗೆ ಬದುಕುವ ಹಕ್ಕಿದೆ. ಇಂತಹ ಸಮಯದಲ್ಲಿ ಸರಕಾರದಿಂದ ಧರ್ಮದ ಆಧಾರದಲ್ಲಿ ಭೇದಭಾವ ಮಾಡುವುದು, ಅಂದರೆ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ತಮ್ಮ ಸವಿನಯ
ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು
ಹಿಂದೂ ಜನಜಾಗೃತಿ ಸಮಿತಿ, (ಸಂ : 99879 66666)

Leave a Reply

Your email address will not be published. Required fields are marked *