ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊನ್ನಾಳಿ ತಾಲೂಕಿನ ಸರ್ವಿಸ್ ಬ್ಯಾಂಕ ಆದ ಕೆನರಾ ಬ್ಯಾಂಕನ ಸಿಬ್ಬಂದಿ ವರ್ಗದವರಿಗೆ ಪೂಜ್ಯರು ಮಂಜೂರು ಮಾಡಿದ 15 N-95 ಮಾಸ್ಕ್ಗಳನ್ನು ಬ್ಯಾಂಕ್ ಮ್ಯಾನೇಜರ್ ವಿಠ್ಠಲ್ sir ಅವರಿಗೆ ಮಾನ್ಯ ಯೋಜನಾಧಿಕಾರಿಗಳಾದ ಬಸವರಾಜ್
ಅಂಗಡಿಯವರು ಹಸ್ತಾಂತರಿಸಿದರು. ಮ್ಯಾನೇಜರ್ ವಿಠ್ಠಲ್ sir ಮಾತನಾಡಿ ಕೋವಿಡ್ ಸಮಯದಲ್ಲಿ ಪೂಜ್ಯರು ಒಕ್ಸಿಝೇನ್ ಪೂರೈಕೆ, ವೆಂಟಿಲೇಟರ್ ಒದಗಣೆ, ಆಮ್ಲಜನಕ ಸಾಂದ್ರಕ ಯಂತ್ರ, ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಅದೇ ರೀತಿ ಕರೋನ ವಾರಿಯೆರ್ ಆಗಿ ಕೆಲಸ ಮಾಡುತ್ತಿರುವ ನಮ್ಮ ಬ್ಯಾಂಕಿನ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಪೂಜ್ಯರು ನಮಗೆ ಮಾಸ್ಕ್, ಸ್ಯಾನಿಟೈಸರ್ ನೀಡಿದ್ದು ನಮಗೆಲ್ಲ ಇನ್ನೂ ಹೆಚ್ಚಿನ ಕೆಲಸ ಮಾಡಲು ಹುರುಪು ನೀಡಿದೆ ಎಂದರು. ಇವುಗಳನ್ನು ಮಂಜೂರು ಮಾಡಿದ ಪೂಜ್ಯರಾದ ಡಾ!!ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ!!L.H.ಮಂಜುನಾಥ್ ರವರಿಗೆ ಭಕ್ತಿ ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮ್ಯಾನೇಜರ್ ಶ್ರೀನಿವಾಸ್ ಹಾಗೂ ಎಲ್ಲಾ ಸಿಬ್ಬಂದಿಗಳು ಮತ್ತು ಮೇಲ್ವಿಚಾರಕರಾದ ನಾಗರಾಜ್. S. ರವರು ಉಪಸ್ಥಿತರಿದ್ದರು.