ಹಬ್ಬಗಳ ಹೆಸರಿನಲ್ಲಿ ಭೂಮಿಯ ಮೇಲೆ,
ಪರಿಸರದ ಮೇಲೆ, ಜೀವ ಸಂಕುಲದ ಮೇಲೆ,
ಬಗೆ ಬಗೆಯ ದಾಳಿ ನಡೆಯುತ್ತದೆ.
ಕರೋನ ಮುಕ್ತಾಯವಾದ ನಂತರ,
ಬರುವ ಹಬ್ಬಗಳನ್ನು ನಾವು ಪರಿಸರ
ಸ್ನೇಹಿಯಾಗಿ ಆಚರಿಸಬೇಕಾಗಿದೆ. ಹಬ್ಬಗಳಲ್ಲಿ
ಪಟಾಕಿ ಸಿಡಿಸುವುದು, ಪ್ಲಾಸ್ಟಿಕ್ ಅಲಂಕಾರಿಕ
ವಸ್ತುಗಳನ್ನ ಬಳಕೆ ಮಾಡುವುದು,
ಬಣ್ಣದ ವಿಗ್ರಹಗಳನ್ನ ನೀರಿಗೆ ಬೀಡುವುದು
ಮಾಡಬಾರದು. ಜಲಮಾಲಿನ್ಯ, ವಾಯುಮಾಲಿನ್ಯ,
ಮಣ್ಣಿನ ಮಾಲಿನ್ಯದ ಬಗ್ಗೆ ಜ್ಞಾನ
ಹೆಚ್ಚಿಸಿಕೊಳ್ಳಬೇಕು. ನಾವು ಆಚರಿಸುವ
ಹಬ್ಬಗಳು ನಮ್ಮ ಆರೋಗ್ಯವನ್ನೇ
ಹಾಳುಮಾಡಬಾರದು, ಅದ್ದರಿಂದ ಈಗೀನಿಂದಲೇ
ನಾವು ಜನರನ್ನ ಜಾಗೃತಗೊಳಿಸಬೇಕಾಗಿದೆ
ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ
ನುಡಿದರು.
ಅವರು ನಗರದ ತರಳಬಾಳು ನಗರದ
ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ
ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ
ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ

“ಹಬ್ಬಗಳು ಪರಿಸರ ಸ್ನೇಹಿಯಾಗಿರಲಿ”
ಜನಜಾಗೃತಿ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಜನರು ಹಿಂದೂಗಳಿರಲಿ, ಮುಸ್ಲಿಮರಿರಲಿ,
ಕ್ರಿಶ್ಚಿಯನ್ಸ್ ಇರಲಿ, ಎಲ್ಲಾ ಹಬ್ಬಗಳನ್ನು ನಾವು
ಪರಿಸರ ಸ್ನೇಹಿಗಳನ್ನಾಗಿ ಆಚರಿಸಬೇಕು.
ಕರೋನ ನಮಗೆ ಪರಿಸರದ ಪಾಠವನ್ನು
ಕಲಿಸಿದೆ, ನಾವು ಆದಷ್ಟು ದೀಪ ಹಚ್ಚುವುದರ
ಮುಖಾಂತರ, ಸಿಹಿ ಹಂಚುವುದರ
ಮುಖಾಂತರ, ಹೆಚ್ಚು ಶಬ್ದ ಮಾಲಿನ್ಯ, ಶಬ್ಧ
ಮಾಲಿನ್ಯ, ಬೆಳಕಿನ ಮಾಲಿನ್ಯ, ನೆಲ ಮಾಲಿನ್ಯ
ಮಾಡದೇ, ಪಟಾಕಿಗಳನ್ನು ಸಿಡಿಸದೇ,
ಗುಂಪು ಸೇರದೆ, ಮಾಸ್ಕ್ ಧರಿಸಿ, ನಾವು
ಹಬ್ಬಗಳನ್ನ ಆಚರಿಸಬೇಕಾಗಿದೆ. ಪಟಾಕಿ
ಸಿಡಿಸಿದಾಗ ವಾಯುಮಂಡಲದಲ್ಲಿ ಹೊಗೆಯ
ವಾಸನೆ ಮತ್ತು ತೇಲು ಕಣಗಳು
ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಆಸ್ತಮಾ,
ಚರ್ಮ ಕಾಯಿಲೆಗಳು, ಉಸಿರಾಟದ ತೊಂದರೆ,
ಹೃದಯ ಸಂಬಂಧಿ ಕಾಯಿಲೆಗಳಿಗೆ
ತುತ್ತಾಗುತ್ತಾರೆ. ಪಟಾಕಿಯ ಮಿಶ್ರಣದಲ್ಲಿ
ಬೇರಿಯಂ, ಕ್ಯಾಡ್ಮಿಯಮ್, ಪಾದರಸದಂಥ
ವಿಷಕಾರಿ ಭಾರಲೋಹಗಳು, ಭಸ್ಮದ
ರೂಪದಲ್ಲಿ ತೇಲು ಕಣಗಳಾಗಿ ವಾತಾವರಣಕ್ಕೆ
ಸೇರುತ್ತವೆ ಎಂದರು.

ಪಟಾಕಿ ತಯಾರು ಮಾಡುವ ಕಾರ್ಖಾನೆಗಳ
ಸುತ್ತಮುತ್ತ ಅಪಾಯಕಾರಿ
ಕೆಮಿಕಲ್ಸ್‍ಗಳು ಬಳಕೆಯಾಗುತ್ತವೆ,
ಕಾಗದದ ಅಂಟು, ಬಣ್ಣ, ಲೋಹದ ತಂತಿ.
ಗಂಧಕ, ರಂಜಕ, ರಾಸಾಯನಿಕಗಳನ್ನು
ದುರ್ಬಳಕೆಯಾಗುತ್ತದೆ. ಪಟಾಕಿ
ಹಚ್ಚುವಾಗ ವಿವಿಧ ರೀತಿಯ ಅಪಘಾತಗಳು,
ಅಗ್ನಿ ದುರಂತಗಳು, ರಸ್ತೆ
ಅಪಘಾತಗಳು ಸಂಭವಿಸುತ್ತವೆ.
ಬಾಣಬಿರುಸುಗಳು ಹೊಗೆ ಸದ್ದಿನಿಂದ ಪ್ರಾಣಿ,
ಪಕ್ಷಿಗಳು ಅತೀವ ಹಿಂಸೆ ಅನುಭವಿಸುತ್ತವೆ.
ಹಬ್ಬ ಆದ ನಂತರ ಉಂಟಾಗುವ ಕಸವನ್ನು
ವಿಲೇವಾರಿ ಮಾಡಲು ವಾರಗಟ್ಟಲೆ
ತಿಂಗಳುಗಟ್ಟಲೆ ಸಮಯ ಹಿಡಿಯುತ್ತದೆ
ಹಾಗಾಗಿ ಈಗ ಮುಂಬರುವ ಎಲ್ಲ ಹಬ್ಬಗಳನ್ನು
ಪರಿಸರ ಸ್ನೇಹಿಯಾಗಿ, ಸರಳವಾಗಿ ಆಚರಿಸಿ,
ಆಡಂಬರವಿಲ್ಲದೆ ಸ್ನೇಹಪೂರ್ವಕವಾದ ಹಬ್ಬ
ಆಚರಿಸಲಿ ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಮ್,
ಕ್ರಿಶ್ಚಿಯನ್, ದೇವರುಗಳ ಚಿಹ್ನೆಗಳನ್ನ,
ಪಟಾಕಿಯಿಂದಾಗುವ ಅನಾಹುತಗಳನ್ನ,
ರಾಮ ಯೇಸು, ಅಲ್ಲಾಹ ಮೂವರನ್ನು
ಸ್ತುತಿಸುವ ಗೀತೆಯನ್ನು ಹಾಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಜಾನವಿ,
ಜೀವಿತ್, ಅಂಶುಲ್, ಹೆಚ್.ಎಸ್.ರಚನ, ಹೆಚ್.ಎಸ್.
ಪ್ರೇರಣ, ಸಂಧ್ಯಾ, ಶಶಿ, ಸವಿತಾ ಸಮಾಜದ

ಸದಸ್ಯ ಶ್ರೀ ಗೋವಿಂದಪ್ಪ, ಶ್ರೀನಿವಾಸ
ಹಾಜರಿದ್ದರು.

Leave a Reply

Your email address will not be published. Required fields are marked *