ಕರೋನ ಮಹಾಮಾರಿಯ
ಆಕ್ರಮಣದಲ್ಲಿ ಜನಸಾಮಾನ್ಯರು ಆರ್ಥಿಕ
ಸಂಕಷ್ಟ ಅನುಭವಿಸುತ್ತಿದ್ದು,
ಬಹಳಷ್ಟು ಕುಟುಂಬಗಳು
ಅದಾಯವಿಲ್ಲದೇ ಬೀದಿಗೆ ಬಂದು ನಿಂತಿವೇ,
ಅದರಲ್ಲೂ ಕೆಲವು ಕುಟುಂಬದ
ಸದಸ್ಯರುಗಳು ಮದ್ಯ
ವ್ಯಸನಿಗಳಾಗಿ, ದಿನ ನಿತ್ಯ ಕುಡಿತಕ್ಕೆ
ನೂರಾರು ರೂಪಾಯಿಗಳನ್ನ ವೆಚ್ಚ
ಮಾಡುತ್ತಿದ್ದು, ಸಂಸಾರದ ಸಮಸ್ಯಗೆ
ಕಾರಣವಾಗುತ್ತಿದೆ. ಅಂತವರಿಗೆ ಮದ್ಯ
ಮಾರಾಟ ಮಾಡಿ, ಅವರ ಅದಾಯನ್ನ
ಕಸಿದುಕೊಳ್ಳುವುದು
ಎಷ್ಟರಮಟ್ಟಿಗೆ ಸರಿ. ಅದ್ದರಿಂದ
ಸರ್ಕಾರವೂ ಜನರ ಆರೋಗ್ಯದ
ದೃಷ್ಟಿಯಿಂದಲಾದರು ಮದ್ಯ
ಮಾರಾಟಕ್ಕೆ ನಿಷೇದ ಹೇರುವ
ದಾರಿಗಳನ್ನ ಹುಡಿಕಿಕೊಳ್ಳಬೇಕು
ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ
ನುಡಿದರು.
ಅವರು ನಗರದ ತರಳಬಾಳು ನಗರದ
ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ
ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ
ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ
“ಮದ್ಯಪಾನ ನಿಷೇದ ಜನಜಾಗೃತಿ”
ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಜನಾಂಗ ಲಾಕ್ ಡೌನ್
ಸಮಯದಲ್ಲಿ ಬಾರ್ &ಚಿmಠಿ;
ರೆಸ್ಟೋರೆಂಟ್‍ಗಳ ಮುಂದೆ ಬೆಳಗ್ಗೆ
6 ರಿಂದಲೇ ಸರದಿ ಹಚ್ಚುತ್ತಿದ್ದ ದೃಶ್ಯ
ಮಾದ್ಯಮಗಳಲ್ಲಿ
ಪ್ರಸಾರವಾಗುತ್ತಿತ್ತು.
ಹೆಣ್ಣುಮಕ್ಕಳು ಸಹ ಬಾಟಲಿಗಳನ್ನು
ಬಾಚಿಕೊಂಡು ಹೋಗುವ ದೃಶ್ಯ ಎಲ್ಲರ
ಮನ ಕರಗುವಂತೆ ಮಾಡುತ್ತಿತ್ತು.
ಓದಿದ ಹೆಣ್ಣುಮಕ್ಕಳೂ ಸಹ ಬಾರ್ &ಚಿmಠಿ;
ರೆಸ್ಟೋರೆಂಟ್‍ಗಳಿಗೆ ಬರುವ ಪದ್ಧತಿ
ಹೊಸದಾಗಿ ಪ್ರಾರಂಭವಾಗಿ ಬಿಟ್ಟಿದೆ.
ಸಾಫ್ಟ್‍ವೇರ್ ಇಂಜಿನಿಯರ್‍ಗಳಲ್ಲಿ ಹೆಣ್ಣು
ಮಕ್ಕಳು ಸಹ ಹೆಚ್ಚು ಕುಡಿತದ
ದಾಸರಾಗುತ್ತಿದ್ದಾರೆ. ದುಡಿತದ
ಅವಸರದಲ್ಲಿ ನಾವು ನಮ್ಮ
ಮಾನವೀಯತೆ ಮೌಲ್ಯಗಳನ್ನು
ಕಳೆದುಕೊಳ್ಳುತ್ತಿದ್ದೇವೆ. ನಮ್ಮ
ಆತ್ಮಶಕ್ತಿಯನ್ನೇ ನಾಶ
ಮಾಡಿಕೊಳ್ಳುತ್ತಿದ್ದೇವೆ ಎಂದು
ಎಚ್ಚರಿಸಿದರು.
