ಶಿವಮೊಗ್ಗ : ನಗರದ ಹೊರವಲಯದ ಉರುಗಡೂರಿನಲ್ಲಿರುವ ‘ಪ್ರಿವ್ಹೇಲ್ ಹೈಸ್ಕೂಲ್ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್’ ವತಿಯಿಂದ ಮಂಗಳವಾರದಂದು “ಆಹಾರದ ಕಿಟ್” ನೀಡಲಾಯಿತು
“ಆಹಾರದ ಕಿಟ್” ವಿತರಿಸಿ ಮಾತನಾಡಿದ ‘ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್’ ಅಧ್ಯಕ್ಷರಾದ ಎನ್.ಎಮ್ ಸಿಗ್ಬತ್ ಉಲ್ಲಾರವರು, ವಿಶ್ವದಲ್ಲಿ ಕೋರೊನಾ ಸಾಂಕ್ರಮಿಕ ದಾಳಿಯಿಂದ ಮನುಕುಲ ಕಂಗೆಟ್ಟಿದೆ, ಇದರಿಂದ ಎಲ್ಲಾ ವರ್ಗದ ಕ್ಷೇತ್ರಗಳು ಅತೀವ ಸಂಕಷ್ಟದಲ್ಲಿರುವಂತೆ ಶಿಕ್ಷಕರು ಹಾಗೂ ಸಿಬ್ಬಂದಿಗಳು ಕೂಡ ಲಾಕ್ಡೌನ್ ನಲ್ಲಿ ಸಿಲುಕಿಕೊಂಡಿದೆ ಇಂತಹ ಸಂದರ್ಭದಲ್ಲಿ ಕಡಿಮೆ ಸಂಬಳ ಪಡೆದು ಖಾಸಗಿ ವಲಯದ ಶಿಕ್ಷಣ ಸಂಸ್ಥೆಗಳಲ್ಲಿ ಶ್ರಮಿಸುತ್ತಿರುವ ಇವರಿಗೆ ಅಹಾರದ ಕಿಟ್ ನೀಡಿ ದನಿಯಾಗುವುದು ಆಧ್ಯ ಕರ್ತವ್ಯವೆಂದು ಭಾವಿಸಿದ್ದೇವೆ ಎಂದು ಎನ್.ಎಮ್ ಸಿಗ್ಬತ್ ಉಲ್ಲಾರವರು ತಿಳಿಸಿದರು.
ಪ್ರತಿ ಭಾರಿ ಶಿಕ್ಷಕರಿಗೆ ಆಹಾರ ಕಿಟ್ ನೀಡಿ ಸ್ಥಳೀಯ ಮಹಾನಗರ ಪಾಲಿಕೆಗೆ ಶಿವಮೊಗ್ಗದ ಖಾಸಗಿ ಶಿಕ್ಷಕರು ಹಾಗೂ ಸಿಬ್ಬಂದಿಗಳ ಪಟ್ಟಿ ಮಾಡಿ ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಈ ಮೂಲಕ ಮನವಿ ಮಾಡಿಕೊಂಡರು ಸ್ಥಳೀಯ ಸಂಸ್ಥೆಯ ಆಡಳಿತ ಮರು ಪರೀಶಿಲಿಸಿದೆ ಇರುವುದು ದುರಂತ ಎನ್ನಬಹುದಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗಾರಾ.ಶ್ರೀನಿವಾಸ್ ಹಾಗೂ ‘ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್’ ಕಾರ್ಯದರ್ಶಿ, ಹೆಚ್.ಎಸ್ ವಿಷ್ಣುಪ್ರಸಾದ್, ಮಲ್ನಾಡ್ ಪುಟ್ವೇರ್ ಮಾಲೀಕರಾದ ಇಮ್ರಾನ್ ಮಲ್ನಾಡ್, ಗೋಲ್ಡ್ ಸ್ಮಿತ್ ಅನಿಲ್ ಕುಮಾರ್, ಸಲೀಂ ಸಾಧಿಕ್, ರಖೀಬ್, ಮುಸಾವಿರ್ ಹಾಗೂ ಪ್ರಿವ್ಹೇಲ್ ಹೈಸ್ಕೂಲ್ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.