ಹೊನ್ನಾಳಿ ; ಸೇವೆಯನ್ನು ಮಾಡದವರು ಜನಪ್ರತಿನಿಧಿಗಳೇ ಅಲ್ಲ, ಸೇವೆ ಮಾಡದ ಜನಪ್ರತಿನಿಧಿಗಳೇ ಇಲ್ಲಾ ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಡಾ|| ಶಾಂತವೀರ ಮಹಾಸ್ವಾಮಿಜಿ ಹೇಳಿದರು.
ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಕೇಂದ್ರದಲ್ಲಿ ಸೋಂಕಿತರಿಗೆ ಕುಂಚಿಟಿಗ ಯುವ ವೇದಿಕೆಯಿಂದ ಹಮ್ಮಿಕೊಂಡಿದ್ದ ಹೋಳಿಗೆ ಊಟ ವಿತರಣಾ ಕಾರ್ಯಕ್ರಮದಲ್ಲಿ ಸೋಂಕಿತರಿಗೆ ಊಟ ಬಡಿಸಿ ಮಾತನಾಡಿದರು.
ಇವತ್ತು ನಮ್ಮ ಸಮಾಜದಿಂದ ಸೋಂಕಿತರಿಗೆ ಊಟ ಬಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೆ ಅದಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯರೇ ಪ್ರೇರಣೆ ಎಂದ ಸ್ವಾಮೀಜಿ ಕರೊನಾ ಸಂಕಷ್ಟದ ಸಮಯದಲ್ಲಿ ಎಷ್ಟೋ ಜನ ಶಾಸಕರು ತಮ್ಮ ಕುಟುಂಬದವರ ಜೊತೆ ಬೆಂಗಳೂರಿನಲ್ಲಿದ್ದು ತಮ್ಮ ಹಿಂಬಾಲಕರ ಅಥವಾ ಆಪ್ತ ಕಾರ್ಯದರ್ಶಿಗಳ ಮುಖಾಂತರ ಕೆಲಸ ಮಾಡಿಸುತ್ತಾರೆ, ಆದರೆ ನಿಮ್ಮ ತಾಲೂಕಿನ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಒಂದು ಕ್ಷಣವೂ ಎಲ್ಲೂ ಹೋಗದೆ ಇಲ್ಲೇ ಇದ್ದು ಸೋಂಕಿತರಿಗೆ ಬೇಕಾದ ಔಷೋದೋಪಾಚಾರ,ಬಿಸಿ ಬಿಸಿ ಊಟ ಹಾಗೂ ಉಪಹಾರ ಮತ್ತು ಬೆಳ್ಳಂ ಬೆಳಗ್ಗೆ ಸೋಂಕಿತರಿಗೆ ಯೋಗಾ ಹಾಗೂ ಸಂಜೆ ಸಂಗೀತ ಹೀಗೆ ಸೋಂಕಿತರು ಗುಣಮುಖರಾಗಿ ಹೋಗುವವರೆಗೂ ಅವರ ಉಪಚಾರ ಮಾಡುತ್ತ ಆರೈಕೆ ಕೇಂದ್ರದಲ್ಲಿರುವ ಅಪರೂಪದ ಶಾಸಕ ಹಾಗೂ ಇತರರಿಗೆ ಮಾದರಿ ಶಾಸಕರಾಗಿದ್ದಾರೆಂದರು.
ಸೇವೆಯೇ ಪರಮಶ್ರೇಷ್ಠ ಹಾಗೂ ಪರಮಧರ್ಮ, ಅಂತಹ ಸೇವೆಯನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಮಾಡುತ್ತಿದ್ದಾರೆ, ಅವರು ಅಧಿಕಾರಿಗಳ ಮುಖಾಂತರ ಕೆಲಸ ಮಾಡಿಸ ಬಹುದಿತ್ತು, ಆದರೇ ಸ್ವತಃ ಶಾಸಕರೇ ನಿಮ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅದು ನಿಮ್ಮ ಪುಣ್ಯ ಎಂದ ಸ್ವಾಮೀಜಿ ಒಬ್ಬ ಶಾಸಕ ಹೇಗೆಲ್ಲಾ ಜನರ ಸೇವೆ ಮಾಡಬಹುದು ಎಂದು ನಿಮ್ಮ ಶಾಸಕರು ಆರೈಕೆ ಕೇಂದ್ರದಲ್ಲಿ ಸೇವೆ ಮಾಡುತ್ತ ಇತರರಿಗೆ ತೋರಿಸಿ ಕೊಟ್ಟಿದ್ದಾರೆ ಎಂದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ ಸ್ವಾಮೀಜಿಗಳು ಒಡೆದ ಮನಸ್ಸುಗಳನ್ನು ಕುಟ್ಟುವಂತಹ ಕೆಲಸಗಳನ್ನು ಮಾಡುವುತ್ತಿದ್ದಾರೆ, ಆದರೇ ಕೆಲ ರಾಜಕಾರಣಿಗಳು ಕತ್ತರಿ ಮೂಲಕ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತು ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಸ್ವಾಮೀಜಿಗಳು ಸೂಜಿ ದಾರ ಸೇರಿದರೆ ಹೇಗೆ ಒಂದು ಹರಿದಿರುವ ಬಟ್ಟೆಯನ್ನು ಹೊಲಿಯಬಹುದೋ ಹಾಗೆ ಸೂಜಿ ದಾರದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಶ್ರೀಗಳು ನಮ್ಮ ಆರೈಕೆ ಕೇಂದ್ರಕ್ಕೆ ಬಂದು ಸೋಂಕಿತರಿಗೆ ಹೋಳಿಗೆ ಊಟ ಬಡಿಸಿ ಆಶೀರ್ವಾದ ಮಾಡಿದ್ದಾರೆ ಅವರಿಗೆ ತಾಲೂಕಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದ ಶಾಸಕರು
ಸುಂಕದಕಟ್ಟೆ ಗ್ರಾಮಸ್ಥರಿಗೆ ಊಟ ಹಾಗೂ ಉಪಹಾರಕ್ಕಾಗಿ 4.25 ಕ್ವಿಂಟಾಲ್ ಅಕ್ಕಿಯನ್ನು ನೀಡಿದ್ದು ಅದನ್ನು ಶಾಸಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕುಂಚಿಟಿಗ ಸಮಾಜದ ಜಿಲ್ಲಾಧ್ಯಕ್ಷ ರಂಗನಗೌಡ್ರು,ಮುಖಂಡರಾದ ನರಸಿಂಹಮೂರ್ತಿ,ಎಸ್,ಬಿ,ಮಂಜಪ್ಪ,ಎಸ್.ಕೆ.ಕರಿಯಪ್ಪ,ಯುವ ಮುಖಂಡರಾದ ರಾಜೇಶ್ ಹನಗವಾಡಿ, ದಿನೇಶ್ ಎರೆಹಳ್ಳಿ ಸೇರಿದಂತೆ ಮತ್ತಿತತರಿದ್ದರು.

Leave a Reply

Your email address will not be published. Required fields are marked *