ಶಿಕಾರಿಪುರ ಟೌನ್ ನಲ್ಲಿ ಸುಮಾರು 25-30 ವರ್ಷದಿಂದ ಬಡವರಿಗಾಗಿ ಗ್ರಹ ಮಂಡಳಿಯಿಂದ ರೈತರ ಜಮೀನು ಪಡೆದು ಸೈಟ್ ಮಾಡಿ ಬಡವರಿಗೆಂದು ಹಂಚುತ್ತಲೆ ಬಂದಿರುತ್ತಾರೆ.ಆದರೆ ಸರಿಯಾದ ಸೈಟ್ ಇಲ್ಲದ ಬಡವರಿಗೆ 50% ಪರ್ಸಂಟ್ ತಲುಪಿರುವದಿಲ್ಲ.ಎಂದು ಚಂದ್ರಕಾಂತ
ಮಾಧ್ಯಮದವರಿಗೆ ವಿಚಾರ ದ ಹೇಳಿಕೆ ನೀಡಿದರು.
ಸುಮಾರು ಟೌನ್ ನಲ್ಲಿ ಸೈಟ್ ಮನೆಯಿಲ್ಲದವರು ಪುರಸಭೆಗೆ ಸಾವಿರಾರು ಜನ ಅರ್ಜಿ ಸಲ್ಲಿಸಿ 15-20 ವರ್ಷ ಕಳೆದರೂ ಆ ಅರ್ಜಿ ಹಾಗೆ ಮೂಲೆ ಸೇರಿವೆ.
ಪುರಸಭೆನಲ್ಲಿ ಸೈಟ್ ಹಂಚಿಕೆ ಮಾರಾಟದ ರೂಪದಲ್ಲಿ ಹಂಚುತ್ತಾರೆ. ಮೊದಲು ಆಯಾ ಬಿ.ಜೆ.ಪಿ.ವಾರ್ಡ ಕೌನ್ಸಿಲರ್ ಮುಕಾಂತರ ನಿಮ್ಮ ಕಡೆಯಿಂದ ಇಷ್ಟು ಸೈಟಂತ ಗುರುತಿಸಿ ಹಂಚಿಕೆಯಾಗಿ ಅವರು ಹೇಳಿದವರಿಗೆ ಸೈಟ್ ನಿಕ್ಕಿಯಾದನಂತರ ಬಿ.ವೈ.ರಾಘವೇಂದ್ರ. ರವರ ಮುಕಾಂತರ ಹಂಚಿಕೆಯಾಗುತ್ತವೆ. ಅದು ಯಾರಿಗೆ ?.
ಸೈಟ್ ಮನೆ ಇದ್ಧವರಿಗೆ ಪುನಹ ಕೊಡುತ್ತಾರೆ.25 ವರ್ಷದಿಂದ ಹಾಕಿದ ಅರ್ಜಿಗಳು ಧೂಳು ಹಿಡಿದು ಕಸದ ಬುಟ್ಟಿ ಸೇರುತ್ತವೆ.
ಅದರಲ್ಲಿ ಮಧ್ಯೆ ದಲ್ಲಾಳಿಗಳ ಮುಕಾಂತರ ಒಂದೊಂದು ಸೈಟಿಗೆ 50 ಸಾವಿರ 1 ಲಕ್ಷ ಲಂಚ ಪಡೆದು ಅವರ ಹೆಸರಿಗೆ ಅಲಾಟ್ ಆಗುತ್ತವೆ. ಇದೇರೀತಿ ಸರ್ಕಾರ ಇನ್ಪೂ 50 ವರ್ಷ ಕಳೆದರೂ ನಿಜವಾದ ಬಡವನಿಗೆ ಸೈಟ್ ಸಿಗುವದಿಲ್ಲ.ಅವನು ಬಾಡಿಗೆಮನೆ ಅಥವಾ ಎಲ್ಲಿಯಾದರೂ ಗುಡಿಸಲುನಲ್ಲಿ ವಾಸಮಾಡಬೇಕು.
