ಫ್ರಂಟ್ ಲೈನ್ ವರ್ಕರ್ಸ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಜೂನ್ 21
ರ ಸೋಮವಾರದಿಂದ ಲಸಿಕೆ ನೀಡುವ ಮೂಲಕ ಲಸಿಕೆ ಮೇಳವನ್ನು
ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ
ಶುಕ್ರವಾರ ನಡೆದ ವಿಶೇಷ ಲಸಿಕಾ ಮೇಳದ ಸಿದ್ಧತಾ ಸಭೆಯಲ್ಲಿ
ಮಾತನಾಡಿದ ಅವರು 45 ವರ್ಷ ಮೇಲ್ಪಟ್ಟ 2ನೇ ಡೋಸ್ ಪಡೆಯಲು
ಅರ್ಹರಿರುವ ಎಲ್ಲರಿಗೂ ಲಸಿಕೆ ನೀಡಬೇಕು ಹಾಗೂ 45 ವರ್ಷ ಮೇಲ್ಪಟ್ಟ
ಮೊದಲ ಡೋಸ್ ಪಡೆಯದವರಿಗೂ ಲಸಿಕೆ ನೀಡುವುದು ಹಾಗೂ
ಫ್ರಂಟ್ ಲೈನ್ ವರ್ಕರ್ಸ್‍ಗಳು ಲಸಿಕೆ ನೀಡಬೇಕು.
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮೊದಲ ಡೋಸ್
ಪಡೆದಿರುವವರಿಗೆ ಫೋನ್ ಮುಖಾಂತರ ಅಥವಾ ಎಸ್.ಎಂ.ಎಸ್
ಕಳುಹಿಸುವ ಮೂಲಕ ಲಸಿಕೆ ಪಡೆಯಲು ಪ್ರೇರೇಪಿಸಬೇಕು
ಹಾಗೂ ಪಂಚಾಯತ್, ರೆವಿನ್ಯೂ ಸಿಬ್ಬಂದಿ ಲಸಿಕಾರಣ ಯಶಸ್ವಿಯಾಗಲು
ಜಾಗೃತಿ ಮೂಡಿಸಬೇಕು ಎಂದರು.
ಲಸಿಕಾ ಮೇಳದಲ್ಲಿ ಆದ್ಯತಾ ವಲಯದ ಎಲ್ಲರಿಗೂ ಲಸಿಕಾ
ನೀಡಬೇಕು ಮತ್ತು ಹೆಚ್ಚು ಹೆಚ್ಚು ಟೆಸ್ಟ್‍ಗಳನ್ನು ಮಾಡುವ
ಮೂಲಕ ಸೋಂಕಿತರನ್ನು ಬೇಗ ಪತ್ತೆ ಹಚ್ಚುವ ಕೆಲಸ
ಆಗಬೇಕು.
3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಸೋಂಕು ತಗಲುವ
ಸಂಭವವಿದ್ದು ದುರ್ಬಲ ವರ್ಗದ ಮಕ್ಕಳ ಪೋಷಕರಿಗೂ
ಆದ್ಯತೆಯ ಮೇಲೆ ಲಸಿಕೆ ನೀಡಬೇಕು. ಡೆತ್ ಪ್ಯಾಕೆಟ್ ಹೆಚ್ಚು
ಕಂಡು ಬರುತ್ತಿರುವ ಕಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ
ಸಂಪರ್ಕಿತರನ್ನು ಟೆಸ್ಟ್ ಮಾಡಬೇಕು ಎಂದರು.
ಸಭೆಯಲ್ಲಿ ಸಿಇಓ ವಿಜಯ ಮಹಾಂತೇಶ ದಾನಮ್ಮನವರ್,
ಉಪವಿಭಾಗಧಿಕಾರಿ ಮಮತ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್
ಮುದಜ್ಜಿ, ಡಿಹೆಚ್‍ಓ ಡಾ.ನಾಗರಾಜ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ,
ಡಾ.ನಟರಾಜ್, ಡಾ.ರೇಣುಕಾರಾಧ್ಯ, ತಾಲೂಕು ಟಿಹೆಚ್‍ಓಗಳು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *