ಆಹ್ವಾನ

ಜಿಲ್ಲಾ ವ್ಯಾಪ್ತಿಯ 06 ತಾಲ್ಲೂಕುಗಳಲ್ಲಿ ಖಾಲಿ ಇರುವ
ಬಿ.ಐ.ಇ.ಆರ್.ಟಿ(ಪ್ರಾಥಮಿಕ)-02 ಮತ್ತು ಬಿ.ಐ.ಇ.ಆರ್.ಟಿ(ಪ್ರೌಢ)-10 ಹುದ್ದೆಗಳಿಗೆ
ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಆರ್.ಸಿ.ಐ ನಿಯಮದಂತೆ
ವಿಶೇಷ ಡಿ.ಇಡಿ ಮತ್ತು ವಿಶೇಷ ಬಿ.ಇಡಿ ಪದವಿಯ ವಿದ್ಯಾರ್ಹತೆ
ಹೊಂದಿರುವವರನ್ನು 2021-22ನೇ ಸಾಲಿಗೆ ನೇರಗುತ್ತಿಗೆ ಮೂಲಕ
ತಾತ್ಕಾಲಿಕ ಆಯ್ಕೆ ಮಾಡಿಕೊಳ್ಳಲು ಅರ್ಹ ವಿದ್ಯಾರ್ಹತೆಯುಳ್ಳ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿಗಳು
ಮತ್ತು ಪ್ರಮಾಣ ಪತ್ರಗಳು ಮತ್ತು ಆರ್.ಸಿ.ಐ ನೊಂದಣಿ (2021-22
ಸಾಲಿಗೆ) ಪ್ರಮಾಣ ಪತ್ರದೊಂದಿಗೆ ಸ್ವವಿವರವುಳ್ಳ ಮಾಹಿತಿಯನ್ನು
ಜೂ.24ರ ಸಂಜೆ 5 ಗಂಟೆಯೊಳಗೆ ಅಂಚೆ ಅಥವಾ ಮುದ್ದಾಂ
ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ
ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಮಗ್ರ ಶಿಕ್ಷಣ ಕರ್ನಾಟಕ,
ಸಾರ್ವಜನಿಕ ಶಿಕ್ಷಣ ಇಲಾಖೆ ಅಂಬೇಡ್ಕರ್ ವೃತ್ತ ದಾವಣಗೆರೆ-577002 ಇಲ್ಲಿಗೆ
ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9448999394, ದೂ.ಸಂ: 08192-
296445 ಕ್ಕೆ ಸಂಪರ್ಕಿಸಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ
ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ
ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *