ಶಿವಮೊಗ್ಗ: ನಗರದ ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ನಗರದ
ಕುವೆಂಪು ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರು ಹಾಗೂ ಚಾಲಕರ ಸಂಘದ
ಸದಸ್ಯರಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.
ಪ್ರೇರಣಾ ಎಜುಕೇಶನ್ ಟ್ರಸ್ಟ್ ಹಾಗೂ ಸೇವಾ ಭಾರತಿ ಸಹಯೋಗದಲ್ಲಿ ಸಂಸದ
ಬಿ.ವೈ.ರಾಘವೇಂದ್ರ ಅವರು ನೀಡಿದ್ದ ಕಿಟ್ ಗಳನ್ನು ವಿತರಣೆ
ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಕೃಷ್ಣೇ ಶೆಟ್ಟರು,
ರುದ್ರಮೂರ್ತಿ, ಅಧ್ಯಕ್ಷ ಸತೀಶ ಪೂಜಾರಿ, ಉಪಾಧ್ಯಕ್ಷ ವೆಂಕಟೇಶ,
ಪ್ರಧಾನ ಕಾರ್ಯದರ್ಶಿ ರವಿ ಕೋಣೆಗದ್ದೆ ಇನ್ನಿತರರು ಉಪಸ್ಥಿತರಿದ್ದರು.
ಕೊರೋನ ಸಂಕಷ್ಟ ಕಾಲದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ
ಪ್ರಜ್ಞೆಯೊಂದಿಗೆ ಸಂಘದ ಸದಸ್ಯರಿಗೆ ಆಹಾರ ಕಿಟ್ ನೀಡಿದ್ದಕ್ಕೆ ಸಂಘ
ಸಂಸದ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದೆ.