ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯಗೆ ಸರಕಾರಿ ಕಟ್ಟಡದಲ್ಲಿ ಹೋಮ, ಹವನ ಮಾಡೋದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ಎಸಿ, ಸಿಪಿಐ ಹೇಗೆ ಅನುಮತಿ ನೀಡಿದ್ದಾರೆಯೋ, ಹಾಗೆ ನಮಗೂ ಕೂಡ ಹೋಮ ಹವನ ಮಾಡಲು ಪರ್ಮಿಷನ್ ಕೊಡಬೇಕು. ಇಲ್ಲದೇ ಇದ್ದರೆ ಕೇಸ್ ಹಾಕಬೇಕು. ಇವೆರಡರಲ್ಲಿ ಒಂದೂ ಕೂಡ ಆಗದೇ ಇದ್ದರೆ ಜಿಲ್ಲಾದ್ಯಂತ ಪ್ರತಿಭಟನೆ

ಹಮ್ಮಿಕೊಳ್ಳಲಾಗುವುದು ಎಂದು ಹೊನ್ನಾಳಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರು ಕೋವಿಡ್ ನಿಯಮಗಳನ್ನು ಉಲ್ಲಘಂನೆ ಮಾಡಿದ್ದಾರೆ. ಮಾಜಿ ಶಾಸಕ ಮೌಡ್ಯ ಬಿತ್ತುತ್ತಿದ್ದಾರೆ. ವರ್ಗಾವಣೆ ಭಯದಿಂದ ನಾವೂ ಕೂಡ ಮನುಷ್ಯರೇ, ನಮಗೂ ದೇವರ ಮೇಲೆ ನಂಬಿಕೆ ಇದೆ. ನಮ್ಮ ಕಾರ್ಯಕರ್ತರು ಕೂಡ ಹೋಮ ಹವನ ಮಾಡುತ್ತಾರೆ. ನಮಗೂ ಪರ್ಮಿಷನ್ ಕೊಡಿ ಎಂದು ಕೇಳಿದ್ದೇನೆ. ಆದರೆ, ಜಿಲ್ಲಾಧಿಕಾರಿ ಸೇರಿ

ಎಲ್ಲರೂ ಪೋನ್ ಸ್ವಿಚ್ ಆಫ್ ಮಾಡಿದ್ದಾರೆ. ಕಾನೂನು ನಿಯಮಗಳು ಪ್ರತಿಯೊಬ್ಬರಿಗೂ ಒಂದೇ, ಆದ್ದರಿಂದ ಅವರಿಗೆ ಕೇಸ್ ಹಾಕಬೇಕು, ಇಲ್ಲದಿದ್ದರೆ ನಮಗೂ ಪರ್ಮಿಷನ್ ಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *