ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಡೊನೇಶನ್ ಹಾವಳಿ ಆರಂಭಗೊಂಡಿದ್ದು ,ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಡೊನೇಶನ್ ನೀಡುವಂತೆ ಪಾಲಕರಿಗೆ ಕರೆಗಳು, ಸಂದೇಶಗಳು ಬರುತ್ತಿವೆ .
COVID ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ ಎಲ್ಲರೂ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.ಖಾಸಗಿ ಶಾಲಾ ಕಾಲೇಜಿನ ಶುಲ್ಕ ಭರಿಸುವುದು ಕಷ್ಟ ಪರಿಸ್ಥಿತಿಯಾಗಿದ್ದು ,ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೂಡಲೇ ಆದೇಶ ಹೊರಡಿಸಿ ಸರ್ಕಾರ ನಿಗದಿಪಡಿಸುವ ಅತ್ಯಂತ ಕಡಿಮೆ ಶುಲ್ಕ ತೆಗೆದುಕೊಳ್ಳಬೇಕು ಎಂದು ಸೂಚಿಸಬೇಕು.ಖಾಸಗಿ ಶಾಲಾ ಕಾಲೇಜುಗಳಿಗೆ ವಿವಿಧ ರೀತಿಯಲ್ಲಿ ಅನೇಕ ವಿನಾಯಿತಿಗಳನ್ನು ಸರ್ಕಾರದಿಂದ ನೀಡಲಾಗಿದೆ .COVID ಪರಿಸ್ಥಿತಿ ಇರುವುದರಿಂದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ನೀಡಿದಲ್ಲಿ ಲಕ್ಷಾಂತರ ಬಡವರಿಗೆ ಅನುಕೂಲ ಜತೆಗೆ ಮಾಡಿದಂತೆ ಆಗುತ್ತದೆ ಮಾಡಿದಂತೆ ಆಗುತ್ತದೆ .ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸಲು ತಾವುಗಳು ಜಿಲ್ಲಾಡಳಿತದ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು .ಸರ್ಕಾರ ನಿಗದಿಪಡಿಸಿರುವ ಶುಲ್ಕ ಪಡೆಯುವಂತೆ ನಿರ್ದೇಶನ ನೀಡಲು ಮುಂದಾಗಬೇಕು .ಖಾಸಗಿ ಶಾಲಾ ಕಾಲೇಜುಗಳು ಪಾಲಕರಿಗೆ ಕಿರುಕುಳ ನೀಡುವುದನ್ನು ತಪ್ಪಿಸಬೇಕು ಹಾಗೂ ಪೋಷಕರ ಮೇಲೆ ಶುಲ್ಕ ಕಟ್ಟುವಂತೆ ಒತ್ತಡ ಹೇರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಶಿವಮೊಗ್ಗ ಜಿಲ್ಲಾ ಎನ್ ಎಸ್ ಯುಐ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು
ಈ ಸಂದರ್ಭದಲ್ಲಿ Nsui ಜಿಲ್ಲಾಧ್ಯಕ್ಷ ಬಾಲಾಜಿ ,ನಗರ ಅಧ್ಯಕ್ಷ ವಿಜಯ್ ,ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಚೇತನ್ ,ಯುವ ಕಾಂಗ್ರೆಸ್ ಮುಖಂಡ ಮಧುಸೂದನ್ ,ಗಿರೀಶ್ .ಡಿ.ರೈ ,ಸಂದೇಶ ,ಅನಿಲ್ ಆಚಾರ್ ಹಾಗೂ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed