ದಾವಣಗೆರೆ ತಾಲೂಕು ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಆನಗೋಡು ಬಳಿಯಿರುವ ಪೆಟ್ರೋಲ್ ಬಂಕ್ ಮುಂದೆ ಮಾಜಿ ಕೇಂದ್ರ ಸಚಿವರಾದ ಕೆ.ಹೆಚ್.ಮುನಿಯಪ್ಪ ನವರು ಹಾಗೂ ಜಿಲ್ಲಾ ಪಂಚಾಯತ ಸದಸ್ಯರಾದ ಕೆ.ಎಸ್.ಬಸವಂತಪ್ಪ ನವರ ನೇತೃತ್ವದಲ್ಲಿ ತೈಲ ಬೆಲೆಗಳನ್ನು ಏರಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ಈ‌ ಸಂದರ್ಭದಲ್ಲಿ ಮಾತನಾಡಿದ ಮುನಿಯಪ್ಪನವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು , ನರೇಂದ್ರ ಮೋದಿಯವರು ಈ ದೇಶದ ಬಡ ಜನರಿಗೆ ದೊಡ್ಡ ಹೊರೆಯಾಗಿದ್ದಾರೆ , ಇವತ್ತು ಮದ್ಯಮ ಕುಟುಂಬದ ಜನರ ಜೀವನ ಅಸ್ತವ್ಯಸ್ತವಾಗಿದ್ದು ಇಂತಹ ಲಾಕ್ ಡೌನ್ ಸಮಯದಲ್ಲಿ ತೈಲ ಬೆಲೆಗಳ ದರವನ್ನು 100 ರ ಗಡಿ ದಾಟಿಸಿದ್ದು ವಾಹನ ಸವಾರರಿಗೆ ತುಂಬಾ ದೊಡ್ಡ ಸಮಸ್ಯೆಯಾಗುತ್ತದೆ ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೈಲ ಬೆಲೆಗಳು ಹಾಗೂ ದಿನ ಬಳಕೆಯ ದರಗಳನ್ನು ಕಡಿಮೆ ಮಾಡಬೇಕೆಂದು ಪ್ರತಿಭಟನೆಯ ಮೂಲಕ ಒತ್ತಾಯಿಸಿದರು.

ಇದೆ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಸೇರಿದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಪ್ರತಿಭಟನೆಯಲ್ಲಿ ಇರುವ ಉಮ್ಮಸ್ಸು , ಆಸಕ್ತಿ ಮುಂದೆ ಬರುವ ಜಿಲ್ಲಾ ಪಂಚಾಯತ , ತಾಲ್ಲೂಕು ಪಂಚಾಯತ , ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಈಗೆ ಇರಬೇಕು ಸಹೋದರ ಕೆ.ಎಸ್.ಬಸವಂತಪ್ಪ ನವರು ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಅವರಿಗೆ ನಿಮ್ಮೆಲ್ಲರ ಬೆಂಬಲ , ಸಹಕಾರ ಸದಾಕಾಲ ಇರಲಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ ‌ಸದಸ್ಯರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೈಲ ಬೆಲೆಗಳ ಹೆಚ್ಚಳ ಮಾಡುವುದರ ಮುಖಾಂತರ ಜನರ ಹತ್ತಿರ ಹಗಲು ದರೋಡೆ ಮಾಡುತ್ತಿದ್ದಾರೆ , ತೈಲ ಬೆಲೆ ಹೆಚ್ಚಳದಿಂದ ರೈತರ ಜೀವನ ಅಸ್ತವ್ಯಸ್ತವಾಗಿದ್ದು ಜಮೀನು ಉಳುಮೆ ಮಾಡಲು ಟ್ರಾಕ್ಟರ್ ದರ ಹೆಚ್ಚಳವಾಗಿದ್ದು ರೈತರು ಉಳುಮೆ ಮಾಡದೆ ಇರುವಂತಹ ಪರಿಸ್ಥಿತಿ ಎದುರಾಗಿದೆ ಹಾಗಾಗಿ ಸರ್ಕಾರ ಈ ಕೂಡಲೇ ಎಲ್ಲಾ ಗೃಹ ಬಳಕೆಯ ಬೆಲೆಗಳನ್ನು ಇಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಸರ್ಕಾರಗಳ ವಿರುದ್ದ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ದಾವಣಗೆರೆ ಎ.ಪಿ.ಎಂ.ಸಿ.ಅಧ್ಯಕ್ಷರಾದ ಎಸ್.ಕೆ.ಚಂದ್ರಪ್ಪ , ಗುಮ್ಮನೂರು ಶಂಭುಲಿಂಗಪ್ಪ , ಆನಗೋಡು ಬಸವರಾಜ , ಕರಿಬಸಪ್ಪ , ಕೊಗ್ಗನೂರು ಹನುಮಂತಪ್ಪ , ಕಾರ್ಮಿಕ ಘಟಕದ ಲೋಕೆಶಪ್ಪ , ಮ್ಯಾಸರಹಳ್ಳಿ ಪ್ರಭಣ್ಣ , ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು , ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *