ಶಿವಮೊಗ್ಗ:- ವಿನೋಬನಗರ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಮನೆಯಲ್ಲಿಯೇ ಕುಟುಂಬದೊಂದಿಗೆ ಯೋಗ ಎಂಬ ಘೋಷ ವಾಕ್ಯದೊಂದಿಗೆ ನಾಡಿನ ಪ್ರಖ್ಯಾತ ಮೇಧಾವಿಗಳಿಂದ ಪ್ರತಿದಿನ ಸಂಜೆ 5.40ರಿಂದ 7 ದಿನಗಳ ಕಾಲ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಜೂ. 15ರ ಇಂದು ಸಂಜೆ 5.40ಕ್ಕೆ ಖ್ಯಾತ ಯೋಗ ಸಾಧಕ ಡಾ| ರಾಘವೇಂದ್ರ ಪೈ ಅವರು ನಾದಾನುಸಂಧಾನ ಕುರಿತು ಉಪನ್ಯಾಸ ನೀಡಲಿದ್ದು, ಜೂ. 16ರ ನಾಳೆ ಸಂಜೆ 5.40ಕ್ಕೆ ಬದುಕಿಗೊಂದು ಯೋಗ ಕುರಿತು ಪ್ರಖ್ಯಾತ ವಾಗ್ಮಿ ರಾ.ಚೇತನ್‍ರಾಮ್‍ರಿಂದ, 17ರ ಸಂಜೆ ಕ್ರೀಡಾಪಟುಗಳಿಗೆ ಯೋಗಾಭ್ಯಾಸದ ಪ್ರಯೋಜನ ಕುರಿತು ಡಾ| ಗಜಾನನ ಪ್ರಭು ಅವರಿಂದ, 18ರ ಸಂಜೆ ಖ್ಯಾತ ವೈದ್ಯೆ ಡಾ| ವೀಣಾಭಟ್‍ರಿಂದ ಮಹಿಳೆಯರಿಗೆ ಯೋಗ ಕುರಿತು ವಿಶೇಷ ಉಪನ್ಯಾಸ ಇರುತ್ತದೆ.
ಜೂ. 19ರಂದು ಸಂಜೆ 5.40ಕ್ಕೆ ಥಟ್ ಅಂತ ಹೇಳಿ ಖ್ಯಾತಿಯ ಡಾ| ನಾ. ಸೋಮೇಶ್ವರ್ ಅವರು ಆಹಾರ, ಆರೋಗ್ಯ ಮತ್ತು ಭಗವದ್ಗೀತೆ ವಿಷಯ ಕುರಿತು ಉಪನ್ಯಾಸ ನೀಡಲಿದ್ದು, 20ರಂದು ಸಂಜೆ ಡಾ| ಪ್ರಸನ್ನ ಸಂತೆಕಡೂರು ಅವರಿಂದ ಅಲ್ಲಮಪ್ರಭು ಮತ್ತು ಯೋಗ ಕುರಿತು ಉಪನ್ಯಾಸವಿದೆ. ಜೂ. 21ರಂದು ಸಂಜೆ 5.40ಕ್ಕೆ ಡಾ| ಕೆ.ಎಸ್. ಪವಿತ್ರಾ ಅವರಿಂದ ಯೋಗಾಭ್ಯಾಸ ಮತ್ತು ವಿಭಿನ್ನ ದೃಷ್ಟಿಕೋನಗಳು ಕುರಿತು ಉಪನ್ಯಾಸ ಕಾರ್ಯಕ್ರಮ ಇರುತ್ತದೆ.
ಆತ್ಮೀಯ ಯೋಗ ಶಿಕ್ಷಣಾರ್ಥಿಗಳು ಆನ್‍ಲೈನ್ ಲಿಂಕ್ ಬಳಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಯೋಗಾಚಾರ್ಯ ಡಾ| ಸಿ.ವಿ. ರುದ್ರಾರಾಧ್ಯ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿವರಗಳಿಗೆ ಜಿ.ಎಸ್. ಓಂಕಾರ್, 94481 34426, ಜಿ.ಎಸ್. ಜಗದೀಶ್ 97416 70424ರಲ್ಲಿ ಸಂಪರ್ಕಿಸಲು ವಿನಂತಿಸಲಾಗಿದೆ.

Leave a Reply

Your email address will not be published. Required fields are marked *