ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಹಳ್ಳಿ ಹಾಲೇಶ್ ರವರು ಕಾರಿನಿಂದ ಅಪಘಾತವಾಗಿ ಮೃತಪಟ್ಟಿದ್ದಾರೆ ಅದರ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದೂರನ್ನು ದಾಖಲಿಸಿಕೊಂಡಿದ್ದಾರೆ ಅಪಘಾತವಾದ ಸುದ್ದಿ ಕೇಳಿ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಸಂತಾಪವನ್ನು ವ್ಯಕ್ತಪಡಿಸುವದರ ಜೊತೆಗೆ ಹಳ್ಳಿ ಹಾಲೇಶ್ ರವರು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಎಂದು ಹೇಳಿದರು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರ ಪುತ್ರರಾದ ಡಿ ಎಸ್ ಪ್ರದೀಪ್ ಮತ್ತು ಡಿಎಸ್ ಸುರೇಂದ್ರ ರವರು ಖುದ್ದಾಗಿ ನಿಂತು ಪೋಸ್ಟ್ಮಾರ್ಟಮ್ ಆಗುವವರಿಗೆ ಅಲ್ಲೇ ಇದ್ದು ಕುಂದೂರು ಗ್ರಾಮದ ದಲ್ಲಿ ಅಂತ್ಯಸಂಸ್ಕಾರ ಮಾಡುವ ಜಾಗದ ವರೆಗೆ ಮೃತದೇಹವನ್ನು ತಮ್ಮ ಅಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಆಗುವವರೆಗೆ ಇದ್ದು ಮಾನವೀಯತೆ ಮೆರೆದರು. ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸಹ ಸಂತಾಪವನ್ನು ಕೋರಿದ್ದಾರೆ.