ಅರ್ಜಿ ಆಹ್ವಾನ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ
ಕಚೇರಿಯಡಿ ಬರುವ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ
ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು
ಜೂ.23 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ
ನೇರ ಸಂದರ್ಶನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುವುದು.
ಕೋವಿಡ್-19 ಸಾಂಕ್ರಾಮಿಕ ರೋಗದ ನಿರ್ವಹಣೆಗೆ
ಅನುಕೂಲವಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆಯಲಿ ಖಾಲಿ ಇರುವ ಶುಶ್ರೂಷಕರು, ಫಾರ್ಮಸಿಸ್ಟ್
ಹುದ್ದೆಗಳನ್ನು ಸೆ.30 ರವರೆಗೆ ಗುತ್ತಿಗೆ ಆಧಾರದ ಮೇಲೆ
ತಾತ್ಕಾಲಿಕವಾಗಿ ನೇರ ಸಂದರ್ಶನದ ಮೂಲಕ ನೇಮಕ
ಮಾಡಿಕೊಳ್ಳಲು ವೈದ್ಯಕೀಯ ಅಥವಾ ಅರೆ ವೈದ್ಯಕೀಯ ಸಿಬ್ಬಂದಿ
ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶುಶ್ರೂಷಕರು 4 ಹುದ್ದೆ ಖಾಲಿ ಇದ್ದು ತಿಂಗಳಿಗೆ ರೂ.25 ಸಾವಿರ
ವೇತನವಿರುತ್ತದೆ. ಫಾರ್ಮಸಿಸ್ಟ್ 14 ಹುದ್ದೆಗಳಿಗೆ ರೂ.20 ಸಾವಿರ
ವೇತನವಿರುತ್ತದೆ. ಅರ್ಹ ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ
ವಿದ್ಯಾರ್ಹತೆ ಮೂಲ ದಾಖಲೆಗಳು ಮತ್ತು ಪ್ರಮಾಣ ಪತ್ರಗಳೊಂದಿಗೆ
ಹಾಗೂ ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ
ಸಂದರ್ಶನಕ್ಕೆ ಹಾಜರಾಗಬೇಕು.
ಹಾಜರಾಗುವ ಅಭ್ಯರ್ಥಿಗಳು ನೇಮಕವಾಗುವ
ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಸರ್ಕಾರಿ ಸೇವೆಯಲ್ಲಿ
ಸಕ್ರಮಗೊಳಿಸುವುದಿಲ್ಲ. ಅಭ್ಯರ್ಥಿಗಳು ಅರೆವೈದ್ಯಕೀಯ
ಮಂಡಳಿಯಿಂದ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ
ಹಾಜರುಪಡಿಸುವುದು. ಗುತ್ತಿಗೆ ನೇಮಕಾತಿಯು ಸರ್ಕಾರಿ ಆದೇಶಕ್ಕೆ
ಒಳಪಟ್ಟಿರುತ್ತದೆ. ಶುಶ್ರೂಷಕರು ಇಲಾಖೆಯು ನಿಗಧಿಪಡಿಸಿರುವ
ವಿದ್ಯಾರ್ಹತೆ (ಬಿಎಸ್‍ಸಿ/ಜಿಎನ್‍ಎಂ ನರ್ಸಿಂಗ್) ಹೊಂದಿರಬೇಕು ಹಾಗೂ
ಕರ್ನಾಟಕದಲ್ಲಿನ ನೋಂದಣಿ ಪ್ರಾಧಿಕಾರದಲ್ಲಿ
ನೋಂದಣಿಯಾಗಿರಬೇಕು. ನೇಮಕಾತಿಗೊಂಡ ಅಭ್ಯರ್ಥಿಗಳು
ಬಂಧ ಪತ್ರ ಹಾಗೂ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವ
ಷರತ್ತಿಗೆ ಒಳಪಟ್ಟಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು
ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.