ಆಹಾರ ಕಿಟ್ ವಿತರಣೆ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ
ಶುಕ್ರವಾರದಂದು ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ
ಚಿಗಟೇರಿ ಅವರು, ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ
ಸಂಕಷ್ಟಕ್ಕೀಡಾದ ಮತ್ತು ಆಹಾರದ ಅವಶ್ಯಕತೆ ಇದ್ದವರಿಗೆ 100
ಆಹಾರ ಕಿಟ್ (ತಿಂಡಿ), ವಾಟರ್ ಬಾಟಲ್ ಮತ್ತು ಮಾಸ್ಕ್ ಗಳನ್ನು ವಿತರಿಸಿದರು.
ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸ್ಥಾನಿಕ
ಆಯುಕ್ತ ಎ.ಶಿವಪ್ಪ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸ್ಕೌಟ್
ಆಯುಕ್ತ ಎ.ಪಿ.ಷಡಕ್ಷರಪ್ಪ, ಯೂಥ್ ಕಮಿಟಿ ಸದಸ್ಯರಾದ ಅಶ್ವಿನಿ
ಮತ್ತು ನವೀನ್ ರಾಜ್ ಉಪಸ್ಥಿತರಿದ್ದರು.