ಹೊನ್ನಾಳಿ:ಜೂನ್12 ಹೊನ್ನಾಳಿ ತಾಲೂಕು  ಫೋಟೋ ಮತ್ತು  ವಿಡಿಯೋ ಗ್ರಾಪರ್ಸ್   ಅಸೋಷಿಯೇಷನ್ ವತಿಯಿಂದ ಇಂದು  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರಿಗೆ ಸಂಘದ ವತಿಯಿಂದ ಕೊರೋನಾ ಸಂಕಷ್ಟದಲ್ಲಿ ರಾಜ್ಯದ ಎಲ್ಲಾ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದು 1ಹೊತ್ತಿನ ಊಟಕ್ಕೂ ಸಹ ಪರದಾಡುವಂತ ಪರಿಸ್ಥಿತಿ ಎದುರಾಗಿದೆ ಹಾಗಾಗಿ ಅಸಂಘಟಿತ ಕಾರ್ಮಿಕರ ವಲಯಕ್ಕೆ ಸರಕಾರದಿಂದ ಬರುವ ಸವಲತ್ತುಗಳನ್ನು ಒದಗಿಸಬೇಕೆಂದು ಹಾಗೂ ಸ್ಟುಡಿಯೋಗಳನ್ನು ತೆರೆಯಲು ಅನುಮತಿ ನೀಡುವಂತೆ ನಮ್ಮ ಸಂಘದ  ಹಿರಿಯರಿಗೆ ವ್ಯಾಕ್ಸಿನ್ ಕೊಡುವಂತೆ ಶಾಸಕರಿಗೆ  ಮನವಿಯನ್ನು ಈ ದಿನ  ಸಂಘದ ಸದಸ್ಯರು ಹಾಗೂ ಎಲ್ಲಾ ವೃತ್ತಿ ಬಾಂಧವರು ಸೇರಿ ಭಾಗವಹಿಸಿ ಮನವಿಯನ್ನು ಕೊಡಲಾಯಿತು ಮನವಿಯನ್ನು ಸ್ವೀಕರಿಸಿದ ಶಾಸಕರು ಮನವಿಗೆ  ಸ್ಪಂದಿಸಿ ಎಲ್ಲ ರೀತಿಯಲ್ಲೂ ಸಹಕರಿಸುತ್ತೇನೆಂದು ತಿಳಿಸಿದರು   ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀನಿವಾಸ್ ಕಾರ್ಯದರ್ಶಿ ಸುರೇಶ್ ಬಿ ಸದಸ್ಯರಾದ ರಮೇಶ್.ಪ್ರವೀಣ್.ಮಲ್ಲಿಕಾರ್ಜುನ್. ಪಾಷಾ ಐ ಎಚ್.ರಾಜು ದಾಸರಡ್ಡಿ ವಿಘ್ನೇಶ್. ದಯಾನಂದ್. ಬಸವನಗೌಡ ವಿಜಯ್ ಸುಮನ್ ಇನ್ನೂ ಮುಂತಾದ ಛಾಯಾಗ್ರಾಹಕರಿದ್ದರು.  

Leave a Reply

Your email address will not be published. Required fields are marked *