ಪ್ರಧಾನಿ ನರೇಂದ್ರ ಮೋದಿ ರವರ ಆಡಳಿತದಲ್ಲಿ ಕರೋನ, ತೈಲಬೆಲೆ, ಆಹಾರ ಪದಾರ್ಥಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆಯನ್ನು ಕಡಿತಗೊಳಿಸದೆ ನರೇಂದ್ರಮೋದಿ ಬೆಲೆಯೇರಿಕೆಯನ್ನು ಹೆಚ್ಚಿಸುತ್ತಿದ್ದಾರೆ ಆದ್ದರಿಂದ ಅವರ ದುರಾಡಳಿತವನ್ನು ಖಂಡಿಸಿ ಬೆಲೆಯೇರಿಕೆಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿ ವಿನೂತನ ಪ್ರತಿಭಟನೆಯನ್ನು ಅವರಿಗೆ (ಪಂದ್ಯ ಪುರುಷೋತ್ತಮ ಪಿಕ್ ಪಾಕೆಟ್ ಕಪ್ ) ಬೆಲೆ ಏರಿಕೆ ಮಾಡಿದ್ದರಿಂದ ಪ್ರಶಸ್ತಿ ನೀಡಿ ಪ್ರತಿಭಟನೆ ನಡೆಸಲಾಯಿತು,
ಪೆಟ್ರೋಲ್ ಡೀಸಲ್ ಬೆಂಗಳೂರು ನಗರದಲ್ಲಿ ನೂರು ರೂ ತಲುಪಿದೆ ಅಡುಗೆ ಎಣ್ಣೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ ಜನಸಾಮಾನ್ಯರು ಬದುಕುವ ಪರಿಸ್ಥಿತಿ ಇಲ್ಲದಂತಾಗಿದೆ ಇಷ್ಟೆಲ್ಲ ಬೆಲೆ ಏರಿಕೆಯಾಗಿದ್ದರೂ ಕಡಿವಾಣ ಹಾಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ ಕೇವಲ ಕಾಟಾಚಾರಕ್ಕಾಗಿ ಆಡಳಿತ ನಡೆಸುತ್ತಿದೆ ಈ ಬೇಜವಾಬ್ದಾರಿ ಸರ್ಕಾರ ತೊಲಗದ ಹೋದರೆ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ತಲುಪುತ್ತದೆ ಕೂಡಲೇ ಬೆಲೆಯೇರಿಕೆಯನ್ನು ಕಡಿತಗೊಳಿಸಬೇಕು ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ಈ ಪ್ರತಿಭಟನೆಯನ್ನು ಗಾಂಧಿ ಪ್ರತಿಮೆ ಕಾಂಗ್ರೆಸ್ ಭವನದ ಬಳಿ ನಡೆಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರುಗಳಾದ ಎಸ್. ಮನೋಹರ್ ಜಿ.ಜನಾರ್ಧನ್ ಎ. ಆನಂದ್ ಈ.ಶೇಖರ್.ಎಂ ಎ ಸಲೀಂ. ಆರ್.ರವಿಶೇಕರ್ ಮಹೇಶ್. ಪುಟ್ಟರಾಜು ಚಂದ್ರಶೇಖರ ಶಶಿಭೂಷಣ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು