ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ
ನಿಭಾಯಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು
ಒದಗಿಸುವುದು, ಕೊರೊನಾ ಸಂತ್ರಸ್ತರಿಗೆ ಉಚಿತ ಆಹಾರದೊಂದಿಗೆ
ಸಹಾಯಸ್ತ ನೀಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳ
ಮೂಲಕ ಕೆನರಾ ಬ್ಯಾಂಕ್ ಮತ್ತು ಬ್ಯಾಂಕಿನ ಉದ್ಯೋಗಿಗಳು ಸೇವೆ
ಸಲ್ಲಿಸುತ್ತಿದ್ದಾರೆ ಎಂದು ಕೆನರಾ ಬ್ಯಾಂಕ್‍ನ ವಿಭಾಗೀಯ ಪ್ರಬಂಧಕ
ಜಿ.ಜಿ.ದೊಡ್ಡಮನಿ ಶ್ಲಾಘಿಸಿದರು.
ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿ ಕೊರೊನಾ ಸಂತ್ರಸ್ಥರಿಗೆ,
ಸಂತ್ರಸ್ಥರ ಪರಿಚಾರಕರಿಗೆ, ಕೊರೊನಾ ವಾರಿಯರ್ಸ್‍ಗಳಿಗಾಗಿ ಕೆನರಾ
ಬ್ಯಾಂಕ್ ಆಯೋಜಿಸಿದ್ದ 3ನೇ ದಿನದ ಉಚಿತ ಆಹಾರ ಸೇವೆಗೆ ಚಾಲನೆ ನೀಡಿ
ಮಾತನಾಡಿದ ಅವರು, ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ
ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ. ದೇಶ
ಎದುರಿಸುತ್ತಿರುವ ಈ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಕೆನರಾ
ಬ್ಯಾಂಕ್ ದೇಶದೊಂದಿಗೆ ನಿಂತಿದೆ ಎಂದರು.
ಕಳೆದ 15 ತಿಂಗಳಿಂದ ದೇಶ ಕೊರೊನಾ ಸೋಂಕಿನ ವಿರುದ್ಧ
ಸೆಣೆಸಾಡುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲಾ ಸಂಘ-ಸಂಸ್ಥೆಗಳು
ಮಾನವೀಯತೆಯ ನೆಲೆಯಲ್ಲಿ ಆರ್ಥಿಕ ದುರ್ಬಲರಿಗೆ ನೆರವಾಗಬೇಕು
ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ್ ಡಿ
ಶಾಸ್ತ್ರಿ, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ
ಕೆ.ರಾಘವೇಂದ್ರ ನಾಯರಿ, ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳಾದ
ಎಸ್.ವಿ.ರಾಮಕೃಷ್ಣ ನಾಯ್ಕ್, ಬಿ.ಎ.ಸುರೇಶ್, ರಘುರಾಮ್,
ಎನ್.ರಾಮಮೂರ್ತಿ, ಹಂಪಣ್ಣ, ಆರ್.ಆಂಜನೇಯ, ಸಿ.ಪರಶುರಾಮ್,
ಎಮ್.ಎಮ್.ಸಿದ್ದವೀರಪ್ಪ, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.