ಹೊನ್ನಾಳಿ : ಕ್ರೀಡೆಯಿಂದ ಆರೋಗ್ಯವೃದ್ದಿಯಾಗುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದ್ದು ಪ್ರತಿಯೊಬ್ಬರೂ ಕ್ರೀಡೆಯನ್ನು ಮೈಗೂಡಿಸಿಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ತಾಲೂಕಿನ ಅರಬಗಟ್ಟೆಯಲ್ಲಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಂಕಿತರೊಂದಿಗೆ ಕ್ರಿಕೇಟ್ ಆಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರು ನೋವನ್ನು ಮರೆತು ಯಾವುದೇ ಜಾತಿ ಬೇದವಿಲ್ಲದೇ ಎಲ್ಲರೂ ಒಂದಾಗಿ ಆಟವಾಡುವುದರ ಜೊತೆಗೆ ನೃತ್ಯ ಮಾಡಿ ಎಂಜಾಯ್ ಮಾಡುತ್ತಿದ್ದಾರೆ, ಯಾರಲ್ಲೂ ಕೂಡೆ ತಾವು ಸೋಂಕಿತರು ಎಂಬ ಬಾವನೆ ಇಲ್ಲ ಎಂದರು.
ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಾನು ಅವರೊಂದಿಗೆ ಕ್ರಿಕೇಟ್ ಹಾಡುವ ಮೂಲಕ ಅವರಿಗೆ ಧೈರ್ಯ ಹೇಳುವ ಕೆಲಸ ಮಾಡುತ್ತಿದ್ದೇನೆ ಎಂದ ಶಾಸಕರು ಕ್ರೀಡೆಯಿಂದ ಆರೋಗ್ಯ ವೃದ್ದಿಯಾಗಲಿದ್ದು ಪ್ರತಿಯೊಬ್ಬರೂ ಕ್ರೀಡೆಯನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಕೊರೊನಾ ಬಂತೆಂದು ಯಾರೂ ಕೂಡ ಚಿಂತೆ ಪಡೆ ಬಾರದು, ಚಿಂತೆ ಚಿತೆಗೇರಿಸುತ್ತೇ ಎಂಬ ಮಾತಿನಂತೆ ಯಾರೂ ಕೂಡ ಕೊರೊನಾ ಬಂತೆಂದು ಎದರ ಬಾರದು, ಧೈರ್ಯವಾಗಿದ್ದರೇ ಕೊರೊನಾವನ್ನೇ ಗೆಲ್ಲಬಹುದು ಎಂದರು.
ಸೋಂಕಿತರಿ ಬ್ಯಾಟು ಬಾಲು ಕೊಡಿಸಿದ ಶಾಸಕರು : ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರು ಬ್ಯಾಟ್ ಬಾಲು ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಅವರ ಮನವಿಗೆ ಸ್ಪಂಧಿಸಿದ ಶಾಸಕರು ಸೋಂಕಿತರಿಗಾಗೀ ನಾಲ್ಕು ಬ್ಯಾಟು ಹಾಗೂ ನಾಲ್ಕು ಬಾಲುಗಳನ್ನು ಉಡುಗೊರೆಯಾಗಿ ನೀಡಿದರಲ್ಲದೇ ಅವರೊಂದಿಗೆ ಕ್ರಿಕೇಟ್ ಆಟವಾಡಿ ಸಂಭ್ರಮಿಸಿದರು.
ಸೋಂಕಿತರಿಗಾಗಿ ಜೋಳದ ರೊಟ್ಟಿ,ಎಣಗಾಯಿ ಪಲ್ಯ : ನ್ಯಾಮತಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್.ಪಿ.ರವಿಕುಮಾರ್, ಅಜಯ್‍ರೆಡ್ಡಿ,ಪ್ರವೀಣ್,ಕುಮಾರ್ ಸೋಂಕಿತರಿಗಾಗೀ ಜೋಳದ ರೊಟ್ಟಿ, ಎಣಗಾಯಿ ಪಲ್ಯದ ವ್ಯವಸ್ಥೆ ಮಾಡಿಸಿದ್ದರು. ಶಾಸಕರೊಂದಿಗೆ ಅವರೂ ಕೂಡ ಸೋಂಕಿತರಿಗೆ ಊಟ ಬಡಿಸಿ,ಸೋಂಕಿತರೊಂದಿಗೆ ಊಟ ಮಾಡಿ ಆರೈಕೆ ಕೇಂದ್ರದಲ್ಲಿನ ಸೋಂಕಿತರಿಗೆ ಧೈರ್ಯದಿಂದ ಇದ್ದು ಕೊರೊನಾ ಗೆಲ್ಲುವಂತೆ ಸಲಹೆ ನೀಡಿದರು.
ಸೋಂಕಿತರಿಗಾಗೀ ನೀರಿನ ವ್ಯವಸ್ಥೆ : ಶಿವಮೊಗ್ಗದ ಮಲವಗೊಪ್ಪದಲ್ಲಿರುವ ಎಸ್‍ಎಸ್‍ಬಿ ಇಂಕ್ ಆಕ್ವಾದ ಮಾಲೀಕರಾದ ಜಿ.ಬಿ..ರವಿ ಅರಬಗಟ್ಟೆಯಲ್ಲಿನ ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರಿಗಾಗೀ ಆಪೇ ಆಟೋದಲ್ಲಿ ನೀರಿನ ಬಾಟಲ್ ನೀಡಿದ್ದು ಶಾಸಕರು ಅವರಿಗೆ ಧನ್ಯವಾದ ಅರ್ಪಿಸಿದರು ಅಷ್ಟೇ ಅಲ್ಲದೇ ಹಾವೇರಿ ಜಿಲ್ಲೆಯ ರೆಟ್ಟಿಹಳ್ಳಿ ತಾಲೂಕಿನ ಮಕ್ರಿ ಗ್ರಾಮದ ನೀಲಮ್ಮ ನಾಗರಾಜ್ ಕೊಪ್ಪದ್ ರೊಟ್ಟಿ ತಂದು ಕೊಟ್ಟಿದ್ದು ಅವರಿಗೆ ಧನ್ಯವಾದ ಅರ್ಪಿಸಿದರು.
ಉಪಹಾರ ವ್ಯವಸ್ಥೆ : ಪ್ರತಿನಿತ್ಯಧಂತೆ ಇಂದೂ ಕೂಡ ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರಿಗೆ, ಸಿಬ್ಬಂದಿಗಳಿಗೆ, ಪೊಲೀಸರಿಗೆ, ಎಪಿಎಂಸಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೇರಿದಂತೆ ನ್ಯಾಮತಿ ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳಿಗೆ ಪ್ರತಿನಿತ್ಯ ಉಪಹಾರ ನೀಡುತ್ತಿದ್ದು ಇಂದು ಕೂಡ ಉಪಹಾರ ನೀಡುವ ಕೆಲಸವನ್ನು ಶಾಸಕರು ಮಾಡಿದರು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿನ ಕೋವಿಡ್ ವಾರ್ಡಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಾಸಕರು ಮಾಡಿದರು.

Leave a Reply

Your email address will not be published. Required fields are marked *