ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊನ್ನಾಳಿ ತಾಲೂಕಿನ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರಿಗೆ ಪೂಜ್ಯರು ಮಂಜೂರು ಮಾಡಿದ 55 N-95 ಮಾಸ್ಕ್, 5 ಲೀ ಸ್ಯಾನಿಟೈಸರ್ ನ್ನು ತಾಲೂಕಿನ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿ ಸಿಪಿಐ ದೇವರಾಜ್ ಟಿ. ವಿ. ಹಾಗೂ ಪಿಎಸ್ಐ ಬಸವನಗೌಡ ಬಿರಾದಾರ್ ರವರಿಗೆ ಹಸ್ತಾಂತರಿಸಿದರು.
ಸಿಪಿಐ ದೇವರಾಜ್ ಮಾತನಾಡಿ ಕೋವಿಡ್ ಸಮಯದಲ್ಲಿ ಪೂಜ್ಯರು ಒಕ್ಸಿಝೇನ್ ಪೂರೈಕೆ, ವೆಂಟಿಲೇಟರ್ ಒದಗಣೆ, ಆಮ್ಲಜನಕ ಸಾಂದ್ರಕ ಯಂತ್ರ, ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಅದೇ ರೀತಿ ಕರೋನ ವಾರಿಯೆರ್ ಆಗಿ ಕೆಲಸ ಮಾಡುತ್ತಿರುವ ನಮ್ಮ ತಾಲೂಕಿನ ಎಲ್ಲಾ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಪೂಜ್ಯರು ನಮಗೆ ಮಾಸ್ಕ್, ಸ್ಯಾನಿಟೈಸರ್ ನೀಡಿದ್ದು ನಮಗೆಲ್ಲ ಇನ್ನೂ ಹೆಚ್ಚಿನ ಕೆಲಸ ಮಾಡಲು ಹುರುಪು ನೀಡಿದೆ ಎಂದರು. ಇವುಗಳನ್ನು ಮಂಜೂರು ಮಾಡಿದ ಪೂಜ್ಯರಾದ ಡಾ!!ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ!!L.H.ಮಂಜುನಾಥ್ ರವರಿಗೆ ಭಕ್ತಿ ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿಗಳು ಮತ್ತು ಮೇಲ್ವಿಚಾರಕರಾದ ನಾಗರಾಜ್. S. ರವರು ಉಪಸ್ಥಿತರಿದ್ದರು