ಶಿಕಾರಿಪುರ: ಮುಖ್ಯಮಂತ್ರಿಗಳ ಬದಲಾವಣೆ ಕರೊನಕ್ಕಿಂತ ದೊಡ್ಡ ಅನಾಹುತ : ಮುರುಘರಾಜೇಂದ್ರ ಸ್ವಾಮೀಜಿ…!
ಶಿಕಾರಿಪುರ: ಈ ಸಮಯದಲ್ಲಿ ನಾಯಕತ್ವ ಬದಲವಾಣೆ ಯಾರು ಸಹ ಹೇಳಬಾರದು ನಾಡಿಗೆ ಕೋವಿಡ್ ಗಿಂತ ದೊಡ್ಡ ಅನಾಹುತ ಮಾಡಿದ ಹಾಗೇ ಆಗುತ್ತದೆ ಯಡಿಯೂರಪ್ಪ ನವರ ಬೆಂಬಲಕ್ಕೆ ಮಲೆನಾಡ ಸ್ವಾಮೀಜಿಗಳು ಒಕ್ಕೂಟ ನಿಂತಿದ್ದು ಎಂದು ಸ್ವಾಮಿಜೀಗಳ‌ ಒಕ್ಕೂಟ ಹೇಳಿದೆ.

ಶಿಕಾರಿಪುರದ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ‌ ಮಲೆನಾಡು ಮಠಾಧೀಶರ ಪರಿಷತ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ ಕರ್ನಾಟಕಕ್ಕೆ ಎಂಥ ನಾಯಕತ್ವ ಬೇಕು ಅನ್ನೋದನ್ನು ಜನತೆ ನಿರ್ಧರಿಸಬೇಕು.

ಯಡಿಯೂರಪ್ಪನವ ನಾಯಕತ್ವಕ್ಕೆ ಯಾರು ಸಹ ಅಡೆತಡೆಗಳನ್ನ ಮಾಡಬಾರದು ಹಾಗೇನಾದರೂ ಅಡೆತಡೆಗಳನ್ನ ಮಾಡಿದ್ದರೆ ತಮ್ಮ ತಲೇಮೇಲೆ ತಾವೇ ಕಲ್ಲು ಹಾಕಿಕೊಂಡ ಹಾಗೇ ಎಂದರು.

ಯಡಿಯೂರಪ್ಪ ಅಧಿಕಾರವಹಿಸಿಕೊಂಡ ನಂತರ ಪ್ರವಾಹ ಬಂತು ಆಗ ಯಡಿಯೂರಪ್ಪನವರು ಏಕಾಂಗಿಯಾಗಿ ಪ್ರವಾಹ ಪೀಡಿತ ಜಿಲ್ಲೆಗೆ ಹೋಗಿ ಭೇಟಿನೀಡಿ ಸಮರ್ಥವಾಗಿ ನಿಭಾಯಿಸಿದರು

ಪ್ರವಾಹ ಮುಗಿದ ಮೇಲೆ ಕರೋನಾ ಬಂತು ಬಹುಶಃ ಬೇರೆ ಯಾರಾದ್ರು ಆಗಿದ್ರೆ ದೃತಿಗೆಟ್ಟುಹೊಗುತ್ತಿದ್ದರು
ಕರೋನಾ ಪರಿಸ್ಥಿತಿಯನ್ನ‌ ಯಡಿಯೂರಪ್ಪನವರು ಸಮರ್ಥವಾಗಿ ನಿಭಾಯಿಸಿದ್ದಾರೆ.

ಎದೆಲ್ಲವನ್ನೂ ಸಹ ಜನತೆ ಗಮನಿಸಬೇಕು, ಸಂಬಂಧಪಟ್ಟವರು ಗಮನಿಸಬೇಕು ಈ ಸಮಯದಲ್ಲಿ ನಾಯಕತ್ವ ಬದಲವಾಣೆ ಯಾರು ಸಹ ಹೇಳಬಾರದು ಎಂದರು.

ಮಠಮಾನ್ಯಗಳಿಗೆ ಅಭಿವೃದ್ಧಿ ಶ್ರಮಿಸಿದ ಮುಖ್ಯಮಂತ್ರಿ ಎಂದರೇ ಬಿ.ಎಸ್ ಯಡಿಯೂರಪ್ಪನವರು ಒಬ್ಬರೇ ಅವರ ಜೊತೆ ನಾಡಿನ ಎಲ್ಲಾ ಜಾತಿ ಧರ್ಮಗಳ‌ ಮಠಮಾನ್ಯದ ಶ್ರೀಗಳು ಇದ್ದಾರೆ.

ಯಡಿಯೂರಪ್ಪನವರಿಗೆ ಆರೋಗ್ಯ ಆಯುಷ್ಯ ದೇವರು ಕೊಡಲಿ ಇನ್ನು ನಾಡಿನ ಹೆಚ್ಚು ಕೆಲಸ ಮಾಡುವಂತಾಗಲಿ ಎಂದು ಹಾರೈಹಿಸಿದರು‌

Leave a Reply

Your email address will not be published. Required fields are marked *