ಶಿವಮೊಗ್ಗ, ಜೂನ್ 14 ಕೊರೋನ ಸೋಂಕಿನಿಂದ ಮೃತಪಟ್ಟ ಬಿ.ಪಿ.ಎಲ್.ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಗಳ ಪರಿಹಾರಧನ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ ಯಾರಾದರೂ ಮಹಾಮಾರಿ ಕೊರೋನಕ್ಕೆ ಬಲಿಯಾದರೆ ಅಂತಹವರ ಕುಟುಂಬಕ್ಕೆ ಒಂದು ಲಕ್ಷ ರೂಪಾಅಯಿ ನೀಡಲಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದ್ದಾರೆ. ಈ ಕುಟುಂಬದಲ್ಲಿ ವಯಸ್ಕರು ಮೃತಪಟ್ಟಿದ್ದರೆ ಅವರ ಹೆಸರಿನಲ್ಲಿ ಓರ್ವರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಕೋವಿಡ್‍ನಿಂದ ಸಾಕಷ್ಟು ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳೇ ಮೃತರಾಗಿದ್ದಾರೆ. ಪರಿಣಾಮವಾಗಿ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗಾಗಿ ಪರಿಹಾರ ಧನ ನೀಡಲಾಗುತ್ತಿದೆ.. ಇದರಿಂದ ರಾಜ್ಯದಲ್ಲಿ 25-30ಸಾವಿರ ಕುಟುಂಬಕ್ಕೆ ಅನುಕೂಲವಾಗಲಿದೆ. ಈ ಯೋeನೆಯ ಅನುಷ್ಠಾನದಿಂದಾಗಿ ಸರ್ಕಾರಕ್ಕೆ 250-300ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದ ಅವರು ತಿಳಿಸಿದ್ದಾರೆ.
ಇಂತಹ ಯೋಜನೆಯನ್ನು ಅನುಷ್ಠಾನಕ್ಕೆ ತಂದ ದೇಶದಲ್ಲಿಯೇ ಮೊದಲ ರಾಜ್ಯ ನಮ್ಮದಾಗಲಿದೆ ಎಂದ ಅವರು, ನೊಂದವರ, ಬಡವರ ಸಂಕಷ್ಟಕ್ಕೆ ಸರ್ಕಾರ ಸಕಾಲಿಕವಾಗಿ ಸ್ಪಂದಿಸುತ್ತಿರುವುದು ಸ್ಮರಣೀಯವಾದುದಾಗಿದೆ. ಬಡವರ ಸಂಕಷ್ಟವನ್ನು ಅರಿತು ಅವರ ನೆರವಿಗೆ ಧಾವಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *