ನಗರದಲ್ಲಿ ವ್ಯಾಕ್ಸಿನೇಷನ್ ಕ್ರಾಂತಿಯನ್ನೇ ಪ್ರಾರಂಭಿಸಿದ್ದ ಶಾಮನೂರು ಕುಟುಂಬ, ಈಗ 18 ವರ್ಷ ಮೇಲ್ಪಟ್ಟವರಿಗೂ ಉಚಿತ ವ್ಯಾಕ್ಸಿನೇಷನ್ ನೀಡುವ ಮೂಲಕ ಯುವಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸರ್ಕಾರ ಮೊದಲು 18 ವರ್ಷ ಮೇಲ್ಪಟ್ಟ ವರಿಗೆ ವ್ಯಾಕ್ಸಿನೇಷನ್ ನೀಡುವುದಾಗಿ ತಿಳಿಸಿ, ನಂತರ ತಾತ್ಕಾಲಿಕವಾಗಿ ಮುಂದೂಡಿದ್ದರು, ಆದರೆ ಶಾಮನೂರು ಕುಟುಂಬ 45 ವರ್ಷ ಮೇಲ್ಪಟ್ಟವರ ಜೊತೆಗೆ 18 ವರ್ಷ ಮೇಲ್ಪಟ್ಟವರೆಗೂ ಸಹ ವ್ಯಾಕ್ಸಿನೇಷನ್ ನೀಡುವ ಮೂಲಕ ದೇಶದಲ್ಲಿ ಹೊಸ ಇತಿಹಾಸ ನಿರ್ಮಿಸಿ ಎಲ್ಲರೂ ದಾವಣಗೆರೆ ಕಡೆ ನೋಡುವಂತೆ ಮಾಡಿದ್ದಾರೆ.
ಈ ಹಿಂದೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಶಿಕ್ಷಣ ಕ್ರಾಂತಿಯ ಮೂಲಕ ದಾವಣಗೆರೆ ನಗರವನ್ನು ದೇಶದಲ್ಲಿಯೇ ಪ್ರಸಿದ್ಧಿ ಮಾಡಿದಂತಹ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು, ಇಂದು ವೈಯಕ್ತಿಕವಾಗಿ ಉಚಿತ ಲಸಿಕೆ ನೀಡುವ ಮೂಲಕ ಮಗದೊಮ್ಮೆ ದಾವಣಗೆರೆ ನಗರವನ್ನು ದೇಶದಲ್ಲಿಯೇ ಪ್ರಸಿದ್ಧಿ ಮಾಡಿದ್ದಾರೆ.