ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು,
ಭಾರತ ಸರ್ಕಾರದಿಂದ ನೀಡಲಾಗುವ 2021ನೇ ಸಾಲಿನ ಅರ್ಜುನ
ಪ್ರಶಸ್ತಿಗಾಗಿ ಅರ್ಹ ಕ್ರೀಡಾಪಟುಗಳಿಂದ ಅರ್ಜಿಗಳನ್ನು
ಆಹ್ವಾನಿಸಿದೆ.
ಅರ್ಜಿ ನಮೂನೆಯನ್ನು ದಾವಣಗೆರೆ ಜಿಲ್ಲಾ
ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ
ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಪಡೆದು,
ಭರ್ತಿ ಮಾಡಿದ ಅರ್ಜಿಯನ್ನು ಜೂ.21 ರ ಸಂಜೆ 5.00
ಗಂಟೆಯೊಳಗಾಗಿ ನೇರವಾಗಿ ಇ-ಮೇಲ್ ಮೂಲಕ
suಡಿeಟಿಜಡಿಚಿ.ಥಿಚಿಜಚಿv@ಟಿiಛಿ.iಟಿ ಅಥವಾ
giಡಿಟಿish.ಞumಚಿಡಿ@ಟಿiಛಿ.iಟಿ ಗೆ ಕಳುಹಿಸಬಹುದು ಎಂದು ಯುವ
ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.