ಹೃದ್ರೋಗಿಗಳಿಗೆ ಕರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು. ಕರೊನಾ ಸೋಂಕಿಗೆ ಒಳಗಾದವರಲ್ಲಿ ಶೇ.5 ಜನರಿಗೆ ಹೃದಯದ ಶಕ್ತಿ ಕಡಿಮೆಯಾಗುವ ಸಾಧ್ಯತೆಗಳಿವೆ. ಯಾವುದೇ ಸೋಂಕಿತರು ಕರೊನಾದಿಂದ ಗುಣಹೊಂದಿದ ನಂತರವೂ ಒಮ್ಮೆ ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಹೃದಯ ಸಮಸ್ಯೆ ಇರುವವರು ಸೋಂಕಿನಿಂದ ಗುಣಹೊಂದಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರ ಸಲಹೆ ಪಡೆದು ಎರಡು ತಿಂಗಳ ಕಾಲ ಬ್ಲಡ್ ತಿನ್ನಿಂಗ್ (ರಕ್ತ ಮೆದುಗೊಳಿಸುವಿಕೆ) ಔಷಧ ಸೇವಿಸಬೇಕು. ಏಕೆಂದರೆ ಹೃದಯ ರಕ್ತನಾಳದಲ್ಲಿ ಹೆಪ್ಪುಗಟ್ಟುವುದರಿಂದ ಹೃದಯಾಘಾತ ಆಗುವ ಸಾಧ್ಯತೆಗಳು ಹೆಚ್ಚು. ಮಿದುಳಿನಲ್ಲಿ ರಕ್ತ ಹೆಪ್ಪು ಗಟ್ಟಿದರೆ ಸ್ಟೋಕ್ ಆಗುತ್ತದೆ. ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದರೆ ಉಸಿರಾಟದ ತೀವ್ರ ಸಮಸ್ಯೆ ಉಂಟಾಗುತ್ತದೆ. ಇನ್ನು ಕಾಲಿನಲ್ಲಿ ನರ (ವೇನ್ಸ್) ದಪ್ಪವಾಗಿ ನೋವು ಕಾಣಿಸಿಕೊಂಡರೆ ಆಗಲೂ ಬ್ಲಡ್ ತಿನ್ನಿಂಗ್ ಔಷಧ ಸೇವಿಸಬೇಕು.
| ಡಾ. ಸಿ.ಎನ್. ಮಂಜುನಾಥ್
ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