ದಯವಿಟ್ಟು ಎಲ್ಲಾ ನಾಗರೀಕರು ವದಂತಿಗಳಿಗೆ ಕಿವಿಗೊಡದೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮನವಿ ಮಾಡಿದ್ದಾರೆ.

ಜನರು ಕೊರೊನ ರೋಗದಿಂದ ತತ್ತರಿಸುತ್ತಿರುವಾಗ ಅನೇಕ ಸಾವುಗಳು ಸಂಭವಿಸಿದಾಗ ಸರ್ಕಾರವು ಕೈಚೆಲ್ಲಿ ಸರಿಯಾಗಿ ಲಸಿಕೆಯ ನಿರ್ವಹಣೆ ಆಗದೆ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಂಡಂಥಹ ಸಂಧರ್ಭದಲ್ಲಿ ಪರಿಸ್ಥಿತಿ ಮನಗಂಡ ನಮ್ಮ ಹೆಮ್ಮೆಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಉಚಿತವಾಗಿ ಲಸಿಕೆಯನ್ನು ನೀಡುವ ವಾಗ್ದಾನ ಮಾಡಿದರು ಅದರಂತೆ ಎಲ್ಲಾ ವಾರ್ಡ್ ಗಳಲ್ಲಿ ಶಿಬಿರವನ್ನು ನಡೆಸಿ ದಾವಣಗೆರೆಯನ್ನು ಕೊರೊನ ಮುಕ್ತ ನಗರವನ್ನಾಗಿ ಶ್ರಮಿಸುತ್ತಿರುವ ಸಂಧರ್ಭದಲ್ಲಿ ಕೆಲವರು ಲಸಿಕೆಯಿಂದ ಸಮಸ್ಯೆ ಉಂಟಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಭಯಭೀತರನ್ನಾಗಿ ಮಾಡುತ್ತಿದ್ದಾರೆ. ಆದ್ದರಿಂದ ಮಹಾ ಜನತೆಗೆ ನನ್ನ ಮನವಿ ಏನೆಂದರೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿ ಬಂದು ಲಸಿಕೆಯನ್ನು ಹಾಕಿಸ್ಕೊಂಡು ಕೊರೊನವನ್ನು ಎದುರಿಸಲು ಕೈಜೋಡಿಸಿ ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ. ನಾವು ಸಹ ಲಸಿಕೆಯನ್ನು ಹಾಕಿಸಿಕೊಂಡಿದ್ದು ಅದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಆರೋಗ್ಯವಾಗಿದ್ದೇವೆ. ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಯಾವುದೇ ಭಯವಿಲ್ಲದೆ ಲಸಿಕೆ ಹಾಕಿಸಿಕೊಳ್ಳಿ.

ನಾಳೆ ದಿನಾಂಕ 15 ಜೂನ್ 20201ರಂದು ಮಿಲ್ಲತ್ ಶಾಲೆಯ ಆವರಣದಲ್ಲಿ ವಾರ್ಡ್ ನಂಬರ್ 2,3,4 ರ ಜನರಿಗೆ ಉಚಿತ ಲಸಿಕಾ ಶಿಬಿರವನ್ನು ಏರ್ಪಡಿಸಲಾಗಿದೆ ಆದ್ದರಿಂದ ಜನರು ಭಯ ಬಿಟ್ಟು ಬಂದು ಲಸಿಕೆ ಹಾಕಿಸಿಕೊಂಡು ಕೊರೊನವನ್ನು ನಿಯಂತ್ರಿಸಲು ನಮ್ಮೊಂದಿಗೆ ಸಹಕರಿಸಲು ಎಲ್ಲಾ ನಾಗರೀಕರಲ್ಲೂ ಮನವಿ ಮಾಡುತ್ತೇನೆ.

Leave a Reply

Your email address will not be published. Required fields are marked *