ಸೈಟ್ ಕೊಡುವದಕಿಂತ ಮೊದಲು ಪುರಸಭೆ ಮುಕ್ಯಾದಿಕಾರಿಯಿಂದ ತನಿಕೆಮಾಡಬೇಕು ಇ ಹಿಂದೆ ಸೈಟ್ ಪಡೆದಿರುವದರಿಂದ ಮಾಹಿತಿ ಪಡೆಯಬೇಕು ಅವರ ಹೆಸರಿಗೆ ಎಷ್ಟು ಮನೆ ಸೈಟ್ ಗಳಿವೆ ಮತ್ತೆ ಬೇರೆಯವರ ಹೆಸರಿಗೆ ಹೇಳಿ ಸೈಟ್ ಪಡೆದಿರುವ ಬಗ್ಗೆ ಮಾಹಿತಿ ಪಡೆದು ಕೂಳ್ಳಬೇಕು.
25 ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರ ಮಾಹಿತಿ ಪಡೆದು ಅವರಬಳಿ ಹೋಗಿ ತನಿಕೆ ಮಾಡಬೇಕು ಮತ್ತು ಅಲ್ಲಿ ಅಕ್ಕ ಪಕ್ಕದವರಿಗೆ ವಿಚಾರಿಸಿ ಅವರಿಗೆ ಸೈಟ್ ಮನೆ ಇಲ್ಲದವರಿಗೆ ಸೈಟ್ ಕೊಡುವ ವ್ಯೆವಸ್ತೆ ಮಾಡಬೇಕು.
ಈ ಹಿಂದೆ ಸೈಟ್ ಹಂಚಿಕೆ ಮಾಡಿರುವಬಗ್ಗೆ ಮಾಹಿತಿ ಹಕ್ಕಿನ ಮೂಲಕ ಪಡೆದು ಕೊಳ್ಳುತ್ತೇನೆ. ಆಗ ಸೈಟ್ ಹಂಚಿಕೆ ಗೋಲ್ ಮಾಲ್ ಆಗಿರುವಬಗ್ಗೆ ಬಯಲಿಗೆ ಬರುತ್ತದೆ.
ಈ ಮುಂದಾದರೂ ಪ್ರಾಮಾಣಿಕ ವಾಗಿ ಮನೆ ಅಥವಾ ಸೈಟ್ ಇಲ್ವದವರಿಗೆ ಪುರಸಭೆ ಮುಕ್ಯಾದಿಕಾರಿಗಳು ಮತ್ತು ಅಧ್ಯಕ್ಷರು ಸೇರಿ ಅರ್ಜಿ ಹಾಕಿಧವರ ಬಳಿ ಹೋಗಿ ಗುರುತಿಸಬೇಕು.ಆಗಮಾತ್ರ ಬಡವರಿಗೆ ನಿವೇಶನ ದೊರಕುತ್ತದೆ.
ಇದರ ಬಗ್ಗೆ ಶಿಕಾರಿಪುರ ಆಮ್.ಆಧ್ಮಿ.ಪಾರ್ಟಿ ಯಿಂದ ನಾವೂ ಕೂಡ ತನಿಕೆ ಮಾಡುತ್ತೇವೆ.ಪ್ರಾಮಾಣಿಕರಿಗೆ ಸೈಟ್ ಸಿಗುವಹಾಗೆ ಮಾಡುತ್ತೇವೆ. ಬೇಕಾ ಬಿಟ್ಟಿಯಾಗಿ ಸೈಟ್ ಉಳ್ಳವರಿಗೆ ಕೊಡಲು ಬಿಡುವದಿಲ್ಲ.ಎಂದು ಆಮ್ ಆದ್ಮಿ ಚಂದ್ರಕಾಂತ ಆಕ್ರೋಶ ವ್ಯಕ್ತಪಡಿಸಿದರು.