ಹೊನ್ನಾಳಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಮ್ ಪ್ರಾಡಕ್ಟ್ ಅಲ್ಲಾ ನೂರಾರು ಹೋರಾಟಗಳನ್ನು ಮಾಡಿಕೊಂಡು ಬಂದು ಮುಖ್ಯಮಂತ್ರಿಯಾದವರು, ಅಂತಹವರ ಬಗ್ಗೆ ನಿನ್ನೆ ಮೊನ್ನೆ ಬಂದವರು ಮಾತನಾಡುವುದು ಸರಿಯಲ್ಲಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಅರಬಗಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಬಂದಿದ್ದು ನಾಳೆ ಶಾಸಕರುಗಳು ಅವರನ್ನು ಭೇಟಿ ಮಾಡಿ, ನಾಯಕತ್ವ ಬದಲಾವಣೆಯ ಬಗ್ಗೆ ಯಾರು ಮಾತನಾಡುತ್ತಾರೋ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ ಎಂದರು.
ನಾಯಕತ್ವ ಬದಲಾವಣೆ ಬಗ್ಗೆ ಯಾರಿಗೂ ಗೊಂದಲ ಬೇಡ, ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಬಿಎಸ್‍ವೈ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಿರುವಾಗ ಯಾರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದರು.
ನಾಯಕತ್ವ ಬದಲಾವಣೆ ಎಂದು ದೆಹಲಿಗೆ ಹೋದರೆ ಹಾಗುತ್ತ ಅಥವಾ ಒಂದಿಬ್ಬರು ಹೇಳಿದ ತಕ್ಷಣ ವರಿಷ್ಠರು ಕೇಳಿಬಿಡುತ್ತಾರಾ,ಸುಖಾಸುಮ್ಮನೆ ಪಕ್ಷದಲ್ಲಿ ಗೊಂದಲ ಮಾಡುವುದನ್ನು ಬಿಡಬೇಕು,ಬಿಜೆಪಿ ಸಂಘಪರಿವಾರದ ಹಿನ್ನಲೆಯಲ್ಲಿರುವ ಶಿಸ್ತಿನ ಪಕ್ಷ, ಇಲ್ಲಿ ಅಶಿಸ್ತಿತಿಗೆ ಅವಕಾಶ ನೀಡುವುದಿಲ್ಲ ಎಂದರು.
ಬಿಎಸ್‍ವೈ ಹೋಂ ಪ್ರಾಡಕ್ಟ್ ಅಲ್ಲ ; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಂ ಪ್ರಾಡಕ್ಟ್ ಅಲ್ಲ, ಸುದೀರ್ಘ ಹೋರಾಟ ಮಾಡಿಕೊಂಡಿ, ನೂರಾರು ಬಾರಿ ಜೈಲುವಾಸ, ರೈತರಿಗಾಗಿ ಪಾದಯಾತ್ರೆಗಳು ಹೀಗೆ ರೈತರು ಹಾಗೂ ಜನ ಸಾಮಾನ್ಯರಿಗಾಗಿ ಹೋರಾಟ ಮಾಡಿ ಬಂದವರು, ಅಂತಹವನ್ನು ನಾವು ಮುಖ್ಯಮಂತ್ರಿಯಾಗಿ ನೋಡುತ್ತಿರುವುದು ನಮ್ಮ ಬಾಗ್ಯ ಎಂದರು.
ನೆನ್ನೆ ಮನ್ನೆ ಬಂದವರು ಅಂಥ ಧೀಮಂತ ನಾಯಕರ ಬಗ್ಗೆ ಮಾತನಾಡುವುದು ಸಲ್ಲದು ಎಂದರು.
ಯಾರೂ ಪಕ್ಷ ಹಾಗೂ ನಾಯಕತ್ವದ ಗೊಂದಲ ಮೂಡಿಸುತ್ತಾರೋ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಾನೂ ಕೂಡ ಅರುಣ್‍ಸಿಂಗ್ ಅವರನ್ನು ಭೇಟಿ ಮಾಡಿ ವಿನಂತಿಸುತ್ತೇನೆ ಎಂದ ಅವರು ಮುಖ್ಯಮಂತ್ರಿ ಬಿ.ಎಸ್.ವೈ ಪರ 65 ಶಾಸಕರ ಸಹಿ ಸಂಗ್ರಹ ಮಾಡಿದ್ದು ನಿಜ ಆದರೆ ಸ್ವತಃ ಮುಖ್ಯಮಂತ್ರಿಗಳೇ ಸಹಿ ಸಂಗ್ರಹ ಮಾಡುವುದು ವರಿಷ್ಠರು ವಿರೋಧಿಸುತ್ತಾರೆ ನೀನು ಯಾವುದೇ ಕಾರಣಕ್ಕೂ ಸಹಿ ಸಂಗ್ರಹ ಮಾಡುವುದನ್ನು ನಿಲ್ಲಿಸು ಎಂದರು ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಹ ಸಹಿ ಸಂಗ್ರಹ ಬೇಡ ಎಂದ ಮೇಲೆ ಸಹಿ ಸಂಗ್ರಹ ಸ್ಥಗಿತಗೊಳಿಸಿದೆ ಎಂದರು.
ಸೂಟುಬೂಟು ತಯಾರಿ ; ಬಿಜಾಪುರ ಹಾಗೂ ಧಾರವಾಡದ ಶಾಸಕರಿಬ್ಬರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಜೇಬಲ್ಲಿ ಚೀಟಿ ಇಟ್ಟುಕೊಂಡು ಸೂಟುಬೂಟು ತಯಾರಿ ಮಾಡಿಕೊಂಡು ನೀನು ನನ್ನ ಜೊತೆ ಇರು ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ವಿಧಾಸೌಧದಲ್ಲಿ ಹಾಗೂ ಇನ್ನೀತರ ಕಡೆಗಳಲ್ಲಿ ಮಾತನಾಡಿರುವುದು ಕೇಳಿದ್ದೇವೆ,ಇದು ಸರಿಯಲ್ಲಿ ವರಿಷ್ಠರು ಗಮನ ಹರಿಸಬೇಕು ಎಂದರು.
ಸಂಘಟನೆ ಮುಖ್ಯ ; ನಮ್ಮ ನಮ್ಮ ಕ್ಷೇತ್ರದಲ್ಲಿ ಕರೋನಾ ಸೋಂಕಿತರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು, ಕ್ಷೇತ್ರದ ಅಭಿವೃದ್ಧಿ ಹಾಗೂ ಬಹುಮುಖ್ಯವಾಗಿ ಮುಂದೆ ಜಿ.ಪಂ.ಹಾಗೂ ತಾ.ಪಂ. ಚುನಾವಣೆ ಇದೆ ಆ ಚುನಾವಣೆಯಲ್ಲಿ ನಮ್ಮ ಪಕ್ಷದ ಜಯಬೇರಿ ಬಾರಿಸಬೇಕು ಆ ನಿಟ್ಟಿನಲ್ಲಿ ಪಕ್ಷದ ಸಂಘÀಟನೆ ಮಾಡಬೇಕಿದೆ ಎಂದರು.