೧೯೯೫ ಡಿಸೆಂಬರ ನಂತರಶಾಶ್ವತ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳು ಹಾಗೂ ಉಪನ್ಯಾಸಕರುಗಳಿಗೆ ಸರ್ಕಾರ ವು ಇಲ್ಲಿಯವರೆಗೆ ಅನುದಾನವನ್ನು ವಿಸ್ತರಣೆ ಮಾಡಿರುವುದಿಲ್ಲ.ಇದು ದುರಂತವೆ ಸರಿ.ಸರ್ಕಾರವು ರಾಜ್ಯದಲ್ಲಿ ಎಲ್ಲಾ ವರ್ಗದವರಿಗೆ ಪ್ರತಿ ವರ್ಷ ಅನುದಾನವನ್ನು ನಿಗದಿ ಮಾಡಿ ಬಜೆಟ್ಟಿನಲ್ಲಿ ಅವಕಾಶವನ್ನು ಒದಗಿಸುತ್ತದೆ. ಆದರೆ ಶಿಕ್ಷಕರ ಬೇಡಿಕೆಗಳನ್ನು ಶಿಕ್ಷಕರ ಪರಿಸ್ಥಿತಿಯನ್ನು ಎಳ್ಳಷ್ಟೂ ಗಮನಕ್ಕೆ ತೆಗೆದುಕೊಳ್ಳದೆ ಬಜಿಟ್ ತಯಾರಿಸುವದು ವಿಷಾದನಿಯ ಸಂಗತಿ.೧೯೯೫ ರಿಂದಲೂ ಇಲ್ಲಿಯವರೆಗೆ ಶಿಕ್ಷಕರಗಳು ಆಡಳಿತ ಮಂಡಳಿಯವರು ಕೊಡುವ ಅಲ್ಪಸಂಬಳದಲ್ಲಿಯೇ ಜೀವನ ನಡೆಸುತ್ತಾ ಬರುತ್ತಿದ್ದಾರೆ.ಇವರ ದಾರುನ್ಯಸ್ತಿತಿ ಎಳ್ಳಷ್ಟೂ ಸರ್ಕಾರದ ಗಮನಕ್ಕೆ ಬರುವುದಿಲ್ಲವೇ.೧೯೯೫ರ ನಂತರ ಅನುದಾನ ವಿಸ್ತರಣೆ ಮಾಡದಿದ್ದರೂ ಕೊನೆ ಪಕ್ಷ consolidated ವೇತನವನ್ನಾದರೂ ಕನಿಷ್ಠ ೬೦೦೦ ರೂಪಾಯಿಯನ್ನು ನಿಗದಿ ಮಾಡಲು ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತೇನೆ.ಹಾಗೇಯೇ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನುದಾನ ರಹಿತ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಇಲ್ಲಿಯವರೆಗೆ ವೇತನವಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ.ಅನುದಾನಿತ ಸಂಸ್ಥೆಗಳಲ್ಲಿಯೇ ಅನುದಾನ ರಹಿತ ಶಿಕ್ಷಕರು , ಹಾಗು ಅನುದಾನ ಪಡೆಯುವ ಶಿಕ್ಷಕರು ಎಂಬ ಭೇದಭಾವ ಮಾಡುತ್ತಿರುವುದು ಅನ್ಯಾಯವೇ ಅಲ್ಲವೇ? ಆದ್ದರಿಂದ ಈ ಬೇಧಭಾವ ಮಾಡದೇ ವೇತನ ನೀಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ.ಹೆಚ್ಚುವರಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳು ನಿವೃತ್ತಿಯಾದ ನಂತರ ಆ ಹುದ್ದೆಗಳನ್ನು ನಿವೃತ್ತಿಯಾದ ಹುದ್ದೆಗಳೆಂದೆ ಪರಿಗಣಿಸಿ ತಕ್ಷಣ ತುಂಬಿ ಕೊಳ್ಳಲು ಅನುಮತಿ ನೀಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ.ಇದರಿಂದ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಆಗುವುದಿಲ್ಲ.ಇದರಿಂದ ಹೆಚ್ಚುವರಿ ವಿಭಾಗಗಳು ಇರುವ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆಗೆ ಬಹಳ ಅನುಕೂಲವಾಗುತ್ತದೆ.ಎನೇ ಆದರೂ ಅನುದಾನ ಶಿಕ್ಷಕರ ಹಕ್ಕಾಗ ಬೇಕು.ಇದಕ್ಕೆ ನನ್ನ ನಿರಂತರ ಹೋರಾಟ.ಇದುವೇ ನನ್ನ ಅಂತಿಮ ಗುರಿ.

ಎನ್.ಬಿ.ಬನ್ನೂರ
ರಾಜ್ಯ ಕಾರ್ಯದರ್ಶಿ ಶಿಕ್ಷಕರ ಹಾಗೂ ಪದವಿಧರ ಘಟಕ,
ಕೆಪಿಸಿಸಿ ಬೆಂಗಳೂರು.

Leave a Reply

Your email address will not be published. Required fields are marked *