ಶಿಬಿರ
ಲಸಿಕೆ ಪಡೆದರೆ ಕರೋನಾದಿಂದಾಗುವ
ಸಾವು ತಪ್ಪಿಸಬಹುದು: ಡಾ||
ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ
ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ದಾವಣಗೆರೆ ನಾಗರೀಕರಿಗಾಗಿ ಹಮ್ಮಿಕೊಂಡಿರುವ
ಉಚಿತ ಲಸಿಕಾ ಶಿಬಿರ ಇಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ
ಪಿ.ಜೆ.ಬಡಾವಣೆಯಲ್ಲಿ ನಡೆಯಿತು.
ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಲಸಿಕೆ ಕೇಂದ್ರಕ್ಕೆ
ಭೇಟಿ ನೀಡಿ ಲಸಿಕೆ ಪಡೆದ ನಾಗರೀಕರ ಯೋಗಕ್ಷೇಮವನ್ನು ವಿಚಾರಿಸಿದರು. ಲಸಿಕೆ
ಪಡೆದವರು ಕರೋನಾ ಸಾವಿನಿಂದ ತಪ್ಪಿಸಿಕೊಂಡಂತೆ ಆಗಲಿದ್ದು,
ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ
ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ಸೂಚನೆ ಮೇರೆಗೆ ದಾವಣಗೆರೆಯ ಬಾಪೂಜಿ
ಆಸ್ಪತ್ರೆ ಸಿಬ್ಬಂದಿವರ್ಗದವರು ಲಸಿಕಾ ಶಿಬಿರ ನಡೆಸಿಕೊಟ್ಟರು.
ಲಸಿಕೆ ಪಡೆದ ನಾಗರೀಕರಿಗೆ ನೀರು ಮತ್ತು ಬಿಸ್ಕೇಟ್ ವ್ಯವಸ್ಥೆಯನ್ನು
ಮಾಡಲಾಗಿತ್ತು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್
ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್,
ಮುಖಂಡರುಗಳಾದ ಉಮಾಶಂಕರ್, ರವಿಸ್ವಾಮಿ, ವಾರ್ಡ್‍ನ ಮುಖಂಡರುಗಳಾದ
ವಿಜಯ ಎಸ್.ಜೈನ್, ಮೋಹನ್ ಲಾಲ್, ವೆಂಕಟೇಶ್, ಫಂಚಪ್ಪ ತೇರದಾಳ್, ಮಧು
ಪವಾರ್, ಶ್ರೀಕಾಂತ್ ಬಗರೆ, ಪ್ರವೀಣ್ ಫಾರ್ಮ, ಪರಶುರಾಮ್, ಪ್ರದೀಪ್ ಕನ್ನವರ್,
ರಾಜು ಚವಾಣ್, ಯುವರಾಜ್, ಸಿರಿಲ್, ಜಗದೀಶ್, ನಿಖಿತ್ ಶೆಟ್ಟಿ, ನಿಧಿಶ್ ಶೆಟ್ಟಿ
ಮತ್ತಿತರರಿದ್ದರು.