ಜೂ.21 ರಂದು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

: ಜಿಲ್ಲಾಧಿಕಾರಿ

ಯೋಗ ನಮಗೆಲ್ಲರಿಗೂ ಆರೋಗ್ಯ ನೀಡಿದೆ, ನೀಡುತ್ತಿದೆ.
ಯೋಗದ ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನು
ಕಾಪಾಡಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
       ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ
ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನದ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.21 ರ ಬೆಳಿಗ್ಗೆ 6 ರಿಂದ
8 ಗಂಟೆಯವರೆಗೆ ಆಯೋಜಿಸಲಾಗಿರುವ ಅಂತರಾಷ್ಟ್ರೀಯ
ಯೋಗ ದಿನವನ್ನು ತಮ್ಮ ತಮ್ಮ ಮನೆಗಳಲ್ಲಿ ಯೋಗ
ಮಾಡುವ ಮೂಲಕ ಯಶಸ್ವಿಗೊಳಿಸಿ ಎಂದರು.
‘ಯೋಗಭ್ಯಾಸದೊಂದಿಗೆ ಇರಿ-ಮನೆಯಲ್ಲಿಯೇ ಇರಿ’ ಎನ್ನುವ
ಧ್ಯೇಯ ವಾಕ್ಯದೊಂದಿಗೆ ಬೆಂಗಳೂರಿನ ಚನ್ನಬಸವಣ್ಣ
ಸ್ವಾಮೀಜಿಯವರು ಆನ್ಲೈನ್ ಮೂಲಕ ಯೋಗ ಕಾರ್ಯಕ್ರಮ
ನಡೆಸಿಕೊಡಲಿದ್ದು, ತಾವು ಮನೆಯಲ್ಲಿಯೇ ಯೋಗಾಭ್ಯಾಸ
ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನವನ್ನು
ಅರ್ಥಪೂರ್ಣವಾಗಿಸಿ ಎಂದರು.
       ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂ.18 ರ ಬೆಳಿಗ್ಗೆ
10.30ಕ್ಕೆ ರಿಂಗ್ ರಸ್ತೆ, ಶಾರದಾಂಬ ದೇವಸ್ಥಾನದ ಸಮೀಪದ ಕರ್ನಾಟಕ
ಹಿಮೋಫಿಲಿಯ ಸೊಸೈಟಿಯಲ್ಲಿ ರಕ್ತದಾನ ಶಿಬಿರವನ್ನು
ಹಮ್ಮಿಕೊಳ್ಳಲಾಗಿದೆ. ರಕ್ತದಾನ ಮಾಡಿದವರಿಗೆಲ್ಲ ಕೇಂದ್ರ
ಸರ್ಕಾರದ ಮಾರ್ಗಸೂಚಿಯಂತೆ 18 ವರ್ಷ ಮೇಲ್ಪಟ್ಟವರಿಗೆ ಜೂ.21
ರಂದು ಉಚಿತವಾಗಿ ಕೋವಿಡ್ ಲಸಿಕೆ ಹಾಕಲಾಗುವುದು.
ಜೂ.19 ರ ಬೆಳಿಗ್ಗೆ 9 ಗಂಟೆಗೆ ಟ್ರಾಫಿಕ್ ಪೊಲೀಸರಿಗೆ ಕೊರೊನಾ
ಹಿಮ್ಮೆಟಿಸಲು ಆರೋಗ್ಯ ರಕ್ಷ ಹಬೆ ಯಂತ್ರ ವಿತರಣೆ
ಕಾರ್ಯಕ್ರಮವನ್ನು ನಗರದ ಟ್ರಾಫಿಕ್ ಪೊಲೀಸ್ ಸ್ಟೇಷನ್ ನಲ್ಲಿ
ಹಮ್ಮಿಕೊಳ್ಳಲಾಗಿದೆ. ಹಾಗೂ ಮಧ್ಯಾಹ್ನ 12 ರಿಂದ ಸಂಜೆ 5
ಗಂಟೆಯವರೆಗೆ 8 ವರ್ಷದ ಮೇಲ್ಪಟ್ಟ ಎಲ್ಲಾ ವಯೋಮಿತಿಯವರಿಗೆ
ಆನ್‍ಲೈನ್ ಯೋಗ ಸ್ಪರ್ಧೆ ಏರ್ಪಡಿಸಿದ್ದು, ಆಯ್ಕೆಯಾದ
ಯೋಗಪಟುಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ
ನೀಡಲಾಗುವುದು. ಯೋಗ ಸ್ಪರ್ಧೆಯ ಆನ್‍ಲೈನ್

