ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ದಾವಣಗೆರೆ, ಜಿಲ್ಲಾ ಆಯುಷ್
ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ 7ನೇ ಅಂತರಾಷ್ಟ್ರೀಯ
ಯೋಗ ದಿನಾಚರಣೆಯ ಅಂಗವಾಗಿ ‘ಯೋಗದೊಂದಿಗೆ ಇರಿ
ಮನೆಯಲ್ಲಿಯೇ ಇರಿ’ ಕಾರ್ಯಕ್ರಮವನ್ನು ಜೂ.21 ರ ಸಂಜೆ 4 ರಿಂದ 5
ಗಂಟೆಯವರೆಗೆ ಉಚಿತ ಆನ್‍ಲೈನ್ ಯೋಗ ಶಿಬಿರ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಉದ್ಘಾಟನೆ ನೆರವೇರಿಸಲಿದ್ದು,
ಆಯುಷ್ ತಜ್ಞ ವೈದ್ಯ ಡಾ.ಗಂಗಾಧರ ವರ್ಮ ಬಿ.ಆರ್
ಭಾಗವಹಿಸುವರು. ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ
ಆಸ್ಪತ್ರೆಯ ಡಾ.ರತ್ನ.ಡಿ.ಎಂ. ಮತ್ತು ಸಿಬ್ಬಂದಿ ಉಪಸ್ಥಿತರಿರುವರು ಎಂದು
ಪ್ರಕಟಣೆ ತಿಳಿಸಿದೆ.