ಕುಡಿತದಿಂದ ನಾವು ಮಕ್ಕಳನ್ನ,
ಯುವಜನಾಂಗವನ್ನ ರಕ್ಷಿಸಬೇಕು,
ಸಾಮಾನ್ಯವಾಗಿ ಜನರು ಸಂತೋಷಕ್ಕೆ,
ದುಃಖಕ್ಕೆ, ವ್ಯವಹಾರದ ನೆಪದಲ್ಲಿ
ಕುಡಿತಕ್ಕೆ ಕೈಹಾಕುತ್ತಿದ್ದಾರೆ.
ಮುಂದಿನ ಜನಾಂಗಕ್ಕೆ ಕುಡಿತದ ಬಗ್ಗೆ
ಜಾಗೃತಿ ಮೂಡಿಸದಿದ್ದರೇ, ನಮ್ಮ
ಸಮಾಜ ದುಸ್ತಿತಿಗೆ ತಲುಪಿಬಿಡುತ್ತದೆ.
ಮುಂದಿನ ಜನಾಂಗವನ್ನಾದರು ನಾವು
ಕುಡಿತದಿಂದ ರಕ್ಷಿಸಬೇಕಾಗಿದೆ.
ಕುಡಿತದÀ ದುಶ್ಚಟಗಳಿಂದ ಆಗುವ
ಅಪಘಾತಗಳು, ಕೊಲೆಗಳು,
ದುರ್ಘಟನೆಗಳನ್ನ ನಾವು
ತಡೆಯಬೇಕಾಗಿದೆ ಎಂದರು.
ಜನರಿಗೆ ಮದ್ಯಪಾನದಿಂದಾಗುವ
ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕ
ಜ್ಞಾನವನ್ನು ಹೆಚ್ಚಿಸಬೇಕು,
ವೈದ್ಯರು, ಸಮಾಜ ಸುಧಾರಕರು,
ಮಠಾಧೀಶರುಗಳು, ರಾಜಕೀಯ
ಮುಖಂಡರುಗಳು ಇದರ ವಿರುದ್ಧ
ಟೊಂಕಕಟ್ಟಿ ನಿಂತು ಹೋರಾಟ
ಮಾಡಬೇಕು. ಸರ್ಕಾರ ಸಹ ತನ್ನ
ಅದಾಯ ಕಡಿಮೆಯಾದರು ಪರವಾಗಿಲ್ಲ,
ಜನರ ಅಭಿವೃದ್ಧಿಯನ್ನ
ಗಮನದಲ್ಲಿಟ್ಟುಕೊಂಡು ಕುಡಿತ
ನಿಲ್ಲಿಸುವ ಪ್ರಯತ್ನವನ್ನಾದರು
ಪಡಬಹುದು, ಗ್ರಾಮ
ಗ್ರಾಮಗಳಲ್ಲಿಯೂ ಸಹ ಮದ್ಯ
ವ್ಯಸನ ಜಾಸ್ತಿಯಾಗಿ, ಅದರ
ದುಷ್ಪರಿಣಾಮಗಳು ಶಾಲಾಮಕ್ಕಳ
ವಿದ್ಯಾಭ್ಯಾಸದÀ ಮೇಲೆ ಬೀಳುತ್ತಿದೆ
ಎಂದರು.
ಕಾರ್ಯಕ್ರಮದಲ್ಲಿ ಜನರಿಗೆ ಕುಡಿತದ
ದುಶ್ಪರಿಣಾಮಗಳ ಬಗ್ಗೆ
ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.
ವಿದ್ಯಾರ್ಥಿಗಳು ಜನರಲ್ಲಿ ಹಾಡಿನ ಮೂಲಕÀ
ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ
ಸುರಕ್ಷಾ, ಶಶಿ, ಅಂಶುಲ್, ಹೆಚ್.ಎಸ್.ರಚನ,
ಹೆಚ್.ಎಸ್. ಪ್ರೇರಣ, ಸಂಧ್ಯಾ, ಶ್ರೀನಿವಾಸ
ಹಾಜರಿದ್ದರು.