ಶಿಕಾರಿಪುರ– ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕಿ ಮತ್ತು ಸಹಾಯಕರ ಹುದ್ದೆಯ ಪದನಾಮ ಬದಲಾವಣೆಯ ಸರ್ಕಾರದ ಕ್ರಮವನ್ನು ಶಿಕಾರಿಪುರ ತಾಲ್ಲೂಕಿನ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಕುಮಾರಿ ಸ್ವಾಗತಿಸಿದ್ದಾರೆ .
ಸುಮಾರು ಮೂವತ್ತು ವರ್ಷಗಳ ಹಿಂದೆ ಇದೇ ಆರೋಗ್ಯ ಸಹಾಯಕಿಯರನ್ನು ಎ ಎನ್ ಎಂ ಎಂಬ ನಾಮಾಂಕಿತದಿಂದ ಕರೆಯಲಾಗುತ್ತಿತ್ತು ಸದರಿ ಈ ಪದನಾಮದ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು ಇದರ ವಿರುದ್ಧ ಅವರ ಸಂಘದ ಸುದೀರ್ಘ ಇಪ್ಪತ್ತು ವರ್ಷಗಳ ಕಾಲದ ಹೋರಾಟದ ಹಿನ್ನೆಲೆಯಲ್ಲಿ
ಎ ಎನ್ ಎಂ ಬದಲಾಗಿ ಸರ್ಕಾರ ಮಹಿಳೆಯರನ್ನು ಆರೋಗ್ಯ ಸಹಾಯಕಿ ಎಂತಲೂ ಪುರುಷರನ್ನು ಆರೋಗ್ಯ ಸಹಾಯಕ ಅಂತಲೂ ಸರ್ಕಾರ ಹುದ್ದೆಯ ಪದನಾಮ ಬದಲಾವಣೆ ಮಾಡಿತ್ತು .
ತದನಂತರ ಸದರಿ ರಾಜ್ಯ ಕೇಂದ್ರದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆರೋಗ್ಯ ಇಲಾಖೆಯಲ್ಲಿ ವಿವಿಧ ವೃಂದದ ಹುದ್ದೆಯ ಪದನಾಮ ಬದಲಾವಣೆ ಮಾಡಿದ ರೀತಿಯಲ್ಲಿ ನಮಗೂ ಗೌರವ ಯುತವಾದ ಪದನಾಮ ಬದಲಾವಣೆ ಮಾಡಿಕೊಡಿ ಎಂದು ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಆರೋಗ್ಯ ಸಹಾಯಕಿಯರನ್ನು ಕಿರಿಯ ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಎಂತಲೂ ಆರೋಗ್ಯ ಸಹಾಯಕರನ್ನು ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಎಂತಲೂ ಹುದ್ದೆಯ ಮರುನಾಮಕರಣ ಮಾಡಿರುವ ಸರ್ಕಾರದ ಕ್ರಮವನ್ನು ತಾಲ್ಲೂಕು ಸಂಘದ ಉಪಾಧ್ಯಕ್ಷರಾದ ಜ್ಯೋತಿ ಕಿರಣ್ .ಗೌರವ ಅಧ್ಯಕ್ಷರಾದ ಸುರೇಶ್ ಎನ್ ವಿ ಪ್ರಧಾನ ಕಾರ್ಯದರ್ಶಿ ರಂಜಿತ್ ಕುಮಾರ್ ಇವರು ತುಂಬು ಹೃದಯದಿಂದ ಸ್ವಾಗತಿಸಿರುವ ಅವರು ಇನ್ನು ಮುಂದೆ ಆರೋಗ್ಯ ಇಲಾಖೆಯ ಎಲ್ಲಾ ಹಾಜರಾತಿ ಪುಸ್ತಕ ಹಾಗೂ ಇತರೆ ಪತ್ರವ್ಯವಹಾರಗಳಲ್ಲಿ ಹೊಸಪದ ನಾಮವನ್ನೇ ಬಳಸಬೇಕೆಂದು ಇಲಾಖೆಯ ಎಲ್ಲಾ ಅಧಿಕಾರಿಗಳಲ್ಲಿ ಮನವಿ ಮಾಡುತ್ತಾ ಹುದ್ದೆಯ ಪದನಾಮ ಬದಲಾವಣೆಗೆ ಶ್ರಮಿಸಿದ ಆರೋಗ್ಯ ಇಲಾಖೆಯ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಪುಟ್ಟಸ್ವಾಮಿ ಮತ್ತು ಆರೋಗ್ಯ ಸಹಾಯಕರ ಸಂಘದ ರಾಜ್ಯಾಧ್ಯಕ್ಷರಾದ ಕುಂಬಾರ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಗೌಡ ಮತ್ತು ಇತರ ಎಲ್ಲಾ ಹಂತದ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ .
ತಾಲೂಕ್ ಆರೋಗ್ಯ ಸಹಾಯಕರ ಸಂಘದ ಅಧ್ಯಕ್ಷ ಶ್ರೀಮತಿ ಕುಮಾರಿ
ಉಪಾಧ್ಯಕ್ಷ ಜೋತಿ ಕಿರಣ್
ಗೌರವಾಧ್ಯಕ್ಷ N.V. ಸುರೇಶ್.

Leave a Reply

Your email address will not be published. Required fields are marked *