ಶಿವಮೊಗ್ಗ, ಜೂನ್ 16 (ಕರ್ನಾಟಕ ವಾರ್ತೆ) : ಜಿಲ್ಲಾ ಕರ್ನಾಟಕ ಕುರಿ ಮತ್ತು ಉಣ್ಣೆ ಆಭಿವೃದ್ಧಿ ನಿಗಮವು ವಿಶೇಷ ಘಟಕ/ಗಿರಿಜನ ಉಪಯೋಜನೆಗಳಡಿ ಕುರಿ/ಮೇಕೆ ಸಾಕಾಣಿಕೆ ಯೋಜನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾಕದರ ಸಹಕಾರ ಸಂಘಗಳ ಪ.ಜಾ ಹಾಗೂ ಪ.ಪಂ.ಗಳ 18 ರಿಂದ 60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು/ ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರುಗಳನ್ನು ಮತ್ತು ಸಂಘಗಳು ಇಲ್ಲದೇ ಇರುವ ತಾಲೂಕುಗಳಲ್ಲಿ ಕುರಿ ಸಾಕಾಣಿಕೆದಾರರು ಹಾಗೂ ಸಂಚಾರಿ/ಅರೆಸಂಚಾರಿ ಕುರಿಗಾರರಿಗೆ ಪರಿಕರ ಕಿಟ್ (ಟೆಂಟ್, ಬ್ಯಾಟರಿ, ರೈನ್‍ಕೋಟ್)ಗಳನ್ನು ಒದಗಿಸಲು ಸಾಮಾನ್ಯ ವರ್ಗ/ಪ.ಜಾ/ಪ.ಪಂ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳ ಕಚೇರಿ/ ಕುರಿಗಾರರ ಸಂಘದ ಕಚೇರಿಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂನ್-30ರೊಳಗಾಗಿ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.