ಲಿಂಕ್ hಣಣಠಿs://meeಣ.googಟe.ಛಿom/ಞರಿv-vomಞ-ಠಿhರಿ ಬಳಸಿ ಯೋಗ ಸ್ಪರ್ಧೆಯಲ್ಲಿ
ಪಾಲ್ಗೊಳ್ಳಬಹುದು.
ಜೂ.20 ರ ಬೆಳಿಗ್ಗೆ 6 ಗಂಟೆಗೆ ನಗರದ
ಶಿರಮಗೊಂಡನಹಳ್ಳಿಯಲ್ಲಿರುವ ತರಳಬಾಳು ಕೋವಿಡ್ ಕೇರ್
ಸೆಂಟರ್, ಜೆ.ಹೆಚ್.ಪಟೇಲ್ ಬಡಾವಣೆ ಮತ್ತು ತಾಜ್ ಪ್ಯಾಲೇಸ್ ಕೋವಿಡ್
ಕೇರ್ ಸೆಂಟರ್ ಗಳಲ್ಲಿ  ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ
ತುಂಬಲು ಆರೋಗ್ಯ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಎಂದರು.
       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ
ವರದಿಗಾರರ ಕೂಟ ಮತ್ತು ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ
ಆಶ್ರಯದಲ್ಲಿ ನಗರದ ಮಾಧ್ಯಮ ಪ್ರತಿನಿಧಿಗಳಿಗೆ ಇದೇ
ಸಂದರ್ಭದಲ್ಲಿ ಆಯುಷ್ ಕಿಟ್ ವಿತರಿಸಲಾಯಿತು.
       ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಧ್ಯಮದವರಿಗೆ
ಆಯುಷ್ ಕಿಟ್ ವಿತರಿಸಿ ಮಾತನಾಡಿದ ಅವರು, ವೈರಸ್ ನಿಯಂತ್ರಿಸಲು
ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಕಿಟ್‍ಗಳು
ಹೆಚ್ಚು ಉಪಯುಕ್ತವಾಗಿದ್ದು, ಅದರ ಸದುಪಯೋಗ
ಪಡೆÀದುಕೊಳ್ಳಿ ಎಂದರು.
ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್
ರಾಯ್ಕರ್ ಮಾತನಾಡಿ, ಚ್ಯವನ್‍ಪ್ರಾಶ್ ಸೇವನೆಯಿಂದ ಶ್ವಾಸಕೋಶದ
ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗೂ ರೋಗ ನಿರೋಧಕ
ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದರಿಂದ ದೇಹಕ್ಕೆ ಬರುವ ಯಾವುದೇ
ವೈರಸ್ ತಡೆಗಟ್ಟಲು ಬೇಕಾದ ಸಾಮಥ್ರ್ಯ ನಮ್ಮಲ್ಲಿರುತ್ತದೆ. ಹೀಗಾಗಿ
ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಚ್ಯವನ್‍ಪ್ರಾಶ್ ಲೇಹ್ಯವನ್ನು ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ
ಊಟದ ಮೊದಲು ಸೇವಿಸಬೇಕು. ಸಂಶಮನಿ ವಟಿ (ಆಯುರ್ವೇದ ಔಷಧಿ)
ಯನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ 2
ಮಾತ್ರೆಗಳನ್ನು ಸೇವಿಸಬೇಕು. ಯುನಾನಿ ಔಷಧಿಯ 2
ಹನಿಗಳನ್ನು ಮಾಸ್ಕ್‍ಗೆ ಹಾಕಿಕೊಂಡು ಉಸಿರಾಡಬೇಕು. ಬಿಸಿನೀರಿನಲ್ಲಿ 2 ಹನಿ
ಹಾಕಿ ದಿನಕ್ಕೆ 3-4 ಬಾರಿ ಬಾಯಿ ಮುಕ್ಕಳಿಸಬೇಕು ಅಥವಾ 2-3 ಹನಿಗಳನ್ನು
ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಿರಿ. 150 ಮಿ.ಲೀ ಹಾಲಿಗೆ 3 ಗ್ರಾಂ
ಚೂರ್ಣ ಮತ್ತು ಅರಿಶಿನವನ್ನು ಸೇರಿಸಿ ಕುಡಿಯಬೇಕು ಎಂದು ಮಾಹಿತಿ
ನೀಡಿದ ಅವರು, ಪ್ರತಿಯೊಬ್ಬರು ತಮಗೆ ಬರುವ ಯಾವುದೇ
ಯೋಗದ, ಸೂರ್ಯ ನಮಸ್ಕಾರ, ವ್ಯಾಯಾಮಗಳನ್ನು
ವೈಯಕ್ತಿಕ, ಕುಟುಂಬ ಅಥವಾ ಗ್ರೂಪ್‍ನಲ್ಲಿ ರೆಕಾರ್ಡ್ ಮಾಡಿ 1 ನಿಮಿಷದ
ವಿಡಿಯೋವನ್ನು ಜೂ.21 ರಂದು 9480051462, 9844443119, 9916331671,
900873573 ಈ ನಂಬರಿಗೆ ಕಳಿಸಿಕೊಡಬೇಕು. ಆಯ್ದ 100 ವಿಡಿಯೋವನ್ನು
ಲೋಕಲ್ ಟಿ.ವಿ ಮಾಧ್ಯಮದಲ್ಲಿ ಬಿತ್ತರಿಸಲಾಗುವುದು ಹಾಗೂ ಆಯ್ದ
10 ವಿಡಿಯೋಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು
ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ
ಆಯುಷ್ ಅಧಿಕಾರಿ ಡಾ.ಶಂಕರಗೌಡ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *