ಇಂದು ವರ್ಲ್ಡ್ ಕರಾಟೆ ಡೇ ಈ ಸಮಯದಲ್ಲಿ ಜಪಾನ್ ನ ಒಕಿನಾವಾ ಎಂಬ ದ್ವೀಪದಿಂದ ಆರಂಭವಾದ ಟ್ರೆಡೀಶನಲ್ ಕರಾಟೆ ನಾಲ್ಕು ಬಗೆಯ ಸ್ಟೈಲ್ ಗ ಳಿಂದ ಪ್ರಪಂಚದಾದ್ಯಂತ ನೂರಾರು ವರ್ಷಗಳಿಂದ ತನ್ನದೇ ಆದಂತಹ ಛಾಪನ್ನು ಮೂಡಿಸಿಕೊಂಡು ಬಂದು ನಂತರ ಆಧುನಿಕ ಯುಗದಲ್ಲಿ ಸ್ಪೋರ್ಟ್ಸ್ ಕರಾಟೆಯಾಗಿ ಬದಲಾಗಿ ಪ್ರಪಂಚಾದ್ಯಂತ ಶಾಲಾ ಕಾಲೇಜುಗಳಲ್ಲಿ ಕ್ರೀಡೆಯಾಗಿ ಚಿರಪರಿಚಿತವಾಗಿ ವಿಶ್ವದ ಅತ್ಯುನ್ನತ ಕ್ರೀಡಾಕೂಟವಾದ ಒಲಿಂಪಿಕ್ಸ್ ನಲ್ಲಿ ಸೇರ್ಪಡೆಯಾದ ಹಾದಿಯೂ ಅದ್ಭುತವಾಗಿದು ಇಂದು ವರ್ಲ್ಡ್ ಕರಾಟೆ ಫೆಡರೇಷನ್ 2017 ರಲ್ಲಿ ಜಪಾನ್ ನ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕರಾಟೆಯನ್ನು ಡೆಮೋ ಕ್ರೀಡೆಯಾಗಿ ಸೇರ್ಪಡಿಸಿದ ಅವಿಸ್ಮರಣೀಯ ನೆನಪಿಗಾಗಿ ವರ್ಲ್ಡ್ ಕರಾಟೆ ಡೇ ಎಂದು ಘೋಷಿಸಿದ ದಿನವಾಗಿದ್ದು ಇದನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ ಕರಾಟೆ ಎಂದರೆ ಬರಿಗೈ ನಮ್ಮ ಎದುರಾಳಿಯನ್ನು ಬರಿಗೈನಿಂದ ನಮ್ಮ ಆತ್ಮ ರಕ್ಷಣೆಗಾಗಿ ಎದುರಿಸುವಂತಹ 1 ಆತ್ಮರಕ್ಷಣೆಯ ಕಲೆಯಾಗಿದೆ ಶೋಟೋಕಾನ್ ವಾಡೊ ರೈ ಗುಜು ರೈ ಶಿಟೋ ರೈ ಎಂಬ 4ಪ್ರಮುಖ ಸ್ಟೈಲ್ ಗಳನ್ನು ಹೊಂದಿರುವ ಕರಾಟೆಯ ಮುಖ್ಯ ಉದ್ದೇಶ ಆತ್ಮರಕ್ಷಣೆ ಯನ್ನು ವಿವಿಧ ಬಗೆಗಳಲ್ಲಿ ನೀಡುವುದೂ ಆಗಿದೆ ಇನ್ನೂ ಸ್ಪೋರ್ಟ್ಸ್ ಕರಾಟೆ ವಿಷಯಕ್ಕೆ ಬಂದರೆ ಕಟಾ ಮತ್ತು ಕುಮಿಟಿ ಎಂಬ 2ವಿಭಾಗಗಳಲ್ಲಿ ಕ್ರೀಡಾಪಟುಗಳು ಸ್ಪರ್ಧಿಸುತ್ತಾರೆ ಕಟಾ ವಿಭಾಗವು ಕ್ರೀಡಾಪಟುಗಳಲ್ಲಿ ದೈಹಿಕ ಸದೃಢತೆ ಏಕಾಗ್ರತೆ ಕ್ರಿಯಾಶೀಲತೆ ಮತ್ತು ಆತ್ಮರಕ್ಷಣೆಯ ಕೌಶಲ್ಯಗಳನ್ನು ತಿಳಿಸುವ ಕ್ರೀಡೆಯಾಗಿದು ಕುಮಟಿ ಕ್ರೀಡೆಯು ತೂಕದ ಆಧಾರದ ಮೇಲೆ
ಇಬ್ಬರು ಸ್ಪರ್ಧಿಗಳು ನಿಗದಿತ ಸಮಯದಲ್ಲಿ ನಿಗದಿತ ಭಾಗಗಳಿಗೆ ಅಂಕಗಳನ್ನು ಪಡೆಯಲು ತಮ್ಮ ಶಕ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಎದುರಾಳಿಯ ಮೇಲೆ ಕೌಶಲವನ್ನು ತೋರಿಸುವ ಕ್ರೀಡೆಯಾಗಿದೆ ಇಂದು ಈ ಎರಡೂ ಕ್ರೀಡೆಗಳನ್ನು ಪ್ರಪಂಚದಾದ್ಯಂತ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆಯಾಗಿ ಆಡುತ್ತಿದು ಬಹುಮಾನಗಳನ್ನು ಪಡೆಯುವ ಮುಖಾಂತರ ಮುಂದೆ ಸಾಗುತ್ತಿದ್ದಾರೆ ಕರಾಟೆಯನ್ನು ಒಲಿಂಪಿಕ್ಸ್ ನ ಬಾಗಿಲಿಗೆ ತರುವಲ್ಲಿ ವರ್ಲ್ಡ್ ಕರಾಟೆ ಫೆಡರೇಷನ್ ನ ಕೊಡುಗೆ ಅಪಾರವಾಗಿದೆ ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ತನ್ನದೇ ಆದಂತಹ ರಾಷ್ಟ್ರೀಯ ಕರಾಟೆ ಫೆಡರೇಷನ್ ಗಳನ್ನು ಹೊಂದಿರುವ ವರ್ಲ್ಡ್ ಕರಾಟೆ ಫೆಡರೇಷನ್ ಆ ಮೂಲಕ ಹಲವು ವರ್ಷಗಳಿಂದ ಕರಾಟೆ ಕಾಮನ್ ವೆಲ್ತ್ ಗೇಮ್ಸ್ ಏಷ್ಯನ್ ಗೇಮ್ಸ್ ನಲ್ಲಿ ವಿವಿಧ ದೇಶದ ಕ್ರೀಡಾಪಟುಗಳು ಭಾಗವಹಿಸಲು ಸ್ಫೂರ್ತಿಯಾಗಿದು ಇದೇ ದೇಸಿಯತೆ ಕರ್ನಾಟಕದ ಉದಯೋನ್ಮುಖ ಕ್ರೀಡಾಪಟು ಗಳಾದ ಜಾಗ್ರತ್ ಶರತ್ ಅಮಲ್ ಎಸ್ ಸೂರಜ್ ಸಹ ಇಂತಹ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಬಹುಮಾನ ವನ್ನು ಪಡೆದಿರುತ್ತಾರೆ ಆದರೆ ಪ್ರಪಂಚದ ಅತ್ಯುನ್ನತ ಕ್ರೀಡಾಕೂಟವಾದ ಒಲಿಂಪಿಕ್ಸ್ ನಲ್ಲಿ ಕರಾಟೆಯನ್ನು ಸೇರಿಸಬೇಕು ಎಂದು ವರ್ಲ್ಡ್ ಕರಾಟೆ ಫೆಡರೇಷನ್ ಸಾಕಷ್ಟು ಪ್ರಯತ್ನವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿತ್ತು ವರ್ಲ್ಡ್ ಕರಾಟೆ ಫೆಡರೇಷನ್ ನ ಈ ಶ್ರಮದಿಂದ ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯು ಕರಾಟೆಯನ್ನು 2020 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಹೊಸ 5ಕ್ರೀಡೆಗಳೊಂದಿಗೆ ಡೆಮೋ ಕ್ರೀಡೆಯಾಗಿ ಸೇರ್ಪಡಿಸಿ ನಂತರ ಅದನ್ನು ಶಾಶ್ವತ ಒಲಿಂಪಿಕ್ ಕ್ರೀಡೆಯಾಗಿ ಮಾರ್ಪಡಿಸುವ ಘೋಷಣೆಯನ್ನು ಮಾಡಿ ಅದರಲ್ಲಿ
8ವಿವಿಧ ವಿಭಾಗಗಳಲ್ಲಿ ಕ್ರೀಡಾ ಪಟುಗಳು ಸ್ಪರ್ಧಿಸಲು ಅವಕಾಶ ನೀಡಿದೆ ಆದರೆ ಕರೋನ ಮಹಾಮಾರಿಯಿಂದ 2020 ರ ಒಲಿಂಪಿಕ್ ಕ್ರೀಡಾಕೂಟಗಳು ಅಂದುಕೊಂಡ ಸಮಯದಲ್ಲಿ ನಡೆಯಲಾಗದಿದ್ದರೂ ಮುಂದಿನ ದಿನಗಳಲ್ಲಿ ಒಲಿಂಪಿಕ್ ಕ್ರೀಡೆಗಳು ನಡೆಯಲು ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು ಪ್ರಸ್ತುತ ಈ ಒಲಿಂಪಿಕ್ ಕ್ರೀಡಾ ಕೂಟಗಳಿಗಾಗಿ ವರ್ಲ್ಡ್ ಕರಾಟೆ ಫೆಡರೇಷನ್ ನ ಫ್ರಾನ್ಸ್ ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿದ್ದು ವಿಶ್ವದ ಅತ್ಯುನ್ನತ ಕರಾಟೆ ಸ್ಪರ್ಧಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಕರಾಟೆ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶಗಳು ಮೂಡಿ ಬರಲಿ ಎಂದು ಆಶಿಸೋಣ
ಲೇಖನ
ಶಿವಮೊಗ್ಗ ವಿನೋದ್
ಅಧ್ಯಕ್ಷರು
ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