ಇಂದು ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹಾಗೂ ಸ್ನೇಹ ಬಳಗದ ವತಿಯಿಂದ ಮಾಜಿ ಸಚಿವರು,ಹಿರಿಯ ನಾಯಕರು,ನಮ್ಮ ಮಾರ್ಗದರ್ಶಿಗಳೂ ಆದ ಶ್ರೀ ಶಾಮನೂರು ಶಿವಶಂಕರಪ್ಪ ಸರ್ ರವರ ಜನ್ಮ ದಿನದ ಅಂಗವಾಗಿ ಹಾಗೂ ದಾವಣಗೆರೆ ಜನತೆಗೆ ಉಚಿತವಾಗಿ ಲಸಿಕೆಯನ್ನು ನೀಡಿದ ಸಹಾಯಾರ್ಥವಾಗಿ ಅವರ ಸ್ವಗೃಹದಲ್ಲಿ ಸ್ನೇಹಪೂರ್ವಕವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಮುಖಂಡರಾದ ಲಿಯಾಖತ್ ಅಲಿ,ಮೊಹಮ್ಮದ್ ಜಿಕ್ರಿಯಾ,ಸುರೇಶ್.ಎಂ.ಜಾಧವ್,ರಿಯಾಜುದ್ದೀನ್,ಯುವ ಮುಖಂಡರಾದ ಮಹಬೂಬ್ ಬಾಷಾ, ಫಜ್ಲೂರ್ ರಹಮಾನ್, ಜಾಕಿರ್ ,ಇನ್ನಿತರರು ಭಾಗವಹಿಸಿ ಅಭಿನಂದನೆ ಸಲ್ಲಿಸಿದರು